ಶನಿವಾರಸಂತೆ, ಅ. ೩೧: ಶನಿವಾರಸಂತೆ ರೋಟರಿ ಕ್ಲಬ್ ತಂಡವು ಕೆ.ಆರ್. ನಗರದ ಶ್ರೀಕೃಷ್ಣರಾಜೇಂದ್ರ ಕ್ರೀಡಾಂಗಣದಲ್ಲಿ ಕೆ.ಆರ್.ನಗರ ರೋಟರಿ ಕ್ಲಬ್ ವತಿಯಿಂದ ನಡೆದ ರೋಟರಿ ಕ್ಲಬ್ ವಲಯ ೬ರ ಕ್ರಿಕೆಟ್ ಪಂದ್ಯಾವಳಿಯಲ್ಲಿ ಭಾಗವಹಿಸಿ ಪ್ರಥಮ ಸ್ಥಾನ ಗಳಿಸಿತು.
ಕೊಡ್ಲಿಪೇಟೆ ರೋಟರಿ ಕ್ಲಬ್ ತಂಡ ರನ್ನರ್ಸ್ ಪ್ರಶಸ್ತಿ ಪಡೆದುಕೊಂಡಿದೆ. ರೋಟರಿ ಕ್ಲಬ್ ವಲಯ ೬ ರಲ್ಲಿನ ಕೆ.ಆರ್. ನಗರ, ಹುಣಸೂರು, ಪಿರಿಯಾಪಟ್ಟಣ ಮಿಡ್ ಟೌನ್, ಮಡಿಕೇರಿ ಮಿಸ್ಟಿ ಹಿಲ್ಸ್, ಸೋಮವಾರಪೇಟೆ, ಶನಿವಾರಸಂತೆ. ಕೊಡ್ಲಿಪೇಟೆ, ಮಡಿಕೇರಿ ಫ್ರೆಂಡ್ಸ್, ಮಲ್ಲೇಶ್ವರ ಆಲೂರುಸಿದ್ದಾಪುರ ಒಟ್ಟು ೯ ತಂಡಗಳು ಪಂದ್ಯಾವಳಿಯಲ್ಲಿ ಭಾಗವಹಿಸಿದ್ದವು.