ಸೋಮವಾರಪೇಟೆ, ಅ. ೨೭: ಪಟ್ಟಣದ ಸಿಎಸ್‌ಐ ಸಂತ ಜಾನ್ ದೇವಾಲಯದಲ್ಲಿ ಭಾನುವಾರ ಫಲೋತ್ಸವ ಹಬ್ಬವನ್ನು ಆಚರಿಸಲಾಯಿತು. ಸದಸ್ಯರು ಬೆಳೆದು ತಂದAತಹ ಪ್ರಥಮ ಫಲವನ್ನು ಮೆರವಣಿಗೆ ಮೂಲಕ ದೇವಾಲಯಕ್ಕೆ ತರಲಾಯಿತು. ಮುಖ್ಯ ಸಂದೇಶಕರಾದ ಜಾನ್ ಬಾಬು ಅವರು ಹಬ್ಬದ ವಿಶೇಷತೆಯನ್ನು ತಿಳಿಸಿದರು. ದೇವರ ಸಂದೇಶವನ್ನು ಹಂಚಿಕೊAಡರು. ಹಿರಿಯರಾದ ಜಾನ್‌ಬಾಬು, ಫಿಲೋಮಿನ್ ರಾಜ್ ಮತ್ತು ಮಹಿಳಾ ಅನ್ಯೋನ್ಯ ಕೂಟಗಳ ಉಪಾಧ್ಯಕ್ಷರಾದ ಫ್ಲಾರೆನ್ಸ್ ಅವರುಗಳನ್ನು ಸನ್ಮಾನಿಸಲಾಯಿತು.

ಆರಾಧನೆ ನಂತರ ಪ್ರಥಮ ಫಲಗಳನ್ನು ವಿತರಿಸಲಾಯಿತು. ಸಮಾಜ ಬಾಂಧವರಿಗೆ ಆಟೋಟ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಸಭಾಪಾಲನಾ ಸಮಿತಿ ಸದಸ್ಯರಾದ ಸೊಲೊಮನ್ ಡೇವಿಡ್, ಪುಷ್ಪ ಜಾಯ್, ಆಶಾ ಸಾಲೊಮನ್, ದಿವ್ಯ, ಸ್ಯಾಮುವೇಲ್ ಮನೋಜ್ ಕುಮಾರ್ ಹಾಗೂ ಪ್ರಿಯದರ್ಶಿನಿ ಇದ್ದರು.