ಮಡಿಕೇರಿ, ನ. ೪: ರಾಜ್ಯ ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಅವರನ್ನು ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷ ಮತ್ತು ಸದಸ್ಯರು ಭೇಟಿಯಾಗಿ ಚರ್ಚಿಸಿದರು.

೨೦೧೯ - ೨೦೨೨ ಅವಧಿಯಲ್ಲಿ ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಆಕಾಡೆಮಿ ಅಧ್ಯಕ್ಷ ಲಕ್ಷಿö್ಮÃನಾರಾಯಣ ಕಜೆಗದ್ದೆ ಮತ್ತು ಆ ಸಂದರ್ಭದಲ್ಲಿ ಕಾರ್ಯನಿರ್ವಹಿಸಿದ ಜಾನಕಿ ಬೆಳಿಯಪ್ಪ ಗೌಡ, ಪ್ರೇಮಾ ರಾಘವಯ್ಯ ಚೊಕ್ಕಾಡಿ, ಧನಂಜಯ ಅಗೋಳಿಕಜೆ, ಸ್ಮಿತಾ ಅಮೃತರಾಜ್, ದಂಬೆಕೋಡಿ ಆನಂದ ಗೌಡ, ಡಾ. ದಯಾನಂದ ಕೂಡಕಂಡಿ, ಕುಸುಮಾಧರ ಎ.ಟಿ., ಪುರುಷೋತ್ತಮ ಕಿರ್ಲಾಯ, ಜಯಪ್ರಕಾಶ ಮೊಂಟಡ್ಕ, ಡಾ. ವಿಶ್ವನಾಥ ಬದಿಕಾನ, ಡಾ. ಪುರುಷೋತ್ತಮ ಕರಂಗಲ್ಲು, ಕಿರಣ ಕುಂಬಳಚೇರಿ, ಭರತೇಶ ಅಲಸಂಡೆಮಜಲು ಇವರುಗಳು ಚಿಕ್ಕಮಗಳೂರಿನ ಅವರ ಸ್ವಗೃಹದಲ್ಲಿ ಭೇಟಿಯಾದರು.

ಈ ಸಂದರ್ಭದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮಾಜಿ ಸಚಿವರಿಗೆ ಅಕಾಡೆಮಿ ಅವಧಿಯಲ್ಲಿ ಹಮ್ಮಿಕೊಂಡಿದ್ದ ಮಹತ್ತರ ಯೋಜನೆಗಳಾದ ಅರೆಭಾಷೆ ಪದಕೋಶ, ಅರೆಭಾಷೆ ವಿಶ್ವಕೋಶ, ಅರೆಭಾಷೆ ವಸ್ತುಕೋಶ, ಸಾಹೇಬ್ರು ಬಂದವೆ ನಾಟಕ ತಿರುಗಾಟ ಹಾಗೂ ಗ್ರಾಮ ವಾಸ್ತವ್ಯದ ಕಲಾಚಿತ್ರ ಮುಂತಾದ ಭಾಷೆ ಮತ್ತು ಸಂಸ್ಕೃತಿ ಅಭಿವೃದ್ಧಿ ಬಗೆಗೆ ಕಾಳಜಿ ವಹಿಸಿ ಮಾಡಿರುವ ಪ್ರಾದೇಶಿಕ ಮತ್ತು ಅರೆಭಾಷೆ ಸಮುದಾಯದ ಮೈಲಿಗಲ್ಲು ಕೃತಿಗಳನ್ನು ನೀಡಿದರು.