ಮಡಿಕೇರಿ, ಅ. ೨೭: ಬಾಳುಗೋಡುವಿನಲ್ಲಿರುವ ಕೊಡವ ಸಮಾಜಗಳ ಒಕ್ಕೂಟದ ಕೊಡವ ಸಾಂಸ್ಕೃತಿಕ ಹಾಗೂ ಕ್ರೀಡಾ ಸಮುಚ್ಚಯದಲ್ಲಿ ೧೨ನೇಯ ವರ್ಷದ ಕೊಡವ ನಮ್ಮೆ ಕಾರ್ಯಕ್ರಮ ನಡೆಯಲಿದ್ದು ಇದರ ಸಿದ್ಧತೆಗಳು ನಡೆಯುತ್ತಿದೆ. ಕೊಡವ ಸಂಸ್ಕೃತಿ, ಆಚಾರ ವಿಚಾರ, ಪದ್ಧತಿ ಪರಂಪರೆಗಳನ್ನು ಕ್ರೀಡಾ ಮನೋಭಾವವನ್ನು ಉಳಿಸಿ - ಬೆಳೆಸಲು ಹಾಗೂ ಯುವ ಜನಾಂಗದಲ್ಲಿ ಈ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದೊಂದಿಗೆ ಈ ಹಿಂದೆ ಒಕ್ಕೂಟದ ಅಧ್ಯಕ್ಷರಾಗಿದ್ದ ಮಲ್ಲೇಂಗಡ ದಾದಾ ಬೆಳ್ಯಪ್ಪ ಅವರ ಅವಧಿಯಲ್ಲಿ ಅಂತರ ಕೊಡವ ಸಮಾಜಗಳ ನಡುವೆ ಹಾಕಿ ಪಂದ್ಯಾಟ, ಹಗ್ಗಜಗ್ಗಾಟ ಸೇರಿದಂತೆ ಕೊಡವ ಜನಪದ ಕಲೆಗಳ ಪೈಪೋಟಿಯನ್ನು ಹಬ್ಬದ ರೀತಿಯಲ್ಲಿ ಆಯೋಜಿಸುವ ಮೂಲಕ ಕೊಡವ ನಮ್ಮೆ ಎಂಬ ಹೆಸರಿನಲ್ಲಿ ಈ ಕಾರ್ಯಕ್ರಮ ಆರಂಭಿಸಲಾಗಿತ್ತು.
ಇದೀಗ ೧೨ನೇಯ ವರ್ಷದ ಕೊಡವ ನಮ್ಮೆ ನವಂಬರ್ ೬ ರಿಂದ ೯ರತನಕ ನಡೆಯಲಿದ್ದು, ಬಾಳುಗೋಡುವಿನ ಫೀ.ಮಾ. ಕಾರ್ಯಪ್ಪ ಸಾಂಸ್ಕೃತಿಕ ಕೇಂದ್ರ ಸಜ್ಜಾಗುತ್ತಿದೆ. ಕೊಡಗು ಸೇರಿದಂತೆ ರಾಜ್ಯದ ಇತರೆಡೆ ಹಾಗೂ ಹೊರಭಾಗದಲ್ಲಿ ಸುಮಾರು ೩೫ ಕೊಡವ ಸಮಾಜಗಳಿದ್ದು, ಈ ಕಾರ್ಯಕ್ರಮ ಅಂತರ ಕೊಡವ ಸಮಾಜಗಳ ನಡುವಿನ ಸ್ಪರ್ಧೆಯಾಗಿ ವಿಜೃಂಭಣೆಯೊAದಿಗೆ ವರ್ಷಂಪ್ರತಿ ಜರುಗುತ್ತಿದೆ.
ಕಳೆದ ವರ್ಷದ ಕೊಡವ ನಮ್ಮೆಯಲ್ಲಿ ೧೫ಕ್ಕೂ ಅಧಿಕ ಕೊಡವ ಸಮಾಜಗಳು ಪಾಲ್ಗೊಂಡಿದ್ದವು. ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಎಂಟು ಬಗೆಯ ಜನಪದ ಪೈಪೋಟಿಯಲ್ಲಿ ಸುಮಾರು ೭೦ ತಂಡಗಳು ಭಾಗವಹಿಸಿದ್ದವು. ಹಾಕಿ, ಹಗ್ಗಜಗ್ಗಾಟ, ಭಾರದಗುಂಡು ಸ್ಪರ್ಧೆ, ಪುರುಷ ಹಾಗೂ ಮಹಿಳಾ ತಂಡಗಳಿಗೆ ಪ್ರತ್ಯೇಕವಾಗಿ ನಡೆಯಲಿದೆ. ಇದರೊಂದಿಗೆ ಜನಾಂಗದವರಿಗೆ ಮುಕ್ತ ತೆಂಗಿನ ಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆಯೂ ಜರುಗಲಿದೆ.
ಮಹಿಳಾ ಹಾಕಿ ಸೇರ್ಪಡೆ
ಈ ಬಾರಿ ವಿಶೇಷವಾಗಿ ಅಂತರ ಕೊಡವ ಸಮಾಜಗಳ ನಡುವೆ ೫ ಎ ಸೈಡ್ ಹಾಕಿ ಪಂದ್ಯಾವಳಿಯನ್ನು ಆಯೋಜಿಸಲು ನಿರ್ಧರಿಸಲಾಗಿದೆ. ಈ ತನಕ ಪುರುಷರ ವಿಭಾಗದಲ್ಲಿ ೧೫ ಕೊಡವ ಸಮಾಜ ಹಾಗೂ ಮಹಿಳಾ ವಿಭಾಗದಲ್ಲಿ ೭ ಕೊಡವ ಸಮಾಜಗಳು ಹೆಸರು ನೋಂದಾಯಿಸಿಕೊAಡಿವೆ. ಸಾಂಸ್ಕೃತಿಕ ಸ್ಪರ್ಧೆಗೂ ಕಳೆದ ವರ್ಷದಷ್ಟೇ ತಂಡಗಳು ಪಾಲ್ಗೊಳ್ಳುವ ನಿರೀಕ್ಷೆಯಿದೆ.
ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಕೋಲಾಟ್, ಬೊಳಕಾಟ್, ಪರೆಯಕಳಿ, ಕತ್ತಿಯಾಟ್, ಉಮ್ಮತಾಟ್, ಸಮ್ಮಂದ ಅಡ್ಕ್ವೊ, ಬಾಳೋಪಾಟ್ ಹಾಗೂ ತಾಲಿಪಾಟ್ ಸ್ಪರ್ಧೆಯಲ್ಲಿ ವಿವಿಧ ಕೊಡವ ಸಮಾಜಗಳು ೪ಐದÀನೇ ಪುಟಕ್ಕೆ ಸ್ಪರ್ಧಿಸಬಹುದಾಗಿದ್ದು, ನೋಂದಣಿಗೆ ತಾ. ೩೦ ಕೊನೆಯ ದಿನವಾಗಿದೆ. ಕ್ರೀಡಾ ಸಂಚಾಲಕರಾಗಿ ಕಂಬೀರAಡ ಕಿಟ್ಟು ಕಾಳಪ್ಪ ಹಾಗೂ ತಂಬುಕುತ್ತೀರ ಮಧು, ಸಾಂಸ್ಕೃತಿಕ ಸಂಚಾಲಕರಾಗಿ ಕಾಳಿಮಾಡ ಎಂ. ಮೋಟಯ್ಯ ಹಾಗೂ ಹಂಚೆಟ್ಟಿರ ಮನು ಮುದ್ದಪ್ಪ, ಊಟೋಪಚಾರ ಸಮಿತಿ ಸಂಚಾಲಕರಾಗಿ ವೀರಾಜಪೇಟೆ ಕೊಡವ ಸಮಾಜದ ಅಧ್ಯಕ್ಷ ಅಮ್ಮುಣಿಚಂಡ ರವಿ ಉತ್ತಪ್ಪ ಕಾರ್ಯನಿರ್ವಹಿಸುತ್ತಿದ್ದಾರೆ. ಒಕ್ಕೂಟದ ಅಧ್ಯಕ್ಷ ಕಳ್ಳಿಚಂಡ ವಿಷ್ಣು ಕಾರ್ಯಪ್ಪ, ಕಾರ್ಯದರ್ಶಿ ವಾಟೇರಿರ ಶಂಕರಿ ಪೂವಯ್ಯ ಹಾಗೂ ತಂಡದ ನೇತೃತ್ವದಲ್ಲಿ ನಾಲ್ಕು ದಿನಗಳ ಕಾರ್ಯಕ್ರಮ ಜರುಗಲಿದೆ. ವಿವಿಧ ಕೊಡವ ಸಮಾಜ ತಂಡಗಳು ಸ್ಪರ್ಧೆಗಾಗಿ ತಾಲೀಮು ನಡೆಸುತ್ತಿವೆ.
ಕಾರ್ಯಕ್ರಮ ವಿವರ
ನವಂಬರ್ ೬ ರಂದು ಪೂಜೆಯೊಂದಿಗೆ ಕ್ರೀಡಾ ಸ್ಪರ್ಧೆ ಆರಂಭಗೊಳ್ಳಲಿದೆ. ಅಂದು ಹಾಕಿ ಪಂದ್ಯಾಟದ ಉದ್ಘಾಟನೆ ಹಾಗೂ ತೆಂಗಿನ ಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆ ನಡೆಯಲಿದೆ. ತಾ ೭ ರಂದು ಕ್ರೀಡಾ ಸ್ಪರ್ಧೆಗಳು ಮುಂದುವರಿಯಲಿದ್ದು, ೫ ಎ ಸೈಡ್ ಮಹಿಳಾ ಹಾಕಿ ಪಂದ್ಯ ನಡೆಯಲಿದೆ. ತಾ. ೮ ರಂದು ಒಕ್ಕೂಟದ ಆವರಣದಲ್ಲಿರುವ ಯುದ್ಧ ಸ್ಮಾರಕದಲ್ಲಿ ಜಿಲ್ಲೆಯ ಹುತಾತ್ಮ ಯೋಧರಿಗೆ ಗೌರವ ನಮನ ಸಲ್ಲಿಕೆ, ಹಗ್ಗಜಗ್ಗಾಟ, ಭಾರದಗುಂಡು ಎಸೆತ ಸ್ಪರ್ಧೆ ನಡೆಯಲಿದೆ.
ತಾ. ೯ ರಂದು ಬೆಳಿಗ್ಗೆಯಿಂದ ಸಾಂಸ್ಕೃತಿಕ ಸ್ಪರ್ಧೆಗಳು ಹಾಗೂ ಕ್ರೀಡಾಕೂಟದ ಅಂತಿಮ ಸ್ಪರ್ಧೆಯೊಂದಿಗೆ ಈ ಬಾರಿಯ ಕೊಡವ ನಮ್ಮೆ ಮುಕ್ತಾಯಗೊಳ್ಳಲಿದೆ. ಎಲ್ಲಾ ದಿನಗಳಲ್ಲೂ ಊಟ ವ್ಯವಸ್ಥೆಯನ್ನು ಕಲ್ಪಿಸಲಾಗುವುದು. ಕಾರ್ಯಕ್ರಮದಲ್ಲಿ ಜಿಲ್ಲೆಯ ಜನಪ್ರತಿನಿಧಿಗಳು ಇನ್ನಿತರ ಪ್ರಮುಖರು ಪಾಲ್ಗೊಳ್ಳಲಿದ್ದಾರೆ ಎಂದು ಒಕ್ಕೂಟದ ಕಾರ್ಯದರ್ಶಿ ಶಂಕರಿ ಪೂವಯ್ಯ ಮಾಹಿತಿ ನೀಡಿದ್ದಾರೆ. ರಾಜ್ಯ ಸರಕಾರದ ಮೂಲಕ ಒಕ್ಕೂಟಕ್ಕೆ ದೊರೆತ್ತಿರುವ ರೂ. ೬ ಕೋಟಿ ಅನುದಾನದಲ್ಲಿ ವಿವಿಧ ಅಭಿವೃದ್ಧಿ ಕೆಲಸಗಳು ನಡೆಯುತ್ತಿವೆ, ಕ್ರೀಡಾ ಮೈದಾನ ಹಾಗೂ ಗ್ಯಾಲರಿ ನಿರ್ಮಾಣ ಕಾರ್ಯವೂ ಸೇರಿದಂತೆ ಈಗಾಗಲೇ ಶೇ. ೮೦ ರಷ್ಟು ಕೆಲಸ ಪೂರ್ಣಗೊಂಡಿದೆ.