ವೀರಾಜಪೇಟೆ, ಅ. ೧೨: ಕೊಡವ ಮುಸ್ಲಿಂ ಸಮುದಾಯ ಸಣ್ಣ ಜನಾಂಗವಾದರೂ ವಿಶೇಷ ಜನಾಂಗವಾಗಿ ಗುರುತಿಸಿಕೊಂಡು ತಮ್ಮ ಎಲ್ಲಾ ಆಚಾರ ವಿಚಾರಗಳನ್ನು ಸಂಸ್ಕೃತಿಯನ್ನು ಉಳಿಸಿಕೊಂಡು ಬೆಳೆಸಿಕೊಂಡು ಬರುತ್ತಿದೆ ಎಂದು ವೀರಾಜಪೇಟೆ ಕ್ಷೇತ್ರದ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಎ.ಎಸ್ ಪೊನ್ನಣ್ಣ ಹೇಳಿದರು.
ವೀರಾಜಪೇಟೆಯ ಸೇಂಟ್ ಅನ್ಸ್ ಪ್ಯಾರಿಶ್ ಹಾಲ್ ಸಭಾಂಗಣದಲ್ಲಿ ಕೊಡವ ಮುಸ್ಲಿಂ ಅಸೋಸಿಯೇಷನ್ ವತಿಯಿಂದ ಆಯೋಜಿಸಿದ್ದ ಕೊಡವ ಮುಸ್ಲಿಂ ಶಿಕ್ಷಣ ನಿಧಿಯ ಕೆ.ಎಂ.ಎ ಪ್ರತಿಭಾ ಪುರಸ್ಕಾರ-೨೦೨೫ರ ವಿತರಣೆ ಮತ್ತು ಸಾಧಕರಿಗೆ ಸನ್ಮಾನ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಅವರು ಈ ಸಮುದಾಯ ವಿದ್ಯಾಭ್ಯಾಸಕ್ಕೆ ಒತ್ತು ನೀಡುತ್ತಿರುವುದು ಶ್ಲಾಘನೀಯ ಎಂದ ಅವರು, ಈಗ ನಡೆಯುತ್ತಿರುವ ಶೈಕ್ಷಣಿಕ ಸಾಮಾಜಿಕ ಸಮೀಕ್ಷೆಯಲ್ಲಿ ತಪ್ಪದೆ ಭಾಗವಹಿಸಬೇಕು. ಇದರಿಂದ ನೈಜವಾದ ಹಿಂದುಳಿದ ವರ್ಗದವರನ್ನು ಗುರುತಿಸಲು ಸಹಕಾರಿಯಾಗಲಿದೆ. ನೀವು ನಿಮ್ಮ ಜನಾಂಗದ ಅಸ್ತಿತ್ವವನ್ನು ಉಳಿಸುವ ಕೆಲಸ ಮಾಡಬೇಕು. ಅದು ಕಳೆದು ಹೋದರೆ ಮತ್ತೆ ಗಳಿಸಲು ಕಷ್ಟ ಎಂದು ಪೊನ್ನಣ್ಣ ಹೇಳಿದರು.
ವಿಶೇಷ ಅತಿಥಿಗಳಾಗಿದ್ದ ಅರಮೇರಿ ಕಳಂಚೇರಿ ಮಠದ ಪಿಠಾಧಿಪತಿಗಳಾದ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಮಾತನಾಡಿ ಹೆಣ್ಣು ಮಕ್ಕಳೇ ಹೆಚ್ಚಿನ ಅಂಕ ಗಳಿಸಿರುವುದು ಪ್ರಶಂಸನೀಯ. ಹಿಂದಿನ ಕಾಲದಲ್ಲಿ ಹೆಣ್ಣು ಮಕ್ಕಳಿಗೆ ಈ ರೀತಿಯ ಅವಕಾಶ ಇರಲಿಲ್ಲ. ಇಂದು ಸಾಮಾಜಿಕ ವ್ಯವಸ್ಥೆಯ ಮುಂಚೂಣಿಯಲ್ಲಿ ಹೆಣ್ಣು ಮಕ್ಕಳಿರುವುದಕ್ಕೆ ಕಾರಣ ಶಿಕ್ಷಣ. ಶಿಕ್ಷಣ ಅತ್ಯಂತ ಮುಖ್ಯ. ಆಂತರಿಕವಾಗಿ ವಿಕಸನವಾಗಲು ಶಿಕ್ಷಣ ಬೇಕು ಎಂದರು. ೪ಐದÀನೇ ಪುಟಕ್ಕೆ ಸಾಂಪ್ರದಾಯಿಕ ದಫ್ ಬಾರಿಸುವ ಮೂಲಕ ಉದ್ಘಾಟಿಸಿದ ರಾಜ್ಯ ಉಚ್ಚ
ನ್ಯಾಯಾಲಯದ ವಕೀಲರಾದ ಕುವೇಂಡ ಹೆಚ್ ಹಿದಾಯತುಲ್ಲಾ ಮಾತನಾಡಿ, ನಮ್ಮ ಸಮುದಾಯ ಇಂದಿಗೂ ನಮ್ಮ ವಿಶೇಷ ಸಂಸ್ಕೃತಿ ಧಾರ್ಮಿಕತೆಯನ್ನು ಮಿಳಿತವಾಗಿಸಿಕೊಂಡು ಬಂದಿದೆ. ವಿದ್ಯಾರ್ಥಿಗಳ ಶಿಕ್ಷಣದಲ್ಲಿನ ಸಾಧನೆ ನಮ್ಮ ಸಮುದಾಯವನ್ನು ಗಟ್ಟಿಗೊಳಿಸುತ್ತದೆ. ಸಾಂಸ್ಕೃತಿಕ ಮೌಲ್ಯ ಬೆಳೆಸಿಕೊಂಡಾಗ ನಮ್ಮ ಜನಾಂಗಕ್ಕೂ ಅದು ಉತ್ತಮ ಮೌಲ್ಯ ತರುತ್ತದೆ. ವಿದ್ಯಾರ್ಥಿಗಳು ತಮ್ಮ ಸಾಧನೆಯ ಹಾದಿಯಲ್ಲಿ ಯಾವುದೇ ಅಡೆ ತಡೆ ಇದ್ದರೂ ದಿಟ್ಟವಾಗಿ ಗುರಿಯತ್ತ ಮುನ್ನಡೆಯಬೇಕು ಎಂದರು. ಪೋಷಕರು ಮಕ್ಕಳಿಗೆ ನೀಡುವ ಪ್ರೋತ್ಸಾಹಕ್ಕೆ ಮಕ್ಕಳ ಸಾಧನೆಯೇ ಗೌರವವಾಗಲಿದೆ. ಸರಕಾರದ ಶೈಕ್ಷಣಿಕ ಸಾಮಾಜಿಕ ಸಮೀಕ್ಷೆಯಲ್ಲಿ ಕೊಡವ ಮುಸ್ಲಿಂ ಎಂದು ದಾಖಲಿಸಿ ಎಂದರು.
ಕೊಡವ ಮುಸ್ಲಿಂ ಅಸೋಸಿಯೇಷನ್ ಅಧ್ಯಕ್ಷ ದುದ್ದಿಯಂಡ ಹೆಚ್ ಸೂಫಿ ಹಾಜಿ ಅಧ್ಯಕ್ಷತೆ ವಹಿಸಿ ಪ್ರಸ್ತಾವಿಕವಾಗಿ ಮಾತನಾಡಿದರು. ಸಮಾರಂಭದಲ್ಲಿ ವ್ಯಕ್ತಿತ್ವ- ಕಲಿಕೆ-ಪ್ರೇರಣಾ ತರಬೇತಿದಾರರು ಮತ್ತು ಶಿಕ್ಷಣ ತಜ್ಞರಾದ ಮೈಸೂರಿನ ಆರ್.ಎ ಚೇತನರಾಮ್ ದಿಕ್ಸೂಚಿ ಭಾಷಣ ಮಾಡಿದರು. ವೇದಿಕೆಯಲ್ಲಿ ಪ್ರಧಾನಮಂತ್ರಿಗಳ ೧೫ ಅಂಶಗಳ ಕಾರ್ಯಕ್ರಮದ ಜಿಲ್ಲಾ ಅನುಷ್ಠಾನ ಸಮಿತಿಯ ಸದಸ್ಯ ಪಟ್ಟಿಯಂಡ ಎ. ಹನೀಫ್, ಸಮಿತಿಯ ಹಿರಿಯ ಉಪಾಧ್ಯಕ್ಷ ಡಾ ಜೋಯಿಪೆರ ಎ.ಕುಂಞಬ್ದುಲ್ಲಾ ಉಪಾಧ್ಯಕ್ಷ ಅಕ್ಕಳತಂಡ ಮೊಯ್ದು, ಪ್ರಧಾನ ಕಾರ್ಯದರ್ಶಿ ಈತಲತಂಡ ರಫೀಕ್ ತೂಚಮಕೇರಿ, ಸಮಿತಿಯ ಕೋಶಾಧಿಕಾರಿ ಹರಿಶ್ಚಂದ್ರ ಎ. ಹಂಸ, ಇಸ್ಮಾಯಿಲ್ ಮತ್ತಿತರರು ಉಪಸ್ಥಿತರಿದ್ದರು. ಈ ಸಾಲಿನಲ್ಲಿ ೨೯ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಶತಾಯಿಷಿ ಕೂವಲೇರ ಹುಸೇನ್ ಹಾಜಿ (೧೦೨) ಸೇರಿದಂತೆ ಹಿರಿಯ ಸಾಧಕರನ್ನು ಈ ಸಂದರ್ಭ ಸನ್ಮಾನಿಸಲಾಯಿತು.