ಮಡಿಕೇರಿ, ಅ. ೩೦: ಕೊಡಗು ಜಿಲ್ಲಾ ಕಾರ್ಯನಿರತ ಪತ್ರ ಕರ್ತರ ಸಂಘದ ಅಧ್ಯಕ್ಷರಾಗಿ ರಿಪ ಬ್ಲಿಕ್ ವಾಹಿನಿಯ ಜಿಲ್ಲಾ

ವರದಿಗಾರ ಬಾಚರಣಿಯಂಡ ಅನು ಕಾರ್ಯಪ್ಪ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಶಕ್ತಿ ದಿನಪತ್ರಿಕೆಯ ಉಪ ಸಂಪಾದಕ ಹೆಚ್.ಜೆ. ರಾಕೇಶ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ರಾಜ್ಯ ಸಮಿತಿ ಸದಸ್ಯರಾಗಿ ಸವಿತಾ ರೈ, ಜಿಲ್ಲಾ ಉಪಾಧ್ಯಕ್ಷರುಗಳಾಗಿ ನವೀನ್ ಸುವರ್ಣ, ವನಿತಾ ಚಂದ್ರಮೋಹನ್, ಎ.ಎನ್.ವಾಸು , ಕಾರ್ಯದರ್ಶಿಗಳಾಗಿ ಮಲ್ಲಿಕಾರ್ಜುನ, ರಿಜ್ವಾನ್ ಹುಸೇನ್, ಚೆರಿಯಮನೆ ಸುರೇಶ್ ಆಯ್ಕೆಗೊಂಡಿರುವುದನ್ನು ಚುನಾವಣಾಧಿಕಾರಿ ಅಜ್ಜಿಕುಟ್ಟಿರ ಗಿರೀಶ್ ಘೋಷಿಸಿದರು. ಉಳಿದಂತೆ ೧೫ ನಿರ್ದೇಶಕರ ಸ್ಥಾನಕ್ಕೆ ನವೆಂಬರ್ ೯ ರಂದು ಬೆಳಿಗ್ಗೆ ೯ ರಿಂದ ಮಧ್ಯಾಹ್ನ ೩ ಗಂಟೆ ತನಕ ಪತ್ರಿಕಾ ಭವನದಲ್ಲಿ ಚುನಾವಣೆ ನಡೆಯಲಿದೆ.