ಮಡಿಕೇರಿ, ಅ. ೨೮: ಕೂರ್ಗ್ ಪ್ಲಾಂಟರ್ಸ್ ಅಸೋಸಿಯೇಷನ್‌ನ ೧೪೬ನೇ ವಾರ್ಷಿಕ ಸಭೆ ತಾ.೩೧ ರಂದು ಸಿದ್ದಾಪುರದ ಆರೆಂಜ್ ಕೌಂಟಿ ರೆಸಾರ್ಟ್ನಲ್ಲಿ ಬೆಳಿಗ್ಗೆ ೯ ಗಂಟೆಗೆ ನಡೆಯಲಿದೆ. ಕಾಫಿ ಮಂಡಳಿ ಸಿ.ಇ.ಓ ಕುರ್ಮಾರಾವ್ ಎಂ (ಐ.ಎ.ಎಸ್) ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಗೌರವ ಅಧ್ಯಕ್ಷರಾಗಿ ಸಂಸದ ಯದುವೀರ್ ಒಡೆಯರ್, ಶಾಸಕರಾದ ಎ.ಎಸ್. ಪೊನ್ನಣ್ಣ ಹಾಗೂ ಡಾ. ಮಂತರ್ ಗೌಡ ಅವರುಗಳು ಭಾಗವಹಿಸಲಿದ್ದಾರೆ. ರೆಸಾರ್ಟ್ ವ್ಯವಸ್ಥಾಪಕ ಕುಟ್ಟಪ್ಪನ್, ಐ.ಐ.ಪಿ.ಎಂ ನಿರ್ದೇಶಕ ಜಾನ್ ಮನೋ ರಾಜ್ ಎಸ್. ಅವರುಗಳು ಹಾಜರಿರಲಿದ್ದಾರೆ.