ಮಡಿಕೇರಿ, ಅ. ೩೧: ನಗರದ ಕೊಡಗು ವಿದ್ಯಾಲಯದ ವಿದ್ಯಾರ್ಥಿನಿಯರು ಬೆಂಗಳೂರಿನಲ್ಲಿ ನಡೆಯಲಿರುವ ಮಿನಿ ಒಲಂಪಿಕ್ಸ್ಗೆ ಆಯ್ಕೆಯಾಗಿದ್ದಾರೆ. ಸುಂಟಿಕೊಪ್ಪದ ನಿವಾಸಿ ಶಾಂತಪ್ಪ ಮತ್ತು ಜ್ಯೋತಿ ಅವರ ಪುತ್ರಿ ಖುಶಿ ಎ.ಎಸ್., ಜಬ್ಬಂಡ ತಿಮ್ಮಯ್ಯ ಹಾಗೂ ರೀನಾ ದಂಪತಿ ಪುತ್ರಿ ಜಿ.ಟಿ. ಕಲ್ಪಿತ ಕಾವೇರಮ್ಮ, ಕೂಪದಿರ ತಿಮ್ಮಯ್ಯ ಮತ್ತು ಪುಷ್ಪ ದಂಪತಿ ಪುತ್ರಿ ಲಿಖಿತಾ ಕೆ.ಟಿ. ಹಾಗೂ ಮಡಿಕೇರಿಯ ಶ್ರೀನಿವಾಸ ಹಾಗೂ ಗೀತಾ ದಂಪತಿ ಪುತ್ರಿ ಆದ್ಯ ರೈ ಬಿ.ಎಸ್. ಇವರುಗಳು ೩ನೇ ಕರ್ನಾಟಕ ಮಿನಿ ಒಲಿಂಪಿಕ್ಸ್ಗೆ ಕೂರ್ಗ್ ಹಾಕಿ ತಂಡ ಪ್ರತಿನಿಧಿಸಲು ಆಯ್ಕೆಯಾಗಿದ್ದಾರೆ.

ನವೆಂಬರ್ ೩ರಿಂದ ೭ರವರೆಗೆ ಬೆಂಗಳೂರಿನಲ್ಲಿ ಮಿನಿ ಒಲಿಂಪಿಕ್ಸ್ ನಡೆಯಲಿದೆ. ಇವರಿಗೆ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕರಾದ ದೀನಾ ಎಚ್.ಡಿ. ಮತ್ತು ಪಾರ್ವತಿ ತರಬೇತಿ ನೀಡುತ್ತಿದ್ದಾರೆ ಎಂದು ಶಾಲಾ ಪ್ರಾಂಶುಪಾಲರಾದ ಸುಮಿತ್ರಾ ಕೆ.ಎಸ್. ತಿಳಿಸಿದ್ದಾರೆ.