ನಾಪೋಕ್ಲು, ಅ. ೨೮: ಆದಿಕವಿ ಹರದಾಸ ಅಪ್ಪನೆರವಂಡ ಅಪ್ಪಚ್ಚಕವಿ ಅವರ ಜನ್ಮದಿನದ ಪ್ರಯುಕ್ತ ಶಾಲಾ ವಿದ್ಯಾರ್ಥಿಗಳಿಗೆ ಶಾಲಾ ಬ್ಯಾಗ್ ಮತ್ತು ಸಿಹಿ ವಿತರಿಸಿದರು. ಅಪ್ಪಚಕವಿ ಮೊಮ್ಮಗ ಅಪ್ಪನೆರವಂಡ ವಿನು ಮಾದಪ್ಪ ಅವರು ಅಪ್ಪಚಕವಿ ಅವರ ಜನ್ಮದಿನದ ಪ್ರಯುಕ್ತ ಹಮ್ಮಿಕೊಳ್ಳಲಾಗದÀ ಕಾರ್ಯಕ್ರಮದಲ್ಲಿ ಪಾರಾಣೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳಿಗೆ ಶಾಲಾ ಬ್ಯಾಗ್ ಮತ್ತು ಸಿಹಿ ವಿತರಿಸಿದರು.
ಈ ಸಂದರ್ಭ ಶಾಲಾ ಮಕ್ಕಳಿಗೆ ಕೇರಂ ಪೈಪೋಟಿ ಆಯೋಜಿಸಲಾಗಿತ್ತು. ಇದರಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಥಮ, ದ್ವಿತೀಯ ತೃತೀಯ ನಗದು ಬಹುಮಾನ ನೀಡಿ ಪ್ರೋತ್ಸಾಹಿಸಲಾಯಿತು. ಪ್ರತಿ ವರ್ಷ ತಮ್ಮ ತಾತನವರ ನೆನಪಿನಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ಉಪಯುಕ್ತವಾದ ವಸ್ತುಗಳನ್ನು ನೀಡುತ್ತಿದ್ದಾರೆ. ಶಾಲಾ ಮುಖ್ಯ ಶಿಕ್ಷಕರಾದ ವೇದಪ್ರಸಾದ್, ಅತಿಥಿ ಶಿಕ್ಷಕಿ ಮಂಜುಳಾ ಮತ್ತು ಅಪ್ಪನೆರವಂಡ ರಾಜೇಶ್, ನಯನ ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.