ಮಡಿಕೇರಿ, ನ. ೫: ಸೋಮವಾರಪೇಟೆ ೬೬/೧೧ ಕೆ.ವಿ ವಿದ್ಯುತ್ ವಿತರಣಾ ಉಪಕೇಂದ್ರದ ಕೇಂದ್ರದಿAದ ಹೊರಹೊಮ್ಮುವ ಎಫ್೨ ಶಾಂತಳ್ಳಿ ಹಾಗೂ ಎಫ್೪ ಸೋಮವಾರಪೇಟೆ ಫೀಡರ್‌ನಲ್ಲಿ ತಾ. ೬ ರಂದು (ಇಂದು) ಬೆಳಿಗ್ಗೆ ೯ ರಿಂದ ಸಂಜೆ ೬ ಗಂಟೆಯವರೆಗೆ ಹೊಸ ಲೈನ್ ಅಳವಡಿಸುವ ಕಾಮಗಾರಿ ಕೈಗೆತ್ತಿಕೊಳ್ಳುತ್ತಿರುವುದರಿಂದ ಈ ಮಾರ್ಗದಿಂದ ವಿದ್ಯುತ್ ಸರಬರಾಜಾಗುವ ಹಾನಗಲ್ಲು, ಶೆಟ್ಟಳ್ಳಿ, ಹಾನಗಲ್ಲು ಬಾಣೆ, ತೋಳೂರು ಶೆಟ್ಟಳ್ಳಿ, ಕೂತಿ ಯಡೂರು, ತಾಕೇರಿ, ಕಿರಂಗAದೂರು, ಹರಗ, ಶಾಂತಳ್ಳಿ, ಬೆಟ್ಟದಳ್ಳಿ, ನಾಗರಳ್ಳಿ, ಕುಂದಳ್ಳಿ, ಕಿಕ್ಕರಳ್ಳಿ, ಕುಡಿಗಾಣ, ಕೊತ್ನಳ್ಳಿ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ. ಸಾರ್ವಜನಿಕರು ಸಹಕರಿಸುವಂತೆ ಚಾವಿಸನಿನಿ ಕಾರ್ಯ ಮತ್ತು ಪಾಲನೆ ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್ ಕೋರಿದ್ದಾರೆ.
* ವೀರಾಜಪೇಟೆ ೬೬/೧೧ ಕೆ.ವಿ ವಿದ್ಯುತ್ ವಿತರಣಾ ಉಪಕೇಂದ್ರದ ವಿರಾಜಪೇಟೆ ಶಾಖಾ ವ್ಯಾಪ್ತಿಯ ಪಂಜರಪೇಟೆ ಹಾಗೂ ಹೆಗ್ಗಳ ಫೀಡರ್‌ಗಳಲ್ಲಿ ತಾ. ೬ ರಂದು (ಇಂದು) ಬೆಳಿಗ್ಗೆ ೯ ರಿಂದ ಸಂಜೆ ೬ ಗಂಟೆಯವರೆಗೆ ಕೊಡಗು ವಿದ್ಯುತ್ ಜಾಲದ ಬಲವರ್ಧನೆ ಕಾಮಗಾರಿ ಕೈಗೆತ್ತಿಕೊಳ್ಳುತ್ತಿರುವುದರಿಂದ ಈ ಮಾರ್ಗದಿಂದ ವಿದ್ಯುತ್ ಸರಬರಾಜಾಗುವ ವೀರಾಜಪೇಟೆ ಪಟ್ಟಣದ ತೆಲುಗರ ಬೀದಿ, ನೆಹರು ನಗರ, ಗೋಣಿಕೊಪ್ಪ ರಸ್ತೆ, ಶಾಂತಿ ನಗರ, ವಿದ್ಯಾನಗರ, ನಿಸರ್ಗ ಬಡಾವಣೆ, ಮೀನುಪೇಟೆ, ಖಾಸಗಿ ಬಸ್ ನಿಲ್ದಾಣ, ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣ, ಆರ್ಜಿ, ಬೇಟೋಳಿ, ಕಲ್ಲುಬಾಣೆ, ಹೆಗ್ಗಳ, ರಾಮನಗರ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ. ಸಾರ್ವಜನಿಕರು ಸಹಕರಿಸುವಂತೆ ಚಾವಿಸನಿನಿ ಕಾರ್ಯ ಮತ್ತು ಪಾಲನೆ ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್ ಕೋರಿದ್ದಾರೆ.