ಚೆಯ್ಯಂಡಾಣೆ, ಅ. ೩೦: ವೀರಾಜಪೇಟೆ ಸಮೀಪದ ಬೋಟೋಳಿ ಗ್ರಾಮ ಪಂಚಾಯಿತಿಗೆ ಒಳಪಟ್ಟ ಹೆಗ್ಗಳ ಗ್ರಾಮದ ನಿವಾಸಿ ವಿಶೇಷಚೇತನರಾದ ಅಂಗಾರ ಮಂಜು ಹಾಗೂ ಅವರ ವಯೋವೃದ್ಧ ತಂದೆ ವಾಸಿಸುವ ಮನೆಗೆ ಬಾಗಿಲು ಅಳವಡಿಸಿ ಅವರ ಕುಟುಂಬಕ್ಕೆ ಅನುಗ್ರಹ ಜನಸೇವಾ ಚಾರಿಟೇಬಲ್ ಟ್ರಸ್ಟ್ ಕೊಡಗು ಆಸರೆಯಾಗಿದೆ.
ಟ್ರಸ್ಟ್ ಆಡಳಿತ ಮಂಡಳಿಯ ಸೈಫುದ್ದಿನ್ ಮಾತನಾಡಿ, ಹೆಗ್ಗಳ ಗ್ರಾಮದ ವಿಶೇಷಚೇತನ ಮಂಜು ಅವರ ಮನೆಯ ಬಾಗಿಲು ದುಸ್ಥಿತಿಯಲ್ಲಿದ್ದು ಹಾಗೂ ಸುಣ್ಣಬಣ್ಣ ಬಳಿದು ಕೊಡಬೇಕೆಂದು ಅನುಗ್ರಹ ಜನಸೇವಾ ಚಾರಿಟೇಬಲ್ ಟ್ರಸ್ಟ್ಗೆ ಅರ್ಜಿ ಬಂದಿದ್ದು ಅದನ್ನು ಪರಿಗಣಿಸಿದ ಆಡಳಿತ ಮಂಡಳಿ ಆದಷ್ಟು ಶೀಘ್ರದಲ್ಲಿ ಇವರ ಮನೆಗೆ ಬಾಗಿಲು ನಿರ್ಮಿಸಿಕೊಡಲು ತೀರ್ಮಾನಿಸಿತು. ಇದರ ಭಾಗವಾಗಿ ಟ್ರಸ್ಟ್ ಅಧ್ಯಕ್ಷ ಫತಾಯಿ ಕಡಂಗ ಹಾಗೂ ಉಮ್ಮರ್ ಎಡಪಾಲ ಅವರ ನೇತೃತ್ವದಲ್ಲಿ ಬಾಗಿಲು ಅಳವಡಿಸಿ ಕೊಟ್ಟಿದ್ದೇವೆ. ಇದಕ್ಕೆ ಹಲವಾರು ದಾನಿಗಳು ಸಹಕರಿಸಿದ್ದಾರೆ ಎಂದರು.
ಬೇಟೋಳಿ ಗ್ರಾಮ ಪಂಚಾಯಿತಿಯ ಗ್ರಾಮೀಣ ಪುನರ್ ವಸತಿ ಕಾರ್ಯಕರ್ತೆ ಆಯಿಷಾ ಮಾತನಾಡಿ, ವಿಶೇಷಚೇತನರಿಗೆ ಆಸರೆಯಾದ ಟ್ರಸ್ಟ್ನ ಕಾರ್ಯ ಶ್ಲಾಘನೀಯವಾದದ್ದು ಎಂದರು.
ವಿಶೇಷಚೇತನ ಮಂಜು ಮಾತನಾಡಿ, ಮನವಿಗೆ ಸ್ವಂದಿಸಿ ಬಾಗಿಲು ನಿರ್ಮಿಸಿಕೊಟ್ಟ ಅನುಗ್ರಹ ಜನಸೇವಾ ಚಾರಿಟೇಬಲ್ ಟ್ರಸ್ಟ್ ಹಾಗೂ ಸಹಕರಿಸಿದ ಎಲ್ಲರಿಗೂ ಧನ್ಯವಾದ ಸಲ್ಲಿಸಿದರು. ಈ ಸಂದರ್ಭ ಅನುಗ್ರಹ ಜನಸೇವಾ ಚಾರಿಟೇಬಲ್ ಟ್ರಸ್ಟ್ನ ಅಧ್ಯಕ್ಷ ಫತಾಯಿ ಕಡಂಗ, ಪ್ರಧಾನ ಕಾರ್ಯದರ್ಶಿ ರಜಾಕ್ ಚೆಯ್ಯಂಡಾಣೆ, ಕೋಶಾಧಿಕಾರಿ ಹಾಗೂ ಪತ್ರಕರ್ತ ಅಶ್ರಫ್, ಹ್ಯಾರಿಸ್ ಕೊಂಡAಗೇರಿ ಮತ್ತಿತರರು ಉಪಸ್ಥಿತರಿದ್ದರು.