ಗೋಣಿಕೊಪ್ಪಲು, ಅ. ೨೮: ಕರಾಟೆಯು ನನಗೆ ಎಲ್ಲವನ್ನು ನೀಡಿದೆ. ಸಾಕಷ್ಟು ವಿದ್ಯಾರ್ಥಿಗಳನ್ನು ಕರಾಟೆ ಕ್ರೀಡೆಗೆ ಕೊಡುಗೆಯಾಗಿ ನೀಡಿದ ತೃಪ್ತಿ ಹೊಂದಿದ್ದೇನೆ ಎಂದು ಅಂತರರಾಷ್ಟಿçÃಯ ಕರಾಟೆ ಪಟು, ಕರ್ನಾಟಕ ರಾಜ್ಯ ಕ್ರೀಡಾಪ್ರಾಧಿಕಾರದ ಉಪಾಧ್ಯಕ್ಷ ಸಿ.ಎಸ್.ಅರುಣ್ಮಾಚಯ್ಯ ಹೇಳಿದರು.
ಗೋಣಿಕೊಪ್ಪಲುವಿನ ಪ್ರಣವ್ ಇಂಟರ್ನ್ಯಾಷನಲ್ ಸಭಾಂಗಣದಲ್ಲಿ ಕೊಡಗು ಕರಾಟೆ ಅಸೋಸಿಯೇಷನ್ ವತಿಯಿಂದ ಏರ್ಪಡಿಸಲಾಗಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಸಿ.ಎಸ್.ಅರುಣ್ಮಾಚಯ್ಯ, ದೇಶ ವಿದೇಶಗಳಲ್ಲಿಯೂ ಕರಾಟೆಗೆ ಮಾನ್ಯತೆ ಇದೆ. ಕೊಡಗು ಜಿಲ್ಲೆಯಲ್ಲಿ ಸಾಕಷ್ಟು ವಿದ್ಯಾರ್ಥಿಗಳು ಕರಾಟೆಯಲ್ಲಿ ಭಾಗವಹಿಸಿ ಇಂದು ಉತ್ತಮ ಶಿಕ್ಷಕರಾಗಿ ತರಬೇತಿ ನೀಡುತ್ತಿದ್ದಾರೆ. ಬೆಂಗಳೂರಿನಲ್ಲಿ ಕರಾಟೆಯ ಕಚೇರಿಯನ್ನು ತೆರೆಯುವ ಅಭಿಲಾಷೆ ಹೊಂದಿದ್ದೇನೆ.ಸಿಕ್ಕಿರುವ ಅವಕಾಶದಲ್ಲಿ ಕರಾಟೆ ಕ್ರೀಡೆಗೆ ಮತ್ತಷ್ಟು ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಪ್ರಯತ್ನ ಮುಂದುವರೆಸುತ್ತೇನೆ ಎಂದು ಆಶಾಭಾವನೆ ವ್ಯಕ್ತಪಡಿಸಿ ದರು. ಕೊಡಗು ಕರಾಟೆ ಅಸೋಸಿಯೇಷನ್ ಅಧ್ಯಕ್ಷ ಜಮ್ಮಡ ಜಯ ಜೋಯಪ್ಪ ಅಧ್ಯಕ್ಷತೆ ವಹಿಸಿ ಮಾತನಾಡಿ, ಅರುಣ್ ಮಾಚಯ್ಯನವರು ಕರಾಟೆಯ ಮೂಲಕ ಸಾಕಷ್ಟು ವಿದ್ಯಾರ್ಥಿಗಳನ್ನು ಕೊಡುಗೆಯಾಗಿ ಸಮಾಜಕ್ಕೆ ನೀಡಿದ್ದಾರೆ.
ಅಂತಹ ವಿದ್ಯಾರ್ಥಿಗಳು ಉತ್ತಮ ತರಬೇತುದಾರರಾಗಿ ತರಬೇತಿ ನೀಡುತ್ತ ಮುಂದೆ ಸಾಗುತ್ತಿದ್ದಾರೆ. ಕ್ರೀಡಾ ಪ್ರಾಧಿಕಾರದ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿಭಾಯಿಸುವಂತಾಗಲಿ ಎಂದು ಆಶಿಸಿದರು. ಹಿರಿಯ ವಿದ್ಯಾರ್ಥಿಗಳು, ಶಿಕ್ಷಕರು, ತರಬೇತುದಾರರು ಅರುಣ್ ಮಾಚಯ್ಯನವರಿಗೆ ಸನ್ಮಾನಿಸಿ ಗೌರವಿಸಿದರು.
ಕಾರ್ಯಕ್ರಮದಲ್ಲಿ ಪಟ್ರಪಂಡ ರಘು ನಾಣಯ್ಯ, ನವೀನ್ ಅಯ್ಯಪ್ಪ, ಕೂಡಂಡ ಭಾನು ಕಾವೇರಪ್ಪ ಮಾತನಾಡಿದರು. ಅಭಿನಂದನಾ ಕಾರ್ಯಕ್ರಮದಲ್ಲಿ ಸಜೇಂದ್ರ, ಜಯ ಜೋಯಪ್ಪ, ತಿಮ್ಮಯ್ಯ, ಅರುಣ್ ಶನಿವಾರ ಸಂತೆ, ಎಂ.ಆರ್.ಸುಮನ್, ಕರ್ನಂಡ ಸೋಮಣ್ಣ, ಶಿವು ನಾಚಪ್ಪ,ವಿಜಯ, ಕುಶಾಲಪ್ಪ ,ಅರುಣ್ ಚೇರಂಬಾಣೆ, ಕಳ್ಳಿರ ರೇಖಾ, ಶಿವು ಶಿವಪ್ಪ, ಸಂಕೇತ್, ಅಂತೋಣಿ, ಅನೀಲ್, ಶಂಷೀರ್, ಯೋಗೇಶ್, ಕೃಷ್ಣ, ಪ್ರಮೋದ್, ಪ್ರಸನ್ನ ಮುಂತಾದವರು ಹಾಜರಿದ್ದರು.