ಕುಶಾಲನಗರ, ನ. ೪: ಕುಶಾಲನಗರ ಐತಿಹಾಸಿಕ ಶ್ರೀ ಗಣಪತಿ ದೇವಾಲಯದ ರಥೋತ್ಸವ ಈ ತಿಂಗಳ ೮ ರಂದು ನಡೆಯಲಿದೆ. ಶ್ರೀ ಗಣಪತಿ ವಾರ್ಷಿಕ ರಥೋತ್ಸವ ಅಂಗವಾಗಿ ತಾ.೫ರಿಂದ (ಇಂದಿನಿAದ) ತಾ.೧೪ರ ತನಕ ದೇವಾಲಯದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿವೆ.
ಬೆಳಿÀಗ್ಗೆ ೧೦.೩೦ಕ್ಕೆ ಸತ್ಯನಾರಾಯಣ ಪೂಜೆ ನಂತರ ಭಕ್ತಾದಿಗಳಿಗೆ ತೀರ್ಥ ಪ್ರಸಾದ ವಿನಿಯೋಗ ನಡೆಯಲಿದೆ. ತಾ.೬ ರಂದು ಸಂಜೆ ೫:೩೦ಕ್ಕೆ ಮೂಷಿಕ ವಾಹನ, ತಾ.೭ ರಂದು ಚಂದ್ರಬಿAಬೋತ್ಸವ ಪಲ್ಲಕ್ಕಿ ಉತ್ಸವ ನಡೆಯಲಿದೆ. ತಾ.೮ ರಂದು ದೇವಸ್ಥಾನ ವತಿಯಿಂದ ಮಧ್ಯಾಹ್ನ ೧೨ ಗಂಟೆಗೆ ರಥೋತ್ಸವ ಕಾರ್ಯಕ್ರಮ ಅದ್ದೂರಿಯಾಗಿ ನಡೆಯುವುದು. ರಥೋತ್ಸವದ ದಿನ ಗಾಯತ್ರಿ ಕಲ್ಯಾಣ ಮಂಟಪದಲ್ಲಿ ಮಧ್ಯಾಹ್ನ ಒಂದರಿAದ ನಾಲ್ಕು ಗಂಟೆ ತನಕ ಅನ್ನಸಂತರ್ಪಣೆ ಕಾರ್ಯಕ್ರಮ ನಡೆಯಲಿದೆ. ೯ ರಂದು ವೃಷಭ ವಾಹನ ಸೇವೆ ಮಂಟಪೋತ್ಸವ ೧೦ರಂದು ಅಶ್ವಾರೂಡ ಸೇವೆ ಹೂವಿನ ಪಲ್ಲಕ್ಕಿ ಮಂಟಪೋತ್ಸವ, ೧೧ ರಂದು ಮಯೂರರೂಢ ಸೇವೆ, ೧೪ ರಂದು ಹೋಮ, ವಿವಿಧ ಪೂಜಾ ಕಾರ್ಯಕ್ರಮಗಳೊಂದಿಗೆ ಧಾರ್ಮಿಕ ಕಾರ್ಯಕ್ರಮಗಳು ಸಮಾಪ್ತಿಗೊಳ್ಳಲಿವೆ.
ವಾರ್ಷಿಕೋತ್ಸವ ಅಂಗವಾಗಿ ತಾ.೭ ಶುಕ್ರವಾರ ಬೆಳಿಗ್ಗೆ ೧೧:೩೦ಕ್ಕೆ ಕುಶಾಲನಗರ ದೇವಾಲಯಗಳ ಒಕ್ಕೂಟದ ಪ್ರತಿನಿಧಿಗಳು ದೇವಾಲಯಕ್ಕೆ ಆಗಮಿಸಿ ಫಲ ತಾಂಬೂಲ ಅರ್ಪಿಸಿ ಸಾಮೂಹಿಕವಾಗಿ ಪೂಜೆ ಸಲ್ಲಿಸಲಿದ್ದಾರೆ.
ತಾ.೮ ರಿಂದ ಜಾತ್ರಾ ಮೈದಾನದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಗುಂಡೂರಾವ್ ಬಡಾವಣೆಯ ಜಾತ್ರಾ ಮೈದಾನದಲ್ಲಿ ಮನರಂಜನೆ ಪಾರ್ಕ್ ತೆರೆಯಲಾಗುತ್ತದೆ. ತಾ.೧೨ ರಿಂದ ಎರಡು ದಿನಗಳ ಕಾಲ ಗುಂಡೂರಾವ್ ಬಡಾವಣೆಯ ಜಾತ್ರಾ ಮೈದಾನದಲ್ಲಿ ಗೋ ಪ್ರದರ್ಶನ ಮತ್ತು ಉತ್ತಮ ರಾಸುಗಳ ಆಯ್ಕೆ ಕಾರ್ಯ ನಡೆಯುವುದು, ೧೪ ರಂದು ಸಮಾರೋಪ ಸಮಾರಂಭ ಮತ್ತು ಬಹುಮಾನ ವಿತರಣೆ ಕಾರ್ಯಕ್ರಮ ನಡೆಯಲಿದೆ ಎಂದು ಶ್ರೀ ಗಣಪತಿ ದೇವಸ್ಥಾನ ಸೇವಾ ಸಮಿತಿ ಅಧ್ಯಕ್ಷ ಎಂ.ಕೆ. ದಿನೇಶ್ ತಿಳಿಸಿದ್ದಾರೆ.
ದೇವಾಲಯ ಸೇವಾ ಸಮಿತಿಯ ಉಪಾಧ್ಯಕ್ಷರಾಗಿ ಆರ್. ಬಾಬು, ಕಾರ್ಯದರ್ಶಿಯಾಗಿ ಬಿ.ಕೆ. ಮುತ್ತಣ್ಣ, ಖಜಾಂಚಿಯಾಗಿ ಎಸ್.ಕೆ. ಸತೀಶ್, ಸಹ ಕಾರ್ಯದರ್ಶಿಯಾಗಿ ಕೆ.ಎನ್. ದೇವರಾಜ್, ನಿರ್ದೇಶಕರಾಗಿ ವಿ.ಪಿ. ಶಶಿಧರ್, ಟಿ.ಆರ್. ಶರವಣ ಕುಮಾರ್, ಹೆಚ್.ಎಂ. ಚಂದ್ರು ಮತ್ತು ಪ್ರಧಾನ ಅರ್ಚಕರಾಗಿ ಆರ್.ಕೆ. ನಾಗೇಂದ್ರ ಬಾಬು ಮತ್ತು ವಿಶೇಷ ಆಹ್ವಾನಿತರು ಹಾಗೂ ವ್ಯವಸ್ಥಾಪಕರಾದ ಎಸ್.ಕೆ. ಶ್ರೀನಿವಾಸರಾವ್ ಅವರುಗಳು ಕಾರ್ಯನಿರ್ವಹಿಸುತ್ತಿದ್ದಾರೆ. ಜಾತ್ರಾ ಮಹೋತ್ಸವ ಧಾರ್ಮಿಕ ಕಾರ್ಯಕ್ರಮಗಳು ಸೇರಿದಂತೆ ಸಾಂಸ್ಕೃತಿಕ ಕಾರ್ಯಕ್ರಮಗಳ ಪೂರ್ವಸಿದ್ಧತೆಗಾಗಿ ಉಪ ಸಮಿತಿಗಳನ್ನು ರಚಿಸಲಾಗಿದೆ.