ಕುಶಾಲನಗರ, ಅ. ೨೮: ಕುಶಾಲನಗರದ ಪ್ರಥಮ ಮಹಿಳಾ ಸಹಕಾರ ಸಂಘ ಖ್ಯಾತಿಯ ಶಾರದಾ ಮಹಿಳಾ ಪತ್ತಿನ ಸಹಕಾರ ಸಂಘದ ನೂತನ ಆಡಳಿತ ಮಂಡಳಿಗೆ ಚುನಾವಣೆ ನಡೆದು ಫಲಿತಾಂಶ ಹೊರಬಿದ್ದಿದೆ.

ಮುಂದಿನ ಐದು ವರ್ಷಗಳ ಅವಧಿಗೆ ಹಿಂದಿನ ಸಾಲಿನ ಅಧ್ಯಕ್ಷರಾಗಿರುವ ಶಾಂತ ಶ್ರೀಪತಿ ಅವರ ನೇತೃತ್ವದ ತಂಡ ಮತ್ತೆ ಜಯಭೇರಿಗಳಿಸಿದೆ. ಮುಂದಿನ ಐದು ವರ್ಷಗಳ ಅವಧಿಗೆ ಶಾಂತ ಶ್ರೀಪತಿ, ಮಂಜುಳಾ ನಾಗೇಂದ್ರ ಗುಪ್ತ, ಕೆ.ಎಲ್. ಕವಿತಾ, ಉಮಾ ಕೃಷ್ಣರಾಜ್, ಬಿ.ಎಸ್. ಆಶಾ, ಇಂದಿರಾ ತಿಮ್ಮಪ್ಪ, ಮೋಕ್ಷ ಲಕ್ಷಿö್ಮ ನಾರಾಯಣ, ರೇಖಾ ಕಮಲೇಶ್, ಸುನಿತಾ ವಿಮಲ್ ನಿರ್ದೇಶಕರುಗಳಾಗಿ ಆಯ್ಕೆಯಾಗಿದ್ದಾರೆ.

ಸ್ಪರ್ಧೆಯಲ್ಲಿದ್ದ ಟಿ.ಪಿ. ಜಯ, ಡಿ.ಎಲ್. ನಂದಿನಿ, ನಿರ್ಮಲ ಶಿವದಾಸ್, ಮತ್ತು ಎನ್.ಎ. ಸುಶೀಲ ಅವರು ಸೋಲು ಅನುಭವಿಸಿದ್ದಾರೆ. ಚುನಾವಣಾ ಅಧಿಕಾರಿಯಾಗಿ ಮಡಿಕೇರಿ ಸಹಕಾರ ಇಲಾಖೆಯ ಅಧಿಕಾರಿ ಪ್ರದೀಪ್ ಕುಮಾರ್ ಕಾರ್ಯನಿರ್ವಹಿಸಿದರು.