ಮಡಿಕೇರಿ,ಅ.೩೦: ಮಡಿಕೇರಿಯ ಉದ್ಯಾನ ರಾಜಾಸೀಟ್ ಬಳಿ ವಾಹನ ನಿಲುಗಡೆ ಸುಂಕ ಎತ್ತಾವಳಿ ಹಾಗೂ ಹಸಿಮೀನು ಮಾರುಕಟ್ಟೆ ಟೆಂಡರ್ ವಿಚಾರಗಳು ಒಂದು ಸಭೆಯನ್ನೇ ನುಂಗಿ ಹಾಕಿದರೆ., ಇತ್ತ ದಸರಾ ಸಂದರ್ಭದಲ್ಲಿ ಕೈಗೊಳ್ಳಲಾದ ರಸ್ತೆ ಕಾಮಗಾರಿ ಆಡಳಿತ ಹಾಗೂ ವಿಪಕ್ಷ ಸದಸ್ಯರುಗಳ ವೈಯಕ್ತಿಕ ಪ್ರತಿಷ್ಠೆಯ ಚರ್ಚೆಗಾಗಿ ಮೀಸಲಾಯಿತು.
ಈ ಪ್ರಹಸನ ಕಂಡು ಬಂದಿದು ನಿನ್ನೆ ನಡೆದ ಮಡಿಕೇರಿ ನಗರಸಭೆಯ ಸಾಮಾನ್ಯ ಸಭೆಯಲ್ಲಿ. ನಗರಸಭಾಧ್ಯಕ್ಷೆ ಪಿ.ಕಲಾವತಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ರಾಜಾಸೀಟ್ ಉದ್ಯಾನದ ಬಳಿ ವಾಹನ ನಿಲುಗಡೆ ಟೆಂಡರ್ ಹಣ ಕಟ್ಟಿಲ್ಲ ಎಂಬ ಕಾರಣಕ್ಕಾಗಿ ಟೆಂಡರ್ ರದ್ದುಪಡಿಸಲಾಗಿದೆ ಎಂಬ ವಿಚಾರ ತಿಳಿದು ಬಂದಿದ್ದು, ಈ ಬಗ್ಗೆ ಯಾವದೇ ಮಾಹಿತಿ ಇಲ್ಲವೆಂದು ಸದಸ್ಯ ಅಮೀನ್ ಮೊಹಿಸಿನ್ ಸಭೆಯ ಗಮನಕ್ಕೆ ತಂದರು. ಈ ಸಂದರ್ಭ ಮಾಹಿತಿ ನೀಡಿದ ಪೌರಾಯುಕ್ತ ಹೆಚ್.ಆರ್. ರಮೇಶ್ ಅವರು; ಟೆಂಡರ್ ಪಡೆದ ಗುತ್ತಿಗೆದಾರ ಅರ್ಧದಷ್ಟು ಹಣ ಮಾತ್ರ ಪಾವತಿ ಮಾಡಿದ್ದು, ಈ ಹಿನ್ನೆಲೆಯಲ್ಲಿ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರ ಸೂಚನೆ ಮೇರೆಗೆ ಟೆಂಡರ್ ರದ್ದು ಮಾಡಲಾಗಿದೆ. ದಸರಾ ಕಳೆದ ಬಳಿಕ ಶುಲ್ಕ ವಸೂಲಾತಿ ನಿಲ್ಲಿಸಲಾಗಿದೆ ಎಂದು ತಿಳಿಸಿದರು. ಟೆಂಡರ್‌ದಾರರಿAದ ಬಾಕಿ ವಸೂಲಾತಿ ಮಾಡಿಕೊಂಡು ಮುಂದಿನ ಟೆಂಡರ್ ಕರೆಯುವಂತೆÀ ಅಮೀನ್ ಸಲಹೆ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸದಸ್ಯರುಗಳಾದ ಎಸ್.ಸಿ.ಸತೀಶ್‌ಕುಮಾರ್, ಅಪ್ಪಣ್ಣ ಟೆಂಡರ್ ರದ್ದು ಮಾಡಲು ಕಾನೂನಿನಲ್ಲಿ ಅವಕಾಶವಿದೆಯಾ ಎಂದು ಪ್ರಶ್ನಿಸಿದರಲ್ಲದೆ, ಇದನ್ನು ರದ್ದು ಮಾಡುವದಾದರೆ ಮೀನು, ಮಾಂಸ ಮಾರುಕಟ್ಟೆಯಲ್ಲಿ ಕೂಡ ಯಾರೂ ಟೆಂಡರ್ ಹಣ ಪಾವತಿ ಮಾಡಿಲ್ಲ, ಅವರುಗಳ ಟೆಂಡರ್‌ಗಳನ್ನೂ ರದ್ದು ಮಾಡಿ, ಇಲ್ಲವೇ ಎಲ್ಲರಿಗೂ ಅವಕಾಶ ಕೊಡಿ ಎಂದು ಒತ್ತಾಯ ಮಾಡಿದರು. ಸದಸ್ಯೆ ಶ್ವೇತಾ, ನಾಮ ನಿರ್ದೇಶಿತ ಸದಸ್ಯರುಗಳಾದ ಯಾಕೂಬ್, ಮುದ್ದುರಾಜ್, ಜಗದಿಶ್ ಅವರುಗಳೂ ಕೂಡ ದನಿಗೂಡಿಸಿದರು. ಇದರಿಂದಾಗಿ ನಗರಸಭೆಗೆ ನಷ್ಟ ಆಗಿದೆ, ಇದನ್ನು ಭರಿಸುವವರು ಯಾರು ಎಂದು ಪ್ರಶ್ನಿಸಿದ ಸತೀಶ್, ಈ ಬಗ್ಗೆ ತನಿಖೆಯಾಗಬೇಕು ಎಂದು ಒತ್ತಾಯಿಸಿದರು. ಹೊಸ ಕೋಳಿ ಮಾಂಸದ ಮಳಿಗೆ ನಿರ್ಮಾಣವಾಗಿದ್ದರೂ ವ್ಯಾಪಾರಿಗಳು ಹಳೆಯ ಮಳಿಗೆಗಳಲ್ಲಿ ವ್ಯಾಪಾರ ಮಾಡುತ್ತಿದ್ದಾರೆ. ಹಳೆಯದನ್ನು ಕೆಡವಿ ಹೊಸದರಲ್ಲಿ ಅವಕಾಶ ನೀಡುವಂತೆ ಸದಸ್ಯೆ ಅನಿತಾ ಪೂವಯ್ಯ ಒತ್ತಾಯಿಸಿದರು.
ಮೀನು ಹಾಗೂ ಮಾಂಸ ಮಾರುಕಟ್ಟೆ ವ್ಯವಸ್ಥೆಗಳನ್ನು ನವೆಂಬರ್ ತಿಂಗಳ ಒಳಗಾಗಿ ಪೂರ್ಣಗೊಳಿಸಲಾಗುವದು. ರಾಜಾಸೀಟ್ ಪಾರ್ಕಿಂಗ್‌ಗೆ ಸಂಬAಧಿಸಿದAತೆ ಇ ಟೆಂಡರ್ ಕರೆಯಲಾಗುವದು ಎಂದು ಸಭೆಗೆ ತಿಳಿಸಿದರು. ಯಾವದೇ ಕಾರಣಕ್ಕೂ ರಾಜಾಸೀಟ್ ಬಳಿ ಪಾರ್ಕಿಂಗ್‌ಗೆ ಅವಕಾಶ ನೀಡಬಾರದು, ಅಲ್ಲಿ ಪಾರ್ಕಿಂಗ್ ವ್ಯವಸ್ಥೆಯಿಲ್ಲ, ರಸ್ತೆ ಬದಿ ನಿಲ್ಲಿಸಿ ಶುಲ್ಕ ಪಡೆಯಲು ಅವಕಾಶವಿಲ್ಲವೆಂದು ಸಭೆಯ ಗಮನಕ್ಕೆ ತಂದರು.
ರಸ್ತೆ ಕಾಮಗಾರಿ ಅನುದಾನ..!
ಎನ್‌ಡಿಆರ್‌ಎಫ್ ನಿಧಿಯಡಿ ರಸ್ತೆ ಕಾಮಗಾರಿಗಾಗಿ ಬಿಡುಗಡೆಯಾಗಿದ್ದ ಅನುದಾನ ಕಾಮಗಾರಿ ನಡೆಯದ ಹಿನ್ನೆಲೆಯಲ್ಲಿ ರಾಷ್ಟಿçÃಯ ಹೆದ್ದಾರಿ ಪ್ರಾಧಿಕಾರಕ್ಕೆ ಹೋಗಿದೆ. ಕೆಲಸ ಆಗದ ಹಾಗೆ ಮಾಡಿದ್ದರಿಂದ ಯಾರಿಗೆ ಲಾಭ ಆಯಿತು. ವೈಯಕ್ತಿಕ ರಾಜಕೀಯದಿಂದಾಗಿ ನಗರಸಭೆ ಅಭಿವೃದ್ಧಿ ಕೆಲಸಗಳನ್ನು ಹಾಳು ಮಾಡುವದು ಬೇಡವೆಂದು ಸದಸ್ಯ ಬಿ.ವೈ. ರಾಜೇಶ್ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರನ್ನು ಗುರಿಯಾಗಿರಿಸಿಕೊಂಡು ಆರೋಪ ಮಾಡಿದರು. ಪ್ರತಿಕ್ರಿಯಿಸಿದ ಉಪಾಧ್ಯಕ್ಷ ಮಹೇಶ್ ಜೈನಿ; ಈಗಾಗಲೇ ರಸ್ತೆ ದುರಸ್ತಿ ಕಾಮಗಾರಿಗಾಗಿ ರೂ.೧೦ ಲಕ್ಷ ಮೀಸಲಿಡಲಾಗಿದೆ. ಮಳೆ ಇದ್ದ ಕಾರಣ ಕಾಮಗಾರಿ ವಿಳಂಬವಾಗಿದೆ. ಎಲ್ಲ ವಾರ್ಡ್ಗಳಲ್ಲೂ ಕೆಲಸ ಆಗಲಿದೆ. ಯಾರದೋ ಹೆಸರಿನಲ್ಲಿ ಎನ್‌ಡಿಆರ್‌ಎಫ್ ನಿಧಿಯಡಿ ಕಾಮಗಾರಿ ನಡೆಸುತ್ತಿದ್ದುದನ್ನು ಮಳೆಯ ಕಾರಣದಿಂದ ನಿಲ್ಲಿಸಲಾಗಿದೆ ಎಂದು ಸಮಜಾಯಿಷಿ ನೀಡಿದರು.
ಈ ಸಂದರ್ಭ ಮಾತನಾಡಿದ ರಾಜೇಶ್; ವೈಯಕ್ತಿಕ ಕಾರಣಗಳಿಂದ ಕಾಮಗಾರಿ ನಿಲ್ಲಿಸಲಾಗಿದೆ. ಇದರಿಂದ ಜನರಿಗೆ ದ್ರೋಹವಾಗಿದೆ ಎಂದು ಆರೋಪ ಮಾಡಿದರು. ಪ್ರತಿಕ್ರಿಯಿಸಿದ ಮಹೇಶ್; ನಾವುಗಳು ನಿಯಾಮಾನುಸಾರ ಕೆಲಸ ಮಾಡುತ್ತಿದ್ದೇವೆ. ವೈಯಕ್ತಿಕ ರಾಜಕಾರಣ ಮಾಡುತ್ತಿರುವವರು ನೀವು ಎಂದು ತಿರುಗೇಟು ನೀಡಿದರು. ಕೆಲ ಕಾಲ ಸಭೆ ವೈಯಕ್ತಿಕ ಪ್ರತಿಷ್ಠೆಯ ಕಣವಾಗಿ ಮಾರ್ಪಟ್ಟಿತು. ಅಂತಿಮವಾಗಿ ಎಲ್ಲ ವಾರ್ಡ್ಗಳಲ್ಲೂ ರಸ್ತೆ ದುರಸ್ತಿ ಕಾಮಗಾರಿ ಕೈಗೆತ್ತಿಕೊಳ್ಳುವಂತೆ ತೀರ್ಮಾನಿಸಲಾಯಿತು.
ಕಾಮಗಾರಿ ಬದಲಾವಣೆಗೆ ಆಕ್ಷೇಪ
ನಗರೋತ್ಥಾನ ಯೋಜನೆಯಡಿ ಶೇ.೭೦ರಷ್ಟು ಕೂಡ ಕೆಲಸ ಆಗದಿರುವ ಬಗ್ಗೆ ಸದಸ್ಯ ಅಮೀನ್ ಮಾಹಿತಿ ಬಯಸಿದರು. ಮಾಹಿತಿ ನೀಡಲು ಮುಂದಾದ ಅಧಿಕಾರಿ; ನಗರೋತ್ಥಾನ ನಾಲ್ಕನೇ ಹಂತದ ಕಾಮಗಾರಿಗೆ ರೂ.೪೦ಕೋಟಿ ಬಿಡುಗಡೆಯಾಗಿದ್ದು, ಈ ಪೈಕಿ ೧೨ ಕೋಟಿ ರಸ್ತೆ, ಚರಂಡಿ ಕಾಮಗಾರಿಗೆ ೯.೫೦ ಕೋಟಿ ಕಾವೇರಿ ಕಲಾಕ್ಷೇತ್ರ ನಿರ್ಮಾಣಕ್ಕೆ ಮೀಸಲಿರಿಸಲಾಗಿದೆ. ಬೀದಿ ದೀಪ ಅಳವಡಿಕೆಗೆ ಮೀಸಲಿಟ್ಟ ೧.೫ ಕೋಟಿ ಹಣವನ್ನು ಬದಲಾವಣೆ ಮಾಡಿ ರಾಜಸೀಟ್ ರಸ್ತೆಗೆ ಕಾಂಕ್ರಿಟ್ ರಸ್ತೆ ನಿರ್ಮಾಣಕ್ಕೆ ಸರಕಾರಕ್ಕೆ ಪ್ರಸ್ತಾವನೆ ಕಳುಹಿಸಲಾಗಿದೆ ಎಂದು ಮಾಹಿತಿ ನೀಡುತ್ತಿದ್ದಂತೆ ಎಲ್ಲ ಸದಸ್ಯರುಗಳು ಆಕ್ಷೇಪ ವ್ಯಕ್ತಪಡಿಸಿದರು. ಯಾರದೇ ಗಮನಕ್ಕೆ ತಾರದೆ ಬದಲಾವಣೆ ಮಾಡುವಂತಿಲ್ಲ, ಸಭೆಯ ಗಮನಕ್ಕೆ ತರಬೇಕಿತ್ತು ಎಂದು ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರಲ್ಲದೆ, ಬದಲಾವಣೆ ಮಾಡಿದ ಹಣವನ್ನು ವಾಪಸ್ ತರಿಸಿಕೊಂಡು ಬೀದಿ ದೀಪ ಅಳವಡಿಕೆಗೆ ಬಳಸಿಕೊಳ್ಳಬೇಕು. ಈಗಾಗಲೇ ಅಮೃತ್-೨ ಕಾಮಗಾರಿ ನಡೆಯುತ್ತಿರುವದರಿಂದ ನೀರಿನ ಯೋಜನೆಗೆ ಮೀಸಲಿಟ್ಟ ಹಣವನ್ನು ಬೇರೆ ಕಾಮಗಾರಿಗಳಿಗೆ ಬಳಸಿಕೊಳ್ಳುವಂತೆ ಸೂಚಿಸಿದರು.