ವೀರಾಜಪೇಟೆ, ಅ. ೨೦: ಬಾಳುಗೋಡುವಿನ ಕೊಡವ ಸಾಂಸ್ಕೃತಿಕ ಕೇಂದ್ರದಲ್ಲಿ ಕೊಡವ ಸಮಾಜಗಳ ಒಕ್ಕೂಟದ ಆಶ್ರಯದಲ್ಲಿ ನವೆಂಬರ್ ೯ ರಂದು ೯.೩೦ ಗಂಟೆಗೆ ರಾಷ್ಟçಮಟ್ಟದ ಕೊಡವ ನಮ್ಮೆಯ ಸಾಂಸ್ಕೃತಿಕ ಸ್ಪರ್ಧೆಯನ್ನು ನಡೆಸಲಾಗುವುದು ಎಂದು ಸಾಂಸ್ಕೃತಿಕ ಸಮಿತಿ ಅಧ್ಯಕ್ಷ ಕಾಳಿಮಾಡ ಮೋಟಯ್ಯ ಹೇಳಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಕೋಲಾಟ್, ಬಾಳೋಪಾಟ್, ಕತ್ತಿಯಾಟ್, ಬೊಳಕಾಟ್, ಉಮ್ಮತಾಟ್, ಪರಿಯಕಳಿ, ಸಂಬAಧ ಅಡಕುವೋ, ತಾಲಿಪಾಟ್ ಸ್ಪರ್ಧೆ ನಡೆಯಲಿದೆ. ಸ್ಪರ್ಧೆಗಳು ಕೊಡವ ಸಮಾಜಗಳ ನಡುವೆ ನಡೆಯಲಿರುವುದರಿಂದ ಪ್ರತಿ ಸ್ಪರ್ಧೆಗೆ ಪ್ರತಿ ಕೊಡವ ಸಮಾಜದಿಂದ ಒಂದು ತಂಡ ಮಾತ್ರ ಭಾಗವಹಿಸಬಹುದಾಗಿದೆ. ಈ ಸ್ಪರ್ಧೆಯಲ್ಲಿ ಭಾಗವಹಿಸಲಿರುವ ಕೊಡವ ಸಮಾಜಗಳು ತಮ್ಮ ತಂಡದ ವಿವರಗಳನ್ನು ಅಕ್ಟೋಬರ್ ೩೦ರ ಒಳಗೆ ಪೊನ್ನಂಪೇಟೆ ಕೊಡವ ಸಮಾಜದ ಕಚೇರಿಗೆ ಕಳುಹಿಸುವಂತೆ ಕೋರಲಾಗಿದೆ. ತಪ್ಪಿದಲ್ಲಿ ಅವರಿಗೆ ಸ್ಪರ್ಧೆಗಳಲ್ಲಿ ಭಾಗವಹಿಸಲು ಅವಕಾಶ ಇರುವುದಿಲ್ಲ. ಹೆಚ್ಚಿನ ವಿವರಗಳೀಗೆ ೯೮೪೫೩೦೮೨೨೮/ ೯೪೮೩೮೩೬೧೧೫ ಈ ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸುವAತೆ ಕೋರಿದರು.

ಗೋಷ್ಠಿಯಲ್ಲಿ ಸಾಂಸ್ಕೃತಿಕ ಸಮಿತಿ ಸಂಚಾಲಕ ಹಂಚೇಟ್ಟಿರ ಮನು ಮುದ್ದಪ್ಪ, ನಿರ್ದೇಶಕ ಬಾಚಿರ ಜಗದೀಶ್ ಉಪಸ್ಥಿತರಿದ್ದರು.