ಸೋಮವಾರಪೇಟೆ, ಅ. ೨೦: ಬೆಂಗಳೂರಿನ ಸರ್ ಎಂ. ವಿಶ್ವೇಶ್ವರಯ್ಯ ಪ್ರತಿಷ್ಠಾನ ವತಿಯಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಬೆಂಗಳೂರಿನ ರವೀಂದ್ರ ಕ್ಷೇತ್ರದಲ್ಲಿ ನಡೆದ ಅಖಿಲ ಭಾರತ ಕನ್ನಡ ಕವಿಗಳ ಪ್ರಥಮ ಸಮ್ಮೇಳನದಲ್ಲಿ ಶನಿವಾರಸಂತೆಯ ಕವಯತ್ರಿ ಲಾವಣ್ಯ ಮೋಹನ್ ಅವರಿಗೆ ಕಾವ್ಯ ಭೂಷಣ ರಾಷ್ಟç ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಮಾಜಿ ಲೋಕಾಯುಕ್ತ ಡಾ. ಎನ್. ಸಂತೋಷ ಹೆಗ್ಡೆ, ಕರ್ನಾಟಕ ರಾಜ್ಯ ಕೈಗಾರಿಕಾ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಜಿ. ನಂಜಯ್ಯನಮಠ, ಪ್ರತಿಷ್ಠಾನದ ರಾಷ್ಟಾçಧ್ಯಕ್ಷ ರಮೇಶ್ ಸುರ್ವೆ, ಸಮ್ಮೇಳನಾಧ್ಯಕ್ಷ ಡಾ.ಸಿ.ಸೋಮಶೇಖರ್ ಮತ್ತಿತರರು ಇದ್ದರು.
ಲಾವಣ್ಯ ಮೋಹನ್ ಅವರು ಈವರೆಗೆ ೩೦೦ಕ್ಕೂ ಹೆಚ್ಚು ಕವಿತೆಗಳನ್ನು ರಚಿಸಿದ್ದು, ಇಲ್ಲಿಯವರೆಗೆ ೩ ಪುಸ್ತಕಗಳು ಲೋಕಾರ್ಪಣೆಗೊಂಡಿವೆ.