ಮಡಿಕೇರಿ, ಅ. ೨೬: ಕೊಡಗಿನ ಜನರ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಅವಾಚ್ಯ ಪದಗಳಿಂದ ನಿಂದಿಸಿದ ವ್ಯಕ್ತಿಯೋರ್ವನ ವಿರುದ್ಧ ಮಡಿಕೇರಿ ನಗರ ಪೊಲೀಸರು ಸುಮೊಟೋ ಪ್ರಕರಣ ದಾಖಲಿಸಿದ್ದಾರೆ.

ಇತ್ತೀಚೆಗೆ ರಾಜಾಸೀಟಿನಲ್ಲಿ ಝಿಪ್ ಲೈನ್ ಕೌಂಟರ್‌ನಲ್ಲಿ ಕೆಲ ಪ್ರವಾಸಿಗರು ಹಾಗೂ ಕೌಂಟರ್ ಸಿಬ್ಬಂದಿ ನಡುವೆ ಕನ್ನಡ ನಾಮಫಲಕ ಅಳವಡಿಕೆ ವಿಚಾರಕ್ಕೆ ಸಂಬAಧಿಸಿದAತೆ ಮಾತಿನ ಚಕಮಕಿ ನಡೆದಿತ್ತು. ಈ ಘಟನೆಯ ವೀಡಿಯೋವನ್ನು ರಾಮಚಂದ್ರ ಕರಣಿಕ ಎಂಬ ಫೇಸ್ಬುಕ್ ಖಾತೆಯಲ್ಲಿ ಹರಿಬಿಡಲಾಗಿತ್ತು. ಈ ವೀಡಿಯೋಗೆ ಪ್ರವೀಣ್ ಗೌಡ ಎಂಬಾತ ಕೊಡಗಿನ ಜನರನ್ನು ಆವಾಚ್ಯ ಪದಗಳಿಂದ ನಿಂದಿಸಿ ಪ್ರಚೋದನಾತ್ಮಕವಾಗಿ ಕಮೆಂಟ್ ಮಾಡಿದ್ದಾನೆ. ಇದು ಮಡಿಕೇರಿ ನಗರ ಠಾಣೆಯ ಸಿಬ್ಬಂದಿ ಕೆ.ವಿ ಮೋಹನ್ ಅವರು ತಮ್ಮ ಮೊಬೈಲ್‌ನಲ್ಲಿ ಫೇಸ್ಬುಕ್ ಖಾತೆಯನ್ನು ಪರಿಶೀಲನೆ ಮಾಡುವ ಸಂದರ್ಭ ಕಂಡುಬAದಿದ್ದು, ಈ ಹಿನ್ನೆಲೆಯಲ್ಲಿ ಮಡಿಕೇರಿ ನಗರ ಪೊಲೀಸರು ಪ್ರವೀಣ್ ಗೌಡ ಎಂಬಾತನ ವಿರುದ್ಧ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡು ಆತನ ಪತ್ತೆಗೆ ತನಿಖೆ ಕೈಗೊಂಡಿದ್ದಾg