ಗೋಣಿಕೊಪ್ಪಲು, ಅ. ೨೮: ಕೊಡಗಿನ ಸಂಸ್ಕೃತಿಯಲ್ಲಿ ದಾನ, ಧರ್ಮ ಪ್ರಮುಖ ಸ್ಥಾನ ಹೊಂದಿದೆ. ನಮ್ಮ ಸುತ್ತಮುತ್ತಲಿನಲ್ಲಿರುವ ಸಂಘ ಸಂಸ್ಥೆ ಹಾಗೂ ಶಾಲೆಗಳಿಗೆ ಕೊಡಗಿನ ದಾನಿಗಳು ನೀಡಿರುವ ದಾನದಿಂದಾಗಿ ಇಂದು ಕೂಡ ಶಾಲಾ ಕಾಲೇಜುಗಳು ಯಶಸ್ವಿಯಾಗಿ ಮುಂದುವರೆಯುತ್ತಿದೆ. ಪ್ರತಿ ನಾಗರಿಕನು ಕೈಲಾದ ರೀತಿಯಲ್ಲಿ ದಾನ ಮಾಡುವುದರಿಂದ ಆತ್ಮತೃಪ್ತಿ ಲಭಿಸಲಿದೆ ಎಂದು ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ, ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಎ.ಎಸ್. ಪೊನ್ನಣ್ಣ ಅಭಿಪ್ರಾಯ ವ್ಯಕ್ತಪಡಿಸಿದರು.
ಹಾತೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸುತ್ತಮುತ್ತಲಿನ ನಾಲ್ಕು ಗ್ರಾಮಗಳನ್ನೊಳಗೊಂಡ ಭಗವತಿ ಯುವತಿ ಮಂಡಳಿಯ ಆಡಳಿತ ಮಂಡಳಿ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಅಭಿನಂದನಾ ಸಮಾರಂಭದಲ್ಲಿ ಶಾಸಕ ಪೊನ್ನಣ್ಣ ಸಮಾಜ ಸೇವಕ, ಹಾತೂರು ಗ್ರಾಮ ಪಂಚಾಯಿತಿಯ ಸದಸ್ಯ ವನಭದ್ರಕಾಳಿ ದೇವಾಲಯದ ಅಧ್ಯಕ್ಷ ಕೊಕ್ಕಂಡ ಡಿ. ಗಿಣಿ ಗಣಪತಿಯವರಿಗೆ ಸನ್ಮಾನಿಸಿ ಗೌರವಿಸಿದರು.
ಮುಂದುವರಿದು ಮಾತನಾಡಿದ ಅವರು, ಸಮಾಜವು ದಾನ ಮಾಡಿದವರನ್ನು ಗುರುತಿಸುವಂತಾಗಬೇಕು. ಇದರಿಂದ ಮತ್ತೊಬ್ಬ ದಾನಿಗಳಿಗೆ ಪ್ರೇರಣೆಯಾಗಲಿದೆ. ಸಾರ್ವಜನಿಕರ ಹಿತಕ್ಕಾಗಿ ರಸ್ತೆ ನಿರ್ಮಾಣ ಮಾಡುವ ಸಂದರ್ಭ ಕೆಲವು ಅಡಿಗಳ ಜಾಗವನ್ನು ತೆರವುಗೊಳಿಸುವ ಸಂದರ್ಭ ಹಿಂದೇಟು ಹಾಕುವವರೇ ಇಂದಿನ ಸಮಾಜದಲ್ಲಿ ಕಾಣಬಹುದಾಗಿದೆ. ಗ್ರಾಮದ ಅಭಿವೃದ್ಧಿಗಾಗಿ ಕೆಲವೊಮ್ಮೆ ಉತ್ತಮ ಕೆಲಸಕ್ಕೆ ಸಹಕರಿಸುವಂತಾಗಬೇಕು. ಸಮಾಜಮುಖಿ ಕಾರ್ಯದಲ್ಲಿ ಪ್ರತಿ ನಾಗರಿಕ ತೊಡಗಿಸಿಕೊಳ್ಳುವಂತಾಗಬೇಕು ಎಂದು ನೆರೆದಿದ್ದ ನಾಗರಿಕರಿಗೆ ಕರೆ ನೀಡಿದರು.
ಭಗವತಿ ಯುವತಿ ಮಂಡಳಿಯ ಅಧ್ಯಕ್ಷ ಕೊಕ್ಕಂಡ ರೂಪ ಭೀಮಯ್ಯ ಪ್ರಾಸ್ತಾವಿಕವಾಗಿ ಮಾತನಾಡಿ, ಸಮಾಜಸೇವಕರಾದ ಕೊಕ್ಕಂಡ ಗಿಣಿ ಗಣಪತಿಯವರು ಗ್ರಾಮದ ಅಭಿವೃದ್ಧಿಗೆ ಸಾಕಷ್ಟು ರೀತಿಯಲ್ಲಿ ಸಹಕಾರ ನೀಡುತ್ತಲೇ ಬಂದಿದ್ದಾರೆ. ಇಂತಹ ಸಮಾಜಸೇವಕರನ್ನು ಗುರುತಿಸುವ ಕಾರ್ಯ ಕೈಗೊಂಡಿದ್ದೇವೆ. ಸಾಮಾಜಿಕ, ಶೈಕ್ಷಣಿಕ ಕ್ಷೇತ್ರಕ್ಕೆ ಗಿಣಿ ಗಣಪತಿಯವರು ಕೇವಲ ಒಂದು ಗಂಟೆಯಲ್ಲಿ ೧೮ ಲಕ್ಷ ಹಣವನ್ನು ವಿವಿಧ ಕಾರ್ಯಕ್ಕೆ ನೀಡುವ ಮೂಲಕ ಉದಾರತೆಯನ್ನು ತೋರಿದ್ದಾರೆ.ಇಂದಿನ ಸಮಾಜದಲ್ಲಿ ಇಂತಹ ದಾನಿಗಳಿರುವುದರಿಂದ ಸಾರ್ವಜನಿಕ ಕ್ಷೇತ್ರದ ಕೆಲಸ ಕಾರ್ಯಗಳು ಸರ್ಕಾರದ ಅನುದಾನವನ್ನು ನಿರೀಕ್ಷೆ ಮಾಡದೆ ಅಭಿವೃದ್ದಿ ಕೆಲಸಗಳು ಮುಂದುವರೆಯಲು ಸಹಾಯಕವಾಗಿದೆ ಎಂದರು.
ದಾನಿಗಳಾದ ಕೊಕ್ಕಂಡ ಗಿಣಿ ಗಣಪತಿ ಅವರು, ಭಗವತಿ ಯುವತಿ ಮಂಡಳಿಯ ಸನ್ಮಾನ ಸ್ವೀಕರಿಸಿ ಮಾತನಾಡಿ, ಗಳಿಕೆಯ ಒಂದು ಭಾಗವನ್ನು ಸಮಾಜಕ್ಕೆ ನೀಡಬೇಕೆಂಬ ನಿರ್ಧಾರ ಕೈಗೊಂಡಿದ್ದೆ, ಇದೀಗ ಅಂತಹ ಅವಕಾಶ ಬಂದೊದಗಿರುವುದರಿAದ ಸಮಾಜದ ಬೇರೆ ಬೇರೆ ಕ್ಷೇತ್ರಕ್ಕೆ ಕೈಲಾದ ಸಹಕಾರವನ್ನು ನೀಡಿದ್ದೇನೆ. ಇದರ ಸದ್ಬಳಕೆ ಆಗಲಿ ಎಂದರು.
ಕೊಡಗು ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ನ ಅಧ್ಯಕ್ಷ ಕೊಡಂದೇರ ಬಾಂಡ್ ಗಣಪತಿ ಅಧ್ಯಕ್ಷತೆ ವಹಿಸಿ ಮಾತನಾಡಿ, ನಮ್ಮ ನಡುವೆ ಸಾಕಷ್ಟು ದಾನಿಗಳು ನಮ್ಮೊಂದಿಗಿದ್ದಾರೆ. ವಿವಿಧ ಕ್ಷೇತ್ರಕ್ಕೆ ಯಾವುದೇ ಫಲಾಪೇಕ್ಷೆ ಬಯಸದೆ ಸಹಕಾರ ನೀಡುತ್ತಲೇ ಬಂದಿದ್ದಾರೆ. ಅಂತಹವರ ಸಾಲಿನಲ್ಲಿ ಸಮಾಜಸೇವಕ ಕೊಕ್ಕಂಡ ಗಿಣಿ ಗಣಪತಿ ಅವರು ಕೂಡ ಒಬ್ಬರಾಗಿದ್ದಾರೆ. ಇವರ ಉದಾರತೆಯನ್ನು ಸಮಾಜ ಗುರುತಿಸಿದೆ ಎಂದರು.
ಸಮಾರAಭದಲ್ಲಿ ಹಾತೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಕೊಕ್ಕಂಡ ನಮಿತ ಬಿದ್ದಪ್ಪ, ಹಾತೂರು ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಕುಲ್ಲಚಂಡ ಎಸ್. ಚಿಣ್ಣಪ್ಪ, ಹಾತೂರು ಪ್ರೌಢಶಾಲೆಯ ಅಧ್ಯಕ್ಷ ಡಿ.ಎ. ಚಂದ್ರಶೇಖರ್, ವಿಎಸ್ಎಸ್ಎನ್ ಮಾಜಿ ನಿರ್ದೇಶಕಿ ಕೊಂಗAಡ ಎಸ್. ಗಿರಿಜಾ ಪೊನ್ನಮ್ಮ ದೊಡ್ಡಮನೆ ಬೋಜಮ್ಮ ರಾಮಚಂದ್ರ, ನಿವೃತ್ತ ಆರೋಗ್ಯ ಅಧಿಕಾರಿ ಕೊಂಗೇಪAಡ ಸುಶೀಲ ಮಾಚಯ್ಯ, ಕಾರ್ಯದರ್ಶಿ ಕುಪ್ಪಂಡ ಮಾಲಾ ಪೂವಮ್ಮ ಸೇರಿದಂತೆ ಅನೇಕ ಗಣ್ಯರು ಪಾಲ್ಗೊಂಡಿದ್ದರು.
ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷೆ, ಭಗವತಿ ಮಂಡಳಿಯ ಅಧ್ಯಕ್ಷೆ ಕೊಕ್ಕಂಡ ರೂಪ ಭೀಮಯ್ಯ ಸ್ವಾಗತಿಸಿ, ನಿವೃತ್ತ ಶಿಕ್ಷಕಿ ದಮಯಂತಿ ನಿರೂಪಿಸಿ, ಕಾರ್ಯದರ್ಶಿ ಟಿ.ಜಿ. ಲತ ಕುಮಾರಿ ವಂದಿಸಿದರು.