ಚೆಯ್ಯಂಡಾಣೆ, ಅ. ೨೭: ಸಮೀಪದ ಕೋಕೇರಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಗ್ರಾಮದ ದಾನಿಗಳಾದ ಪೊನ್ನಚಂಡ ಭೀಮಯ್ಯ ಅವರು ಶಾಲಾ ದಾಖಲಾತಿಗಳನ್ನು ಇಡಲು ಉತ್ತಮವಾದ ಬೀರು ಹಾಗೂ ಗ್ರಾಮದ ಮತ್ತೋರ್ವ ದಾನಿಗಳಾದ ಚೆರಿಯಪಂಡ ಕೆ. ಪೊನ್ನಪ್ಪ ಅವರು ಶಾಲೆಯ ಉಪಯೋಗಕ್ಕಾಗಿ ೧೦ ಕುರ್ಚಿಗಳನ್ನು ಕೊಡುಗೆಯಾಗಿ ನೀಡಿದ್ದಾರೆ. ದಾನಿಗಳ ಉದಾರ ಸೇವೆಗೆ ಶಾಲೆಯ ಮುಖ್ಯ ಶಿಕ್ಷಕಿ, ಎಸ್.ಡಿ.ಎಂ.ಸಿ. ಪದಾಧಿಕಾರಿಗಳು, ಶಿಕ್ಷಕ ವೃಂದ ಹಾಗೂ ವಿದ್ಯಾರ್ಥಿಗಳು ಹರ್ಷ ವ್ಯಕ್ತಪಡಿಸಿದ್ದಾರೆ.