ಮಡಿಕೇರಿ, ನ. ೫: ಕೊಡವಲ್ಯಾಂಡ್ ಭೂ ರಾಜಕೀಯ ಸ್ವಯಂ ಆಡಳಿತ, ಕೊಡವರಿಗೆ ವಿಶ್ವರಾಷ್ಟç ಸಂಸ್ಥೆಯ ಇಂಡಿಜಿನಸ್ ಪೀಪಲ್ಸ್ ರೈಟ್ಸ್, ಎಸ್.ಟಿ ಪಟ್ಟಿ, ಸಿಕ್ಕಿಂನ “ಸಂಘ” ಮತಕ್ಷೇತ್ರದಂತೆ ಕೊಡವರಿಗೆ ಪಾರ್ಲಿಮೆಂಟ್ ಮತ್ತು ಅಸೆಂಬ್ಲಿಯಲ್ಲಿ ವಿಶೇಷ ಪ್ರಾತಿನಿಧ್ಯ, ಕೊಡವರ ಪೂರ್ವಾರ್ಜಿತ ಭೂ ಹಕ್ಕು ಮತ್ತು ಕೊಡವರ ಧಾರ್ಮಿಕ ಸಂಸ್ಕಾರ ತೋಕ್-ಗನ್ ಹಕ್ಕು ಚಿರಸ್ಥಾಯಿಯಾಗಿ ಮುಂದುವರೆಯಬೇಕಾದರೆ ಕೊಡವರ ಪ್ರತ್ಯೇಕ ಗುರುತು ರಾಷ್ಟಿçÃಯ ಜನಗಣತಿಯಲ್ಲಿ ದಾಖಲೀಕರಣವಾದರೆ ಮಾತ್ರ ಸಾಧ್ಯ ಎಂದು ಕೊಡವ ನ್ಯಾಷನಲ್ ಕೌನ್ಸಿಲ್ ಅಧ್ಯಕ್ಷ ನಂದಿನೆರವAಡ ಯು ನಾಚಪ್ಪ ಅವರು ಪ್ರತಿಪಾದಿಸಿದರು.

ಬಿಟ್ಟಂಗಾಲದಲ್ಲಿ ಸಿ.ಎನ್.ಸಿ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ೧೮ನೇ ಮಾನವ ಸರಪಳಿ ಜನಜಾಗೃತಿ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು, ೨೦೨೬-೨೭ ರಲ್ಲಿ ನಡೆಯಲಿರುವ ೧೬ನೇ ರಾಷ್ಟಿçÃಯ ಜನಗಣತಿಯೊಂದಿಗೆ ಜನಾಂಗವಾರು ಮಾಹಿತಿ ಕಲೆಹಾಕುವ ಸಂದರ್ಭ ಆದಿಮಸಂಜಾತ ಏಕ-ಜನಾಂಗೀಯ (ಆನಿಮಿಸ್ಟಿಕ್) ಕೊಡವರಿಗಾಗಿ ಪ್ರತ್ಯೇಕ ಕೋಡ್ ಮತ್ತು ಕಾಲಂ ಅನ್ನು ಅಳವಡಿಸಬೇಕು, ಇದರ ಆಧಾರದಡಿ ಮುಂದೆ ಜನಪ್ರತಿನಿಧಿ ಕಾಯ್ದೆಗೆ ತಿದ್ದುಪಡಿ ತರುವ ಮೂಲಕ ಕ್ಷೇತ್ರ ಪುನರ್ ವಿಂಗಡಣೆಗೆ ಮಾನದಂಡವಾಗಲಿರುವ ಈ ಜನಗಣತಿಯು ಕೊಡವರ ರಾಜಕೀಯ ಸಬಲೀಕರಣ, ಸ್ವಯಂ ನಿರ್ಧಾರದ ಹಕ್ಕು ಸ್ಥಾಪಿಸಲು ಮೆಟ್ಟಿಲಾಗಲಿದೆ. ಅಲ್ಲದೆ ಕೊಡವರ ಧಾರ್ಮಿಕ ಸಂಸ್ಕಾರ ಬಂದೂಕು ಹಕ್ಕು ಚಿರಸ್ಥಾಯಿಯಾಗಿ ಮುಂದುವರಿಯಲು ಪೂರಕವಾಗಲಿದೆ ಎಂದರು.

೧೮೭೧-೭೨ ರಿಂದ ೧೯೩೧ರ ವರೆಗೆ ನಡೆದ ರಾಷ್ಟಿçÃಯ ಜನಗಣತಿಯಲ್ಲಿ ಕೊಡವರನ್ನು ಧರ್ಮೇತರ ಮತ್ತು ಜಾತಿಯೇತರ ಜನಾಂಗ/ಮೂಲವAಶಸ್ಥ (ರೇಸ್) ಎಂದು ದಾಖಲಿಸಲ್ಪಡುವ ಮೂಲಕ ಕೊಡವರ ಪ್ರತ್ಯೇಕ ಅಸ್ತಿತ್ವ ಮತ್ತು ಸ್ವತಂತ್ರ ವ್ಯಕ್ತಿತ್ವವನ್ನು ಗುರುತಿಸಿ ನಮ್ಮ ಹೆಗ್ಗುರುತು ರಾಜ್ಯ ದಾಖಲೆಯಲ್ಲಿ ನಳನಳಿಸುವಂತಾಗಿತ್ತು. ತದನಂತರ ನಮ್ಮನ್ನು ೨೦೨೧ರವರೆಗೆ ಪ್ರತಿ ದಶಮಾನಗಳಿಗೊಮ್ಮೆ ನಡೆಸುವ ರಾಷ್ಟಿçÃಯ ಜನಗಣತಿಯಲ್ಲಿ ಬಲಾಡ್ಯ ಧಾರ್ಮಿಕ ಮತ್ತು ಜಾತಿಯೊಂದಿಗೆ ವಿಲೀನಗೊಳಿಸಿ ನಮ್ಮ ಅಸ್ತಿತ್ವ ಮತ್ತು ಹೆಗ್ಗುರುತು ವಿನಾಶದೊಂದಿಗೆ ಕೊಡವರ ಅಸ್ಮಿತೆ ಮತ್ತು ಸತ್ವವನ್ನು ಧ್ವಂಸ ಮಾಡಲಾಯಿತು.

ಆದ್ದರಿಂದ ೨೦೨೬ ಅಕ್ಟೋಬರ್‌ನಿಂದ ಕೇಂದ್ರ ಸರಕಾರದ ಮೂಲಕ ನಡೆಯಲಿರುವ ಭಾರತ ದೇಶದ ೧೬ನೇ ರಾಷ್ಟಿçÃಯ ಜನಗಣತಿಯ ಸಂದರ್ಭ ಎಲ್ಲಾ ಕಾಲಂನಲ್ಲಿ “ಕೊಡವ” ಎಂದೇ ಬರೆಸಬೇಕೆಂಬ ಕರೆಯೂ ಸೇರಿದಂತೆ ಸಂಸತ್ ಹಾಗೂ ವಿಧಾನಸಭೆಯಲ್ಲಿ ಕೊಡವರಿಗೆ ವಿಶೇಷ ರಾಜಕೀಯ ಪ್ರಾತಿನಿಧ್ಯ ನೀಡಬೇಕು ಎಂದು ಒತ್ತಾಯಿಸಿ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ವತಿಯಿಂದ ಮಾನವ ಸರಪಳಿ ಜನಜಾಗೃತಿ ಮೂಲಕ ಜಿಲ್ಲೆಯ ವಿವಿಧೆಡೆ ಜಾಗೃತಿ ಮೂಡಿಸಲಾಗುತ್ತಿದೆ ಎಂದರು.

ಮುAದಿನ ೧೯ನೇ ಮಾನವ ಸರಪಳಿ ತಾ.೧೦ ರಂದು ಬೆಳಿಗ್ಗೆ ೧೦.೩೦ ಗಂಟೆಗೆ ಅಂಜಿಗೇರಿನಾಡ್‌ನ ಪುದಿಕೇರಿ (ಹುದಿಕೇರಿ)ಯಲ್ಲಿ, ೨೦ನೇ ಮಾನವ ಸರಪಳಿ ತಾ.೧೮ ಬೆಳಿಗ್ಗೆ ೧೦.೩೦ ಗಂಟೆಗೆ ಕುಟ್ಟದಲ್ಲಿ ನಡೆಯಲಿದೆ ಎಂದು ಎನ್.ಯು ನಾಚಪ್ಪ ತಿಳಿಸಿದರು.

ಜನಜಾಗೃತಿ ವೇಳೆ ಮಾಚೆಟ್ಟಿರ ಪಟ್ಟು, ಕಾಳೇಂಗಡ ರಮೇಶ್ ಕಾರ್ಯಪ್ಪ, ಮಾಚೆಟ್ಟಿರ ಚೋಟು ಕಾವೇರಪ್ಪ, ಕುಪ್ಪಂಡ ಗೋಪಾಲ್, ಮಾಚೆಟ್ಟಿರ ಸುನಿಲ್ ಕುಟ್ಟಪ್ಪ, ಮಾಚೆಟ್ಟಿರ ಸಚಿನ್ ಮಂದಣ್ಣ, ಮಾಚೆಟ್ಟಿರ ವಿಕ್ಕಿ ಚೆಂಗಪ್ಪ, ತೀತಿಮಾಡ ಸುಜಿ ದೇವಯ್ಯ, ಚೇಂದ್ರಿಮಾಡ ಪೂಣಚ್ಚ, ಕಳ್ಳಿರ ಉತ್ಸವ್ ನಾಚಪ್ಪ, ಚಂಬAಡ ಜಾಗೃತ್ ಬಿದ್ದಪ್ಪ, ಚೆಕ್ಕೇರ ಜೀವನ್ ನಾಣಯ್ಯ, ಪೊನ್ನಕಚ್ಚಿರ ಚರ್ಮಣ, ಮಾಚೆಟ್ಟಿರ ಚಂದ್ರು, ಬೊಪ್ಪಂಡ ಅಶೋಕ್, ಕಂಜಿತAಡ ದಿಲನ್, ಪುಚ್ಚಿಮಂಡ ದೇವಯ್ಯ, ಚೊಟ್ಟೆಮಾಡ ಮುತ್ತಪ್ಪ, ತೀತಿಮಾಡ ಶಾನ್ ಬಿದ್ದಪ, ಕಳಕಂಡ ಚೇತನ್, ಅಜ್ಜಿನಿಕಂಡ ನವೀನ್, ಪಾಲೆಕಂಡ ಮುತ್ತಣ್ಣ, ಕಾಂಡೆರ ಸುರೇಶ್, ಅರೆಯಡ ಗಿರೀಶ್, ಚೆಂಬAಡ ಜನತ್ ಪಾಲ್ಗೊಂಡಿದ್ದರು.