*ಗೋಣಿಕೊಪ್ಪÀ, ಅ. ೨೮: ಪದವಿಪೂರ್ವ ಕಾಲೇಜುಗಳ ವಿವಿಧ ಕ್ರೀಡೆಯಲ್ಲಿ ಕಳತ್ಮಾಡು ಲಯನ್ಸ್ ಪದವಿಪೂರ್ವ ಪಿ.ಎಸ್. ರೈಹಾನ್, ಅಹಮ್ಮದ್ ರಾಜಿಕ್, ಮಹಮ್ಮದ್ ಫಾಜಿಲ್ ತುಮಕೂರಿನಲ್ಲಿ ನಡೆದ ಫುಟ್ಬಾಲ್ ಪಂದ್ಯಾವಳಿಯಲ್ಲಿ ರಾಜ್ಯಮಟ್ಟವನ್ನು ಪ್ರತಿನಿಧಿಸಿದರು.
ಎಂ.ಜಿ. ಅಯ್ಯಪ್ಪ, ಎಂ.ಬಿ. ವಿಶ್ವಾಸ್, ಮಡಿಕೇರಿಯಲ್ಲಿ ನಡೆಯಲಿರುವ ರಾಜ್ಯಮಟ್ಟದ ಶಟಲ್ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಭಾಗವಹಿಸಲಿದ್ದಾರೆ. ಪಿ.ಈ. ಕುಶಿ ರಾಮನಗರದಲ್ಲಿ ನಡೆಯಲಿರುವ ರಾಜ್ಯಮಟ್ಟದ ವಾಲಿಬಾಲ್ ಪಂದ್ಯಾವಳಿಯಲ್ಲಿ ಭಾಗವಹಿಸಲಿದ್ದಾರೆ. ಪಿ.ಕೆ. ನಿಶ್ಚಲ್, ಎಂ.ಪಿ. ಶ್ರದ್ಧಾ ರಾಜ್ಯಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ. ಎಂ.ಬಿ. ವಿಶ್ವಾಸ್ ಬೀದರ್‌ನಲ್ಲಿ ನಡೆಯಲಿರುವ ರಾಜ್ಯಮಟ್ಟದ ಟೇಬಲ್ ಟೆನ್ನಿಸ್ ಪಂದ್ಯಾವಳಿಯಲ್ಲಿ ಭಾಗವಹಿಸಲಿದ್ದಾರೆ. ಪ್ರಾಂಶುಪಾಲರಾದ ಚೀಯಕ್‌ಪೂವಂಡ ಲತಾ ಬೋಪಣ್ಣ ಗೌರವಿಸಿದರು.