ಮಡಿಕೇರಿ, ಅ. ೨೬: ನಗರದ ಗಾಂಧಿ ಮೈದಾನದಲ್ಲಿ ಭಾನುವಾರ ತುಳು ಭಾಷೆಯ ಕಂಪು ಹರಡಿತ್ತು. ಮಡಿಕೇರಿ ತಾಲೂಕು ಬಂಟರ ಸಂಘ ಮತ್ತು ಬಂಟರ ಸಂಘದ ಜಿಲ್ಲಾ, ತಾಲೂಕು, ಹೋಬಳಿ ಹಾಗೂ ಮಹಿಳಾ ಘಟಕಗಳ ಆಶ್ರಯದಲ್ಲಿ ಸಾಧಕ ಮಕ್ಕಳಿಗೆÀ ಪ್ರತಿಭಾ ಪುರಸ್ಕಾರ, ಸಾಧಕರಿಗೆ ಸನ್ಮಾನ ಹಾಗೂ ಆದರ್ಶ ದಂಪತಿ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ಇಡೀ ದಿನ ನಡೆದ ಕಾರ್ಯಕ್ರಮದಲ್ಲಿ ತುಳು ಭಾಷೆಯ ಕಂಪು ಪಸರಿಸಿತ್ತು
ಚಿತ್ರನಟರಾದ ಸುರೇಶ್ ರೈ ಹಾಗೂ ಭವ್ಯಶ್ರೀ ರೈ ಕಾರ್ಯಕ್ರಮದ ಕೇಂದ್ರ ಬಿಂದುವಾಗಿದ್ದರು. ಅಡಿಕೆ ಹೂ (ಪಿಂಗಾರ) ೫ನೇ ಪುಟಕ್ಕೆ
(ಮೊದಲ ಪುಟದಿಂದ) ಅರಳಿಸುವ ಮೂಲಕ ಕಾರ್ಯಕ್ರಮಕ್ಕೆ ಸಾಂಪ್ರದಾಯಿಕ ಚಾಲನೆ ನೀಡಲಾಯಿತು ಅತಿಥಿಗಳ ಸ್ವಾಗತ, ಸಾಧಕರ ಸನ್ಮಾನಗಳ ಸಂದರ್ಭ ಮೊಳಗುತ್ತಿದ್ದ ಕೊಂಬು ಕಹಳೆಯ ನಿನಾದ, ಕಾರ್ಯಕ್ರಮಕ್ಕೆ ಮೆರುಗು ನೀಡಿತ್ತು.
ಈ ವೇಳೆ ಮಾತನಾಡಿದ ಸುರೇಶ್ ರೈ, ಬಂಟ ಸಮುದಾಯವನ್ನು ಒಂದೇ ಚಾವಡಿಯಲ್ಲಿ ಸೇರಿಸÀÄವ ಮೂಲಕ ಇಷ್ಟೊಂದು ದೊಡ್ಡ ಮಟ್ಟದಲ್ಲಿ ಕಾರ್ಯಕ್ರಮ ರೂಪಿಸಿರುವುದು ನಿಜಕ್ಕೂ ಶ್ಲಾಘನೀಯ.
ಮುಖ್ಯಭಾಷಣ ಮಾಡಿದ ಉಪನ್ಯಾಸಕಿ ಪ್ರತಿಮಾ ಹರೀಶ್ ರೈ, ಸಮುದಾಯ ಸಂಘಟನೆಯೊAದು ಪ್ರತಿಭಾ ಪುರಸ್ಕಾರದ ಮೂಲಕ ಸಮಾಜಕ್ಕೆ ಸಂದೇಶ ನೀಡುತ್ತಿದೆ. ವಿವಿಧ ಕ್ಷೇತ್ರಗಳಲ್ಲಿ ಬಂಟ ಸಮುದಾಯದ ಅಪ್ರತಿಮ ಸಾಧಕರ ಹೆಸರನ್ನು ಉಲ್ಲೇಖಿಸಿದ ಅವರು, ಎಲ್ಲಿಂದಲೋ ಬಂದು ಇನ್ನೆಲ್ಲೋ ಬದುಕು ಕಟ್ಟಿಕೊಂಡಿದ್ದರೂ, ಬಂಟರು ತಮ್ಮ ಮೂಲ ಸಂಸ್ಕೃತಿಯನ್ನು ಇನ್ನೂ ಉಳಿಸಿಕೊಂಡಿದ್ದಾರೆ ಎಂದು ಹೇಳಿದರು
ಬಂಟರ ಸಂಘದ ತಾಲೂಕು ಅಧ್ಯಕ್ಷ ಸದಾಶಿವ ರೈ ಬಿ.ಆರ್. ಅಧ್ಯಕ್ಷತೆ ವಹಿಸಿದ್ದರು. ಅತಿಥಿಯಾಗಿ ಚಿತ್ತಾರ ವಾಹಿನಿ ವ್ಯವಸ್ಥಾಪಕ ನಿರ್ದೇಶಕಿ ಬಿ.ಆರ್. ಸವಿತಾ ರೈ, ಸಂಘÀಟನೆಯ ಪ್ರಮುಖರಾದ ಸತೀಶ್ ರೈ, ಶರತ್ ಶೆಟ್ಟಿ, ದಯಾನಂದ ರೈ., ಬಿ.ಬಿ. ಐತಪ್ಪ ರೈ, ಬಿ.ಕೆ. ರವೀಂದ್ರ ರೈ, ಡಾ. ಜಯಂತಿ ಆರ್. ಶೆಟ್ಟಿ ಮತ್ತಿತರರು ಪಾಲ್ಗೊಂಡಿದ್ದರು.