ವೀರಾಜಪೇಟೆ, ಅ. ೨೮: ವಾಲ್ಮೀಕಿ ಶಾಲೆಯ ಹೊರಗುತ್ತಿಗೆ ನೌಕರರು ಶಾಸಕ ಪೊನ್ನಣ್ಣ ಅವರ ಗೃಹ ಕಚೇರಿಯಲ್ಲಿ ಶಾಸಕರನ್ನು ಭೇಟಿ ಮಾಡಿ ತಮ್ಮ ಸಮಸ್ಯೆ ಬಗೆಹರಿಸಿದ ಹಿನ್ನೆಲೆ ಗೌರವ ಸಲ್ಲಿಸಿದರು.

ವಾಲ್ಮೀಕಿ ಶಾಲೆಯ ಹೊರಗುತ್ತಿಗೆ ನೌಕರರು ಈ ಹಿಂದೆ ತಮ್ಮ ಹಲವು ಸಮಸ್ಯೆಗಳು ಹಾಗೂ ಬೇಡಿಕೆಗಳನ್ನು ಪೊನ್ನಣ್ಣ ಅವರ ಗಮನಕ್ಕೆ ತಂದಿದ್ದರು. ಶಾಸಕರು ಮುಖ್ಯಮಂತ್ರಿಗಳ ಬಳಿಗೆ ಕರೆದೊಯ್ದು ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಮಾತುಕತೆ ನಡೆಸಿದ್ದರು. ಈ ಹಿನ್ನೆಲೆಯಲ್ಲಿ ಹೊರಗುತ್ತಿಗೆ ನೌಕರರ ಪರವಾಗಿ ಆಗಮಿಸಿದ ಮೂರ್ತಿ ಹಾಗೂ ಚೈತ್ರ ಅವರು ಶಾಸಕರನ್ನು ಗೌರವಿಸಿದರು.