ಶ್ರೀಮಂಗಲ, ಅ. ೨೬ : ಒಂದು ಭಾಷೆ ನಾಶವಾದರೆ ಆ ಜನಾಂಗದ ಸಂಸ್ಕೃತಿ ನಾಶವಾಗುತ್ತದೆ, ಒಂದು ಸಂಸ್ಕೃತಿ ನಾಶ ಆದರೆ ಆ ಜನಾಂಗವೇ ನಾಶವಾಗುತ್ತದೆ. ಆದ್ದರಿಂದ ಭಾಷೆ ಸಂಸ್ಕೃತಿಯನ್ನು ನಾಶ ಆಗಲು ಬಿಡಬಾರದು ಎಂದು ತೂಕ್ ಬೊಳಕ್ ಕಲೆ ಕ್ರೀಡೆ ಸಾಹಿತ್ಯ ಅಕಾಡೆಮಿಯ ಸಂಚಾಲಕ ಮುಲ್ಲೇಂಗಡ ಮದೋಶ್ ಪೂವಯ್ಯ ಹೇಳಿದರು.
ಟಿ. ಶೆಟ್ಟಿಗೇರಿ ಕೊಡವ ಸಮಾಜದಲ್ಲಿ ನಡೆಯುತ್ತಿರುವ ೯ನೇ ವರ್ಷದ ಚಂಗ್ರಾAದಿ ಪತ್ತಾಲೋದಿ ಕಾರ್ಯಕ್ರಮದ ಎಂಟನೇ ದಿನದ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಅವರು ಮಾತನಾಡಿದರು. ತಂದೆ- ತಾಯಿ, ಮಕ್ಕಳ ಜೊತೆ ಕೊಡವ ಭಾಷೆಯಲ್ಲಿ ಮಾತನಾಡಬೇಕು. ಕೊಡವ ಭಾಷೆಯ ಮೇಲೆ ಮಕ್ಕಳಿಗೆ ಅಭಿಮಾನ ಹುಟ್ಟುವಂತೆ ಮಾಡಬೇಕು. ಕೊಡವ ಭಾಷೆ ನಮ್ಮ ಮನಸ್ಸಿನ ಮಾತಾಗಬೇಕು, ಆಗ ಮಾತ್ರ ನಮ್ಮ ಭಾಷೆ ಸಂಸ್ಕೃತಿ ಉಳಿಯುತ್ತದೆ ಎಂಬುದನ್ನು ಅರಿತುಕೊಳ್ಳಬೇಕೆಂದು ಅಭಿಪ್ರಾಯಪಟ್ಟರು. ಟಿ. ಶೆಟ್ಟಿಗೇರಿ ಕೊಡವ ಸಮಾಜ ೧೦ ದಿನಗಳ ಕಾರ್ಯಕ್ರಮವನ್ನು ಜನೋತ್ಸವ ಮಾದರಿ ನಡೆಸುತ್ತಿರುವುದು ಎಲ್ಲಾ ಕೊಡವ ಸಮಾಜಗಳಿಗೆ ಮಾದರಿಯಾಗಿದೆ. ಇಂದು ಕೊಡವ ಸಾಹಿತ್ಯ ಲೋಕ ಸಿನಿಮಾ ಲೋಕದಂತೆ ಬೆಳವಣಿಗೆ ಕಾಣುತ್ತಿದೆ ಆದರೆ ಭಾಷೆಯ ಬೆಳವಣಿಗೆ ಸಾಲದು ಭಾಷೆಯ ಬೆಳವಣಿಗೆಗೆ ಎಲ್ಲರೂ ಪ್ರಯತ್ನಿಸಬೇಕೆಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಕೊಡವ ಸಮಾಜದ ಅಧ್ಯಕ್ಷ ಕೈಬುಲಿರ ಹರೀಶ್ ಅಪ್ಪಯ್ಯ ಮಾತನಾಡಿ ನಮ್ಮ ವ್ಯವಹಾರಕ್ಕೆ ಇಂಗ್ಲಿಷ್ ಬೇಕಾಗುತ್ತದೆ. ಆದರೆ ಕೊಡವ ಭಾಷೆಗೆ ಪ್ರಾಮುಖ್ಯತೆ ನೀಡಬೇಕು ಎಂದರು.
ಶ್ರೀಮಂಗಲ ಕೊಡವ ಸಮಾಜದ ಪೊಮ್ಮಕ್ಕಡ ಕೂಟದ ಅಧ್ಯಕ್ಷೆ ಪೆಮ್ಮಂಡ ಸಬಿತ ಕುಶಾಲಪ್ಪ, ಸಮಾಜದ ಸಾಂಸ್ಕೃತಿಕ ಸಮಿತಿ ಸಂಚಾಲಕ ಚೆಟ್ಟಂಗಡ ರವಿ ಸುಬ್ಬಯ್ಯ, ಕೋಟ್ರಮಾಡ ಮಂಜು ಅಯ್ಯಪ್ಪ, ಕಾಳಿಮಾಡ ಪದ್ಮ ಬೆಳ್ಯಪ್ಪ ವೇದಿಕೆಯಲ್ಲಿದ್ದರು. ಪೊಮ್ಮಕ್ಕಡ ಕೂಟದ ಸಾಂಸ್ಕೃತಿಕ ಕಾರ್ಯಕ್ರಮಲ್ಲಿ ಕಾಳಿಮಾಡ ಶೀಮಾ, ಕೋಟ್ರಮಾಡ ಶೈಮಾ, ಕೋಟ್ರಮಾಡ ಶೀತಲ್, ಕೋಟ್ರಮಾಡ ಶೃತಿ, ಮಚ್ಚಾಮಡ ಶ್ವೇತ, ಚೇಂದAಡ ತಾನ್ಸಿ, ಬಾಚಮಾಡ ರಜಿತ, ಅಜ್ಜಮಾಡ ಪವಿತ, ಚಟ್ಟಂಡ ಲತಾ ಪಾಲ್ಗೊಂಡಿದ್ದರು.
ಅಜ್ಜಮಾಡ ಸಾವಿತ್ರಿ ಪ್ರಾರ್ಥಿಸಿ, ಬೊಳ್ಳೇರ ಪೊನ್ನಪ್ಪ ಸ್ವಾಗತಿಸಿ, ಸಮಾಜದ ಜಂಟಿ ಕಾರ್ಯದರ್ಶಿ ಆಂಡಮಾಡ ಸತೀಶ್ ವಿಶ್ವನಾಥ್ ವಂದಿಸಿದರು.