ಮಡಿಕೇರಿ, ಅ. ೧೨: ಕುಶಾಲನಗರ ಕೊಡಗು ಹೆಗ್ಗಡೆ ಕ್ಷೇಮಾಭಿವೃದ್ದಿ ಸಂಘದ ವಾರ್ಷಿಕ ಮಹಾಸಭೆ ಮತ್ತು ಕೈಲ್ ಮಹೂರ್ತ ಹಬ್ಬದ ಒತ್ತೋರ್ಮೆ ಕೂಟವು ಕುಶಾಲನಗರ ಕೇರಳ ಸಮಾಜದಲ್ಲಿ ಸಂಘದ ಅಧ್ಯಕ್ಷರಾದ ಚಳಿಯಂಡ ಯಶ್ವಥ್ ಅಚ್ಚಯ್ಯ ಅಧ್ಯಕ್ಷತೆಯಲ್ಲಿ ನಡೆಯಿತು.
ಮುಂಬರುವ ವರ್ಷಗಳಲ್ಲಿ ಸಮಾಜಕ್ಕೆ ನಿವೇಶನ ಖರೀದಿಸಿ ಆ ನಿವೇಶನದಲ್ಲಿ ಸುಸಜ್ಜಿತ ಸಮುದಾಯ ಭವನವನ್ನು ನಿರ್ಮಿಸಲು ಸಲಹೆಗಳು ಕೇಳಿಬಂದವು. ಶೈಕ್ಷಣಿಕ ಮತ್ತು ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಿದ ಜನಾಂಗದವರನ್ನು ಗುರುತಿಸಿ ಸನ್ಮಾನಿಸಲಾಯಿತು.
ಮುಖ್ಯ ಅತಿಥಿಗಳಾಗಿ ಮಡಿಕೇರಿ ಪ್ರಾದೇಶಿಕ ಸಾರಿಗೆ ಇಲಾಖೆಯ ಬ್ರೇಕ್ ಇನ್ಸ್ಪೆಕ್ಟರ್ ಪೊಕ್ಕಳಿಚಂಡ ಮೋಹನ್ ಕುಮಾರ್, ಕುಶಾಲನಗರ ಜೆ.ಸಿ.ಐ ಅಧ್ಯಕ್ಷ ತಂಬAಡ ತೇಜ ದಿನೇಶ್ ಭಾಗವಹಿಸಿದ್ದರು. ಸಂಘದ ಉಪಾಧ್ಯಕ್ಷ ಚಂಗಚAಡ ಸುಬ್ರಮಣಿ, ಕಾರ್ಯದರ್ಶಿ ಪಂದಿಕAಡ ವಿಠ್ಠಲ, ಮಂಡೇಡ ದೀಪಕ್, ಖಜಾಂಚಿಗಳಾದ ಕೊಂಗೆಪAಡ ನಂಜಪ್ಪ, ನಿರ್ದೇಶಕರುಗಳಾದ ಪುದಿಯತಂಡ ಬೆಳ್ಳಿಯಪ್ಪ, ಪುದಿಯತಂಡ ಗಾಂಧಿ, ಕಾಟಿಕುಟ್ಟೀರ ಮೊಣ್ಣಪ್ಪ, ಮೇಲತಂಡ ಮಂಜುಳ, ಪೊಕ್ಕಳಿಚಂಡ ಲಲಿತ ಚಂಗಚAಡ ನಂಜಪ್ಪ, ಮಂಡೇಯAಡ ಪಳಂಗಪ್ಪ, ಪ್ರಮುಖರಾದ ಕೊಂಗೆಪAಡ ಶಶಿ ಬೀಮಯ್ಯ, ಪಡಿಞರಂಡ ಪ್ರಭು ಕುಮಾರ್, ಕೊಪ್ಪಡ ಪಳಂಗಪ್ಪ, ಪಾನಿಕುಟ್ಟೀರ ಕುಟ್ಟಪ್ಪ, ಕೊಕ್ಕೇರ ಜಗನ್ನಾಥ್, ತಂಬAಡ ಮಂಜುನಾಥ್, ಕೊಂಗೆಪ್ಪAಡ ರವಿ, ಚಳಿಯಂಡ ಕಮಲ, ಪಂದಿಕAಡ ಈಶ್ವರ್ ಚಳಿಯಂಡ ಅಚ್ಚಯ್ಯ ಮುಂತಾದವರು ಹಾಜರಿದ್ದರು.