ವೀರಾಜಪೇಟೆ, ಅ. ೨೮: ನಶೆಮುಕ್ತ ಭಾರತ ಪರಿಕಲ್ಪನೆಯೊಂದಿಗೆ ವೀರಾಜಪೇಟೆಯ ತಾಲೂಕು ಮೈದಾನದಲ್ಲಿ ಆಯೋಜಿಸಲಾಗಿದ್ದ ಆಲ್ ಇಂಡಿಯಾ ೫' ರ ಡ್ರಗ್ಸ್ ಮುಕ್ತ ಭಾರತ ಫುಟ್ಬಾಲ್ ಪಂದ್ಯಾವಳಿಯಲ್ಲಿ ನಶೆಯ ದುಷ್ಪರಿಣಾಮಗಳನ್ನು ಸಾರುವ ಸದುದ್ದೇಶದಿಂದ ಪಂದ್ಯಾಟಕ್ಕೆ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ ಅವರು ಸಾಂಕೇತಿಕವಾಗಿ ನಶೆಯ ಚಿತ್ರದ ನಕಲನ್ನು ಸುಡುವ ಮೂಲಕ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಶಾಸಕರು, ಜಗತ್ತಿನಾದ್ಯಂತ ಬಹುತೇಕ ಎಲ್ಲಾ ರಾಷ್ಟçಗಳು ಫುಟ್ಬಾಲ್ ಕ್ರೀಡೆಗೆ ವಿಶೇಷ ಆದ್ಯತೆ ನೀಡುತ್ತಿವೆ. ನಮ್ಮ ದೇಶದಲ್ಲಿಯೂ ಫುಟ್ಬಾಲ್ ಕ್ರೀಡೆ ಜನಪ್ರಿಯಗೊಳ್ಳುತ್ತಿದ್ದು, ಇಂದು ಸಾಮಾಜಿಕ ಕಳಕಳಿಯ ಉದ್ದೇಶದಿಂದ ಆಯೋಜನೆಗೊಂಡಿರುವ ಈ ಪಂದ್ಯಾವಳಿಯು ನಾಡಿಗೆ ಉತ್ತಮ ಫುಟ್ಬಾಲ್ ಪಟುಗಳನ್ನು ನೀಡುವಂತಾಗಲಿ ಎಂದು ಆಶಿಸಿದರು.
ಈ ಸಂದರ್ಭ ಪುರಸಭೆ ಸದಸ್ಯರು ಮಹಮ್ಮದ್ ರಾಫಿ, ಡಿಸಿಸಿ ಸದಸ್ಯ ಸತೀಶ್, ಮಂಜುನಾಥ್ ಹಾಗೂ ಪಂದ್ಯಾಟದ ಆಯೋಜಕರು, ಕ್ರೀಡಾ ಪ್ರೇಮಿಗಳು ಹಾಗೂ ಪ್ರಮುಖರು ಉಪಸ್ಥಿತರಿದ್ದರು.