ಮಡಿಕೇರಿ, ಅ. ೨೫ : ಕೊಡಗೂ ಸೇರಿದಂತೆ ರಾಜ್ಯವ್ಯಾಪಿ ಮಹಿಳಾ ಉದ್ಯಮಿಗಳಿಗೆ ಉತ್ತೇಜನ ನೀಡುವಂತಹ ಕಾರ್ಯ ಯೋಜನೆಗಳನ್ನು ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆಯು ಹಮ್ಮಿಕೊಂಡಿದೆ ಎಂದು ಸಂಸ್ಥೆಯ ಪ್ರಥಮ ಮಹಿಳಾ ಅಧ್ಯಕ್ಷೆ ಉಮಾರೆಡ್ಡಿ ಹೇಳಿದರು.

ನಗರ ಹೊರವಲಯದ ಕ್ಲಬ್ ಮಹೀಂದ್ರ ರೆಸಾರ್ಟ್ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ೧೦೯ ವರ್ಷಗಳ ಇತಿಹಾಸವಿರುವ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆಯ ಮೊದಲ ಮಹಿಳಾ ಅಧ್ಯಕ್ಷೆ ಉಮಾರೆಡ್ಡಿ, ರಾಜ್ಯದಾದ್ಯಂತ ವಿವಿಧ ಉದ್ಯಮಗಳಲ್ಲಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲುದಾರರಾಗುತ್ತಿದ್ದಾರೆ. ಇಂಥ ಮಹಿಳಾ ಉದ್ಯಮಿಗಳನ್ನು ಪ್ರೋತ್ಸಾಹಿಸುವುದರೊಂದಿಗೆ ಮತ್ತಷ್ಟು ಮಹಿಳಾ ಉದ್ಯಮಿಗಳಿಗೆ ಸೂಕ್ತ ಸಲಹೆ ನೀಡುವ ನಿಟ್ಟಿನಲ್ಲಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು. ನವಂಬರ್ ೧೯ ರಂದು ಬೆಂಗಳೂರಿನಲ್ಲಿ ಅಂತರರಾಷ್ಟಿçÃಯ ಮಹಿಳಾ ಉದ್ಯಮಿಗಳ ಸಮಾವೇಶ ಆಯೋಜಿಸಲಾಗಿದ್ದು ಪ್ರವಾಸೋದ್ಯಮ, ಕಲೆ, ಸಂಸ್ಕೃತಿಯನ್ನು ಈ ಸಮಾವೇಶ ಬಿಂಬಿಸಲಿದೆ. ಭವಿಷ್ಯದ ಪೀಳಿಗೆಯನ್ನು ಪ್ರೋತ್ಸಾಹಿಸುವ ಧ್ಯೇಯವಾಕ್ಯವನ್ನು ಈ ಸಮಾವೇಶ ಹೊಂದಿದೆ ಎಂದು ತಿಳಿಸಿದರು.

ಪ್ರಸ್ತುತ ರಾಜ್ಯವ್ಯಾಪಿ ೭.೫೦ ಲಕ್ಷ ಉದ್ಯಮಿಗಳಿದ್ದು ಈ ಪೈಕಿ ಶೇ.೯೦ ರಷ್ಟು ಸಣ್ಣ ಉದ್ಯಮಿಗಳಿದ್ದಾರೆ. ಮುಂದಿನ ವರ್ಷಗಳಲ್ಲಿ ಈ ಸಂಖ್ಯೆ ೧೦ ಲಕ್ಷ ತಲುಪುವ ನಿರೀಕ್ಷೆಯಿದೆ ಎಂದು ಹೇಳಿದ ಉಮಾರೆಡ್ಡಿ, ಆಧುನಿಕ ದಿನಮಾನಗಳಿಗೆ ಸರಿಹೊಂದುವAತೆ ಸಂಸ್ಥೆಯು ಕೂಡ ಸಾಕಷ್ಟು ಡಿಜಿಟಲೀಕರಣಗೊಳ್ಳಲಿದೆ. ವಿದ್ಯಾರ್ಥಿಗಳಿಗೆ ಉದ್ಯೋಗವಕಾಶ ಕಲ್ಪಿಸುವ ನಿಟ್ಟಿನಲ್ಲಿ ಶೀಘ್ರದಲ್ಲಿಯೇ ಪ್ರತ್ಯೇಕ ವೆಬ್‌ಸೈಟ್ ರೂಪಿಸಲಾಗುತ್ತದೆ. ಈ ಮೂಲಕ ಶಿಕ್ಷಣ ಮುಗಿಸಿದ ಯುವಪೀಳಿಗೆಗೆ ಅವರ ಕೌಶಲ್ಯಕ್ಕನುಗುಣವಾಗಿ ಉದ್ಯೋಗ ನೀಡುವ ಗುರಿ ಹೊಂದಲಾಗಿದೆ ಎಂದು ಉಮಾರೆಡ್ಡಿ ತಿಳಿಸಿದರು

ಬೆಂಗಳೂರು ಸೇರಿದಂತೆ ರಾಜ್ಯದ ಹಲವಾರು ಕಡೆ ಉದ್ಯಮಗಳಿಗೆ ಸರ್ಕಾರದಿಂದ ಅಗತ್ಯವಾದ ಮೂಲಸೌಕರ್ಯ ದೊರಕಬೇಕಾಗಿದೆ. ಅದರಲ್ಲಿಯೂ ಮುಖ್ಯವಾಗಿ ರಸ್ತೆ ಪರಿಸ್ಥಿತಿ ಸುಧಾರಿಸಬೇಕಾಗಿದೆ. ಈ ನಿಟ್ಟಿನಲ್ಲಿ ಸರ್ಕಾರದ ಗಮನ ಸೆಳೆಯುವ ಪ್ರಯತ್ನವನ್ನು ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆಯು ಮಾಡಲಿದೆ ಎಂದೂ ಅಧ್ಯಕ್ಷೆ ಉಮಾರೆಡ್ಡಿ ಹೇಳಿದರು. ವಿಶ್ವದರ್ಜೆಯ ಸೌಲಭ್ಯಗಳ್ನು ಸಹಜವಾಗಿಯೇ ರಾಜ್ಯದ ಉದ್ಯಮಿಗಳೂ ಅಪೇಕ್ಷಿಸುತ್ತಾರೆ ಎಂಬುದನ್ನೂ ಸರ್ಕಾರ ಮನಗಾಣಬೇಕಾಗಿದೆ ಎಂದೂ ಅವರು ಅಭಿಪ್ರಾಯಪಟ್ಟರು.

ಕೊಡಗಿನಲ್ಲಿ ನವ ಉದ್ಯಮಗಳ ಪ್ರಾರಂಭ, ಹಾಲಿ ಉದ್ಯಮಗಳ ಸಮಸ್ಯೆ ಪರಿಹಾರ ನಿಟ್ಟಿನಲ್ಲಿ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆಯು ಗಮನಹರಿಸಲಿದೆ ಎಂದೂ ಉಮಾರೆಡ್ಡಿ ಭರವಸೆ ನೀಡಿದರು.

ಕೊಡಗೂ ಸೇರಿದಂತೆ ರಾಜ್ಯದ ಮಹಿಳಾ ಉದ್ಯಮಿಗಳ ಸಾಧನೆ ಗುರುತಿಸಿ ಅವರಿಗೆ ೪ಐದನೇ ಪುಟಕ್ಕೆ

(ಮೊದಲ ಪುಟದಿಂದ) ಸಾಧಕಿ ಪ್ರಶಸ್ತಿ ನೀಡುವ ಯೋಜನೆ ಜಾರಿಯಲ್ಲಿದ್ದು ಪ್ರಶಸ್ತಿಗಾಗಿ ಅರ್ಜಿ ಸಲ್ಲಿಸಲು ಅಕ್ಟೋಬರ್ ೩೧ ಕೊನೇ ದಿನವಾಗಿದೆ ಎಂದು ಅವರು ಹೇಳಿದರು.

ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆಯು ವಿಶ್ವದ ಸ್ಟಾರ್ಟ್ ಅಪ್ ರಾಜಧಾನಿ ಬೆಂಗಳೂರಿನಿAದ ತನ್ನ ಬ್ರಾಂಡ್ ಅನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ಯಲಿದೆ. ಅಂತರರಾಷ್ಟ್ರೀಯ ಉದ್ಯಮ ಮೈತ್ರಿ ಕಂಡುಕೊAಡು ಕರ್ನಾಟಕವನ್ನು ಪ್ರಮುಖ ಹೂಡಿಕೆ ಮತ್ತು ಪ್ರವಾಸೋದ್ಯಮ ಕೇಂದ್ರವಾಗಿ ಬಿಂಬಿಸುವ ಗುರಿ ಹೊಂದಲಾಗಿದ್ದು, ಕರ್ನಾಟಕದ ಉದ್ಯಮಿಗಳು ಜಾಗತಿಕ ಉದ್ಯಮ ನಕ್ಷೆಯಲ್ಲಿ ಕಾಣುವಂತಾಗಬೇಕೆAದು ಉಮಾರೆಡ್ಡಿ ಆಶಾಭಾವನೆ ವ್ಯಕ್ತಪಡಿಸಿದರು.

ಕನ್ನಡ ಹೆಮ್ಮೆ - ಜಾಗತಿಕ ಹೆಮ್ಮೆ!

ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆಯು ಕನ್ನಡ ಹೆಮ್ಮೆ - ಜಾಗತಿಕ ಹೆಮ್ಮೆ ಎಂಬ ಧ್ಯೇಯ ಹೊಂದಿದೆ. ಪ್ರತೀಯೋರ್ವ ಕನ್ನಡಿಗನು ಜಗತ್ತಿನ ಎಲ್ಲಿಯೇ ವಾಸಿಸುತ್ತಿದ್ದರೂ ತನ್ನ ಹೃದಯದಲ್ಲಿ ಕನ್ನಡದ ಮನಸ್ಸು ಹೊಂದಿರುತ್ತಾನೆ. ಈ ನಿಟ್ಟಿನಲ್ಲಿ ನಮ್ಮ ಸಂಸ್ಥೆಯು ಅನಿವಾಸಿ ಉದ್ಯಮಿಗಳು, ವಿದೇಶದಲ್ಲಿರುವ ಕನ್ನಡಿಗರನ್ನು ಸಂಪರ್ಕಿಸಿ, ನಮ್ಮ ಕನ್ನಡ ನಾಡಿನಲ್ಲಿಯೇ ಬಂಡವಾಳ ಹೂಡುವಂತೆ ಕೋರುತ್ತದೆ. ಈ ಪ್ರಕ್ರಿಯು ಹಣದ ವಹಿವಾಟು, ಆದಾಯಕ್ಕಿಂತಲೂ ಮಿಗಿಲಾದ ಕನ್ನಡದ ಭಾವನೆಯನ್ನು ಹೊಂದಿದೆ.

ಹೊಸ ಆಲೋಚನೆಗಳು ನಾವಿನ್ಯತೆ ಮತ್ತು ಅಂತರರಾಷ್ಟಿçÃಯ ಮಾನ್ಯತೆಯನ್ನು ಕರ್ನಾಟಕದ ಮಣ್ಣಿಗೆ ಮರಳಿ ತಂದುಕೊಡುತ್ತದೆ. ಈ ಮೂಲಕ ವಿದೇಶದಲ್ಲಿನ ಕನ್ನಡಿಗ ಉದ್ಯಮಿಗಳ ಜೊತೆ ಉದ್ಯಮ ಬೆಸುಗೆಯನ್ನು ಹೊಂದಲಿದೆ ಎಂದು ಉಮಾರೆಡ್ಡಿ ತಿಳಿಸಿದರು. ಸಂಸ್ಥೆಯ ಹಿರಿಯ ಉಪಾಧ್ಯಕ್ಷ ಟಿ. ಸಾಯಿರಾಮ್ ಪ್ರಸಾದ್, ಕೊಡಗು ಜಿಲ್ಲೆಯ ನಿರ್ದೇಶಕ ಗಿರೀಶ್ ಗಣಪತಿ ಹಾಜರಿದ್ದರು.

- ಅನಿಲ್ ಎಚ್.ಟಿ.