ಗೋಣಿಕೊಪ್ಪ ವರದಿ, ಅ. ೨೬ : ಅಮ್ಮಕೊಡವ ಮಕ್ಕಳು ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಲು ಪಾಲಕರ ಪ್ರೋತ್ಸಾಹ ಅಗತ್ಯ ಎಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ನಿವೃತ್ತ ಉದ್ಯೋಗಿ ನಾಳಿಯಮ್ಮಂಡ ರೇವತಿ ಪಾಲಾಕ್ಷ ಹೇಳಿದರು.
ಅಮ್ಮಕೊಡವ ಕಾವೇರಿ ಮಹಿಳಾ ಸಂಘದಿAದ ಅಖಿಲ ಅಮ್ಮ ಕೊಡವ ಸಮಾಜ ಸಭಾಂಗಣದಲ್ಲಿ ಆಯೋಜಿಸಿದ್ದ ಸಂಘದ ಮಹಾಸಭೆ ಮತ್ತು ಕಾವೇರಿ ತೀರ್ಥಪೂಜೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಅಮ್ಮಕೊಡವರು ಎಲ್ಲ ಕ್ಷೇತ್ರಗಳಲ್ಲೂ ತೊಡಗಿಸಿಕೊಂಡು ಜನಾಂಗದ ಉಳಿವಿಗೆ ಮುಂದಾಗಬೇಕಿದೆ. ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಿ, ಎನ್ಡಿಎ, ಬ್ಯಾಂಕಿAಗ್ ಸೇರಿದಂತೆ ಉನ್ನತ ಮಟ್ಟದ ಉದ್ಯೋಗ ಗಿಟ್ಟಿಸಿಕೊಳ್ಳಲು ಮುಂದಾಗಬೇಕು. ಸಾಮಾಜಿಕ ಕಾರ್ಯ, ರಾಜಕೀಯ, ವ್ಯಾಪಾರ ಕ್ಷೇತ್ರಗಳಲ್ಲಿ ಹೆಚ್ಚು ತೊಡಗಿಸಿಕೊಳ್ಳಬೇಕು. ಇದರಿಂದ ಜನಾಂಗಕ್ಕೆ ಹೆಚ್ಚು ಲಾಭ ಇದೆ ಎಂದರು.
ಸAಘದ ಅಧ್ಯಕ್ಷೆ ಅಮ್ಮತ್ತೀರ ರೇವತಿ ಪರಮೇಶ್ವರ ಅಧ್ಯಕ್ಷತೆ ವಹಿಸಿ ಮಾತನಾಡಿ, ಸದಸ್ಯರು ಹೆಚ್ಚಾಗಿ ಪಾಲ್ಗೊಳ್ಳುವುದರಿಂದ ಸಂಘದ ಅಭಿವೃದ್ಧಿ ಸಾಧ್ಯ. ಅತಿಥಿ ನಾಳಿಯಮ್ಮಂಡ ರೇವತಿ ಪಾಲಾಕ್ಷ ಸಂಘದ ಅಭಿವೃದ್ಧಿಗೆ ರೂ. ೨೫ ಸಾವಿರ ನೀಡುವುದಾಗಿ ತಿಳಿಸಿದ್ದಾರೆ. ಇದರಿಂದ ಸಂಘಕ್ಕೆ ಪ್ರಯೋಜನವಾಗಲಿದೆ ಎಂದರು.
ಕಾವೇರಿಗೆ ವಿಶೇಷ ಪೂಜೆ ಸಲ್ಲಿಸಿ ಅಮ್ಮಕೊಡವರು ಕಾವೇರಿಯನ್ನು ಪ್ರಾರ್ಥಿಸಿದರು. ದೇವರ ಹಾಡಿನ ಮೂಲಕ ಆರತಿ ಮಾಡಲಾಯಿತು. ಗಾಜಿನ ಬಳೆಯನ್ನು ಪರಸ್ಪರ ಹಂಚಿಕೊಳ್ಳುವ ಮೂಲಕ ಆಚರಣೆಯಲ್ಲಿ ಭಾಗಿಯಾದರು. ಕುಂಕುಮ ನೀಡಲಾಯಿತು. ತೀರ್ಥವನ್ನು ಹಂಚಲಾಯಿತು.
ಸAಘದ ಕಾರ್ಯದರ್ಶಿ ಅಮ್ಮತ್ತೀರ ಆರತಿ ಸುರೇಶ್ ವರದಿ, ಲೆಕ್ಕಪತ್ರ ಮಂಡನೆ ಮಾಡಿದರು. ಹಿರಿಯರಾದ ಚೊಟ್ಟೋಳಿಯಮ್ಮಂಡ ರಾಣಿ, ಬಲ್ಯಂಡ ಯಮುನಾ ರವಿ ಇದ್ದರು. ಬಾಚಮಾಡ ದಿವ್ಯ ವಿಶು ವಂದಿಸಿದರು.
ಐಸ್ ಕ್ರೀಂ ಕಡ್ಡಿ ಬಾಯಲ್ಲಿ ಕಚ್ಚಿಕೊಂಡು ಓಡುವುದರಲ್ಲಿ ಪುತ್ತಾಮನೆ ಅನಿತಾ (ಪ್ರ), ಪುತ್ತಾಮನೆ ವಿದ್ಯಾ ಜಗದೀಶ್ (ದ್ವಿ), ಹೆಸರುಕಾಳು ಹೆಕ್ಕುವುದರಲ್ಲಿ ಪುತ್ತಾಮನೆ ವಿದ್ಯಾ ಜಗದೀಶ್ (ಪ್ರ), ಬಲ್ಯಂಡ ಕಾವ್ಯ (ದ್ವಿ), ಸಂಗೀತಾ ಕುರ್ಚಿಯಲ್ಲಿ ಅಚ್ಚಿಯಂಡ ಗೀತಾ (ಪ್ರ), ಅಚ್ಚಿಯಂಡ ಸುನಿತಾ (ದ್ವಿ), ಹೌಸಿ ಹೌಸಿಯಲ್ಲಿ ಅಮ್ಮತ್ತೀರ ಧನ್ಯ (ಪ್ರ), ಹೆಮ್ಮಚ್ಚಿಮನೆ ಕೃಷಿಕ (ದ್ವಿ), ಪುತ್ತಾಮನೆ ಅನಿತಾ (ತೃ), ಫುಲ್ ರೋ ಸ್ಪರ್ಧೇಯಲ್ಲಿ ಅಚ್ಚಿಯಂಡ ಪುಷ್ಪ (ಪ್ರ) ನೆರೆಯಂಡಮ್ಮAಡ ಉಮಾಪ್ರಭು (ದ್ವಿ) ಬಹುಮಾನ ಪಡೆದುಕೊಂಡರು. ಮಕ್ಕಳ ವಿಭಾಗದಲ್ಲಿ ಹೆಮ್ಮಚ್ಚಿನಮನೆ ರಿಶೀಕ (ಪ್ರ), ಹೆಮ್ಮಚ್ಚಿಮನೆ ಕೃಷಿಕ (ದ್ವಿ) ಸ್ಥಾನ ಪಡೆದರು.