ಶ್ರೀಮಂಗಲ, ನ. ೩: ಪೊನ್ನಂಪೇಟೆ ತಾಲೂಕು ಟಿ. ಶೆಟ್ಟಿಗೇರಿಯ ಮಾಯಣಮಾಡ ಮಂದಯ್ಯ ಸ್ಮಾರಕ ಸರ್ಕಾರಿ ಪ್ರೌಢಶಾಲೆಯಲ್ಲಿ ನಡೆದ ಸಮುದಾಯದತ್ತ ಶಾಲಾ ಕಾರ್ಯಕ್ರಮದಲ್ಲಿ ದಾನಿಗಳಾದ ಕೈಬುಲೀರ ಪಾರ್ವತಿ ಬೋಪಯ್ಯರವರು ಪ್ರೌಢಶಾಲೆಯ ಉದ್ಯಾನವನಕ್ಕೆ ರೂ. ೮೭ ಸಾವಿರ ಮೌಲ್ಯದ ಕಾಂಕ್ರೀಟ್ ಬೆಂಚುಗಳನ್ನು ಸೇರಿದಂತೆ ಇದುವರೆಗೆ ಶಾಲೆಗೆ ಒಟ್ಟು ೨.೨೦ ಲಕ್ಷ ರೂಪಾಯಿ ಮೌಲ್ಯದ ವಸ್ತುಗಳನ್ನು ಹಾಗೂ ದತ್ತಿ ನಿಧಿಯನ್ನು ಉದಾರವಾಗಿ ನೀಡಿರುವುದಕ್ಕೆ ಶಾಲಾ ವತಿಯಿಂದ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಎಸ್.ಡಿ.ಎಂ.ಸಿ. ಸದಸ್ಯರು, ಪೋಷಕರು, ಮುಖ್ಯ ಶಿಕ್ಷಕರು, ಸಹಶಿಕ್ಷಕರು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.