ನಾಪೋಕ್ಲು, ಅ. ೨೭: ಇಲ್ಲಿನ ಸಮೀಪದ ಬೇತು ಗ್ರಾಮದಲ್ಲಿರುವ ಎಕ್ಸೆಲ್ ವಿದ್ಯಾಸಂಸ್ಥೆಯಲ್ಲಿ ವಿಜ್ಞಾನ ವಸ್ತು ಪ್ರದರ್ಶನವನ್ನು ಆಯೋಜಿಸಲಾಗಿತ್ತು. ವಿಜ್ಞಾನ ವಸ್ತು ಪ್ರದರ್ಶನವನ್ನು ನೇತಾಜಿ ಶಾಲೆಯ ಮುಖ್ಯ ಶಿಕ್ಷಕ ಸಿ.ಎಸ್. ಸುರೇಶ್ ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳು ವೈಜ್ಞಾನಿಕ ಮನೋಭಾವನೆಯನ್ನು ಬೆಳೆಸಿಕೊಳ್ಳಬೇಕು ಎಂದರು. ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷ ಕುಟ್ಟಂಜೆಟ್ಟಿರ ಮಾದಪ್ಪ, ನಿರ್ದೇಶಕರಾದ ಶರತ್, ಭವ್ಯ ಹಾಗೂ ಶಾಲಾ ಮುಖ್ಯೋಪಾಧ್ಯಾಯ ಚೋಕಿರ ತಮಯ್ಯ, ಶಿಕ್ಷಕ ವರ್ಗ ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು. ಈ ಸಂದರ್ಭ ಸೋಲಾರ್ ಸಿಸ್ಟಮ್, ಟ್ರಾನ್ಸ್ ಪೋರ್ಟೇಷನ್ ಮಾಡೆಲ್, ಫುಡ್ ನ್ಯೂಟ್ರಿಷನ್, ಎಕೋ ಸಿಸ್ಟಮ್, ನ್ಯೂರಾನ್, ಸ್ಕಾö್ಯಟರಿಂಗ್ ಆಫ್‌ಲೈಟ್, ವಿಜ್ಞಾನ ಪ್ರಯೋಗಗಳು ಸೇರಿದಂತೆ ಹಲವು ವೈಜ್ಙಾನಿಕ ಮಾದರಿಗಳನ್ನು ವಿದ್ಯಾರ್ಥಿಗಳು ಪ್ರದರ್ಶಿಸಿದರು. ದೀಕ್ಷಾ ಹಾಗೂ ಪಾಯಲ್ ಪೊನ್ನಮ್ಮ ಅವರ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮವು ಪ್ರಾರಂಭವಾಯಿತು. ಕಾರ್ಯಕ್ರಮದಲ್ಲಿ ಸಹ ಶಿಕ್ಷಕಿ ನೇತ್ರಾವತಿ ಸ್ವಾಗತಿಸಿ, ಶಿಕ್ಷಕಿ ರಶ್ಮಿ ನಿರೂಪಿಸಿ, ಶಿಕ್ಷಕಿ ತನು ವಂದನಾರ್ಪಣೆಯನ್ನು ನೆರವೇರಿಸಿದರು.