ಮಡಿಕೇರಿ, ಅ. ೧೨: ಇತ್ತೀಚೆಗೆ ಗೋಲ್ಡನ್ ಬೀ ಗ್ಲೋಬಲ್ ಶಾಲಾ ವತಿಯಿಂದ ಬೆಂಗಳೂರಿನ ಹೊರಮಾವು ಆವರಣದಲ್ಲಿ ನಡೆಸಿದ ಸ್ಪೀಡ್ ಸ್ಕೇಟಿಂಗ್ ಸ್ಪರ್ಧೆಯಲ್ಲಿ ಕುಶಾಲನಗರದ ಏಂಜೆಲ್ಸ್ ವಿಂಗ್ಸ್ ಸಂಸ್ಥೆಯ ವಿದ್ಯಾರ್ಥಿಗಳಾದ ಲಿಯೋನಲ್ ಲೂಕ್ ಡಿಸೋಜಾ, ದಿತ್ತಿ÷್ವ ರಾಮ್ ೧೦ ವರ್ಷದ ಒಳಗಿನ ವಯೋಮಿತಿ ಸ್ಪರ್ಧೆಯಲ್ಲಿ ಪಾಲ್ಗೊಂಡು ೪ ನೇ ಸ್ಥಾನ ಗಳಿಸಿದ್ದಾರೆ.

೧೨ ವರ್ಷದ ಒಳಗಿನ ವಯೋಮಿತಿಯ ಹೆಣ್ಣು ಮಕ್ಕಳ ಸ್ಪರ್ಧೆಯಲ್ಲಿ ಸಾಧನಾ ತೊರೆನೂರ್ ಭಾಗವಹಿಸಿ ಮೊದಲನೇ ಸ್ಥಾನದೊಂದಿಗೆ ಚಿನ್ನದ ಪದಕವನ್ನು ಗಳಿಸಿದ್ದಾಳೆ. ೧೪ ವರ್ಷದೊಳಗಿನ ಹೆಣ್ಣು ಮಕ್ಕಳ ವಿಭಾಗದಲ್ಲಿ ಧನ್ವಿತ ಈ.ಡಿ ಎರಡನೇ ಸ್ಥಾನಗಳಿಸಿ ಬೆಳ್ಳಿಯ ಪದಕವನ್ನು ಹಾಗೂ ಗಂಡು ಮಕ್ಕಳ ವಿಭಾಗದಲ್ಲಿ ಪ್ರೀತಂ ಜಿ.ಹೆಚ್ ಭಾಗವಹಿಸಿ ತೃತೀಯ ಸ್ಥಾನ ಪಡೆದು ಕಂಚಿನ ಪದಕಕ್ಕೆ ಭಾಜನರಾಗಿದ್ದಾರೆ. ಇವರುಗಳು ರೋಲರ್ ಸ್ಕೇಟಿಂಗ್ ಹಾಗೂ ಬ್ಯಾಂಡಿ (ಐಸ್‌ಬಾಲ್ ಹಾಕಿ) ಕೋಚ್‌ಗಳಾದ ಅನೂಪ್ ಡಿಸೋಜಾ ಮತ್ತು ಸಾವಿiಯೋ ಅವರ ನೇತೃತ್ವದಲ್ಲಿ ತರಬೇತಿ ಪಡೆಯುತ್ತಿದ್ದಾರೆ.