ಮಡಿಕೇರಿ, ಅ. ೧೨: ೧೦೦ ವರ್ಷ ಪೂರೈಸಿ ಶತಾಬ್ದಿ ಸಂಭ್ರಮದಲ್ಲಿರುವ ರಾಷ್ಟಿçÃಯ ಸ್ವಯಂಸೇವಕ ಸಂಘದ ವತಿಯಿಂದ ಮಡಿಕೇರಿ ನಗರದಲ್ಲಿ ವಿಜಯದಶಮಿ ಪಥಸಂಚಲನ ನಡೆಯಿತು. ೧೭೦೦ಕ್ಕೂ ಹೆಚ್ಚು ಆರ್.ಎಸ್.ಎಸ್. ಗಣವೇಷಧಾರಿಗಳು ನಗರದ ಪ್ರಮುಖ ಬೀದಿಗಳಲ್ಲಿ ಶಿಸ್ತುಬದ್ಧ ಹೆಜ್ಜೆಹಾಕಿ ಗಮನ ಸೆಳೆದರು.
ಮೊದಲಿಗೆ ಜಿಲ್ಲೆಯ ವಿವಿಧೆಡೆಗಳಿಂದ ಆಗಮಿಸಿದ್ದ ಸ್ವಯಂಸೇವಕರು ನಗರದ ಜ. ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ಜಮಾವಣೆಗೊಂಡು ಪ್ರತಿ ವಾಹಿನಿಗಳ ಗುಂಪು ರಚಿಸಿ ಸರತಿ ಸಾಲಿನಲ್ಲಿ ನಿಂತರು. ಬಳಿಕ ಧ್ವಜಾರೋಹಣ ನೆರವೇರಿತು. ಈ ಸಂದರ್ಭ ಪ್ರಣಾಮ್ ಸಲ್ಲಿಸಿ ಒಬ್ಬರ ಹಿಂದೆ ಒಬ್ಬರಂತೆ ಗಣವೇಷಧಾರಿಗಳು ಕೈಯಲ್ಲಿ ದಂಡ ಹಿಡಿದು ಶಿಸ್ತುಬದ್ಧ ಹೆಜ್ಜೆ ಹಾಕುತ್ತ ಮುಖ್ಯಬೀದಿಗಳಲ್ಲಿ ಮೆರವಣಿಗೆ ಆರಂಭಿಸಿದರು.
ಜ. ತಿಮ್ಮಯ್ಯ ಕ್ರೀಡಾಂಗಣದಿAದ ಇಂದಿರಾಗಾAಧಿ ವೃತ್ತ, ಗಣಪತಿ ಬೀದಿಯಾಗಿ ಮಹದೇವಪೇಟೆ ಕಡೆಯಿಂದ ಅಜ್ಜಮಾಡ ದೇವಯ್ಯ ವೃತ್ತ ಸಾಗಿ ನಂತರ ಜ. ತಿಮ್ಮಯ್ಯ ವೃತ್ತದಿಂದ ಗಾಂಧಿ ಮೈದಾನಕ್ಕೆ ತೆರಳಿ ಪಥಸಂಚಲನವನ್ನು ಕೊನೆಗೊಳಿಸಲಾಯಿತು.
ಪುಷ್ಪವೃಷ್ಟಿಯ ಸ್ವಾಗತ
ಪಥಸಂಚಲನ ಮಾಡಿಕೊಂಡು ಬಂದ ಸ್ವಯಂ ಸೇವಕರಿಗೆ ಹೂವಿನ ಮಳೆಗೈದು ಜನರು ಸ್ವಾಗತಿಸಿಕೊಂಡರು ಮುಖ್ಯಬೀದಿಯಲ್ಲಿ ಮೆರವಣಿಗೆ ಸಾಗಿ ಬರುವಾಗ ಅವರ ಮೇಲೆ ಹೂ ಹಾಕಿ ಸ್ವಾಗತಿಸಿಕೊಳ್ಳಲಾಯಿತು. ಪಥಸಂಚಲನದಲ್ಲಿ ನಾಲ್ಕು ವರ್ಷದ ಮಕ್ಕಳಿಂದ ೬೦-೭೦ ವರ್ಷದ ಹಿರಿಯರು ಕೂಡ ಪಾಲ್ಗೊಂಡಿದ್ದರು. ೪ಐದÀನೇ ಪುಟಕ್ಕೆ ಬಾಲ ಸ್ವಯಂ ಸೇವಕರು ಕೂಡ ಭಾಗವಹಿಸಿ ಗಮನ ಸೆಳೆದರು. ಗಾಂಧಿ ಮೈದಾನದಲ್ಲಿ ಆರ್.ಎಸ್.ಎಸ್. ಪ್ರಾರ್ಥನೆಯೊಂದಿಗೆ ಪಥಸಂಚಲನವನ್ನು ಮುಕ್ತಾಯ ಗೊಳಿಸಲಾಯಿತು.
ಪ್ರಮುಖರು ಭಾಗಿ
ಈ ಸಂದರ್ಭ ಆರ್.ಎಸ್.ಎಸ್.ನ ಜಿಲ್ಲಾ ಸಂಘ ಚಾಲಕ್ ಚಕ್ಕೇರ ಮನು ಕಾವೇರಪ್ಪ, ಜಿಲ್ಲಾ ಕಾರ್ಯವಾಹ ರವಿ ಕುಶಾಲಪ್ಪ, ಸಹ ಕಾರ್ಯವಾಹ ಕುಟ್ಟಂಡ ಮಿರನ್ ಕಾವೇರಪ್ಪ, ಮಂಗಳೂರು ವಿಭಾಗ ಸಹ ಕಾರ್ಯವಾಹ ಸುಭಾಷ್, ವಿಭಾಗ ಶಾರೀರಿಕ್ ಪ್ರಮುಖ್ ಡಿ.ಕೆ ಡಾಲಿ, ವಿಭಾಗ ಸಹ ಸಂಪರ್ಕ ಪ್ರಮುಖ್ ಕುಟ್ಟಂಡ ಪ್ರಿನ್ಸ್ ಗಣಪತಿ, ಜಿಲ್ಲಾ ಪ್ರಮುಖರಾದ ಕೆ.ಕೆ. ದಿನೇಶ್ ಕುಮಾರ್, ಕೆ.ಕೆ. ಮಹೇಶ್ ಕುಮಾರ್, ಅರುಣ್ ಕುಮಾರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಚಲನ್ ಕುಮಾರ್ ಹಾಗೂ ನೂರಾರು ಸ್ವಯಂಸೇವಕರು ಇದ್ದರು. ಮಾಜಿ ಶಾಸಕ ಕೆ.ಜಿ. ಬೋಪಯ್ಯ ಅವರು ಗಣವೇಷಧಾರಿಯಾಗಿ ಪಥಸಂಚಲನ ಸಂದರ್ಭ ಜ. ತಿಮ್ಮಯ್ಯ ಕ್ರೀಡಾಂಗಣಕ್ಕೆ ಆಗಮಿಸಿ ಶುಭಕೋರಿದರು. ಬಿಜೆಪಿ ಜಿಲ್ಲಾಧ್ಯಕ್ಷ ನಾಪಂಡ ರವಿಕಾಳಪ್ಪ, ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಪಳೆಯಂಡ ರಾಬಿನ್ ದೇವಯ್ಯ ಸೇರಿದಂತೆ ನಗರಸಭೆ, ಗ್ರಾಮ ಪಂಚಾಯಿತಿ ಜನಪ್ರತಿನಿಧಿಗಳು, ವಿವಿಧ ಸಂಘ ಸಂಸ್ಥೆಗಳ ಮುಖ್ಯಸ್ಥರು ಭಾಗವಹಿಸಿದ್ದರು.