ಗೋಣಿಕೊಪ್ಪಲು, ನ. ೫: ಗಿರಿಜನರ, ಆದಿವಾಸಿಗಳ ಕಲ್ಯಾಣ ಕ್ಕಾಗಿ ಸರ್ಕಾರ ನಾನಾ ರೀತಿಯ ಯೋಜನೆಗಳನ್ನು ಅನುಷ್ಠಾನಕ್ಕೆ ತಂದಿದ್ದರೂ ಇಂತಹ ಯೋಜನೆ ಗಳು ನೈಜ್ಯ ಫಲಾನುಭವಿಗಳಿಗೆ ತಲುಪುತ್ತಿಲ್ಲ ಎಂಬುದಕ್ಕೆ ಪೊನ್ನಂ ಪೇಟೆ ತಾಲೂಕಿನ ಪೊನ್ನಂಪೇಟೆ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಮತ್ತೂರು ಗ್ರಾಮದ ಗುಂಡತ್ ಕೊಲ್ಲಿಯ ಗಿರಿಜನ ನಿವಾಸಿಗಳೇ ನಮ್ಮ ಮುಂದಿರುವ ಸ್ಪಷ್ಟ ಉದಾಹರಣೆ.

ಪರಿಶಿಷ್ಟರ ಅಭಿವೃದ್ದಿ ಹಾಗೂ ಇವರ ಕಲ್ಯಾಣಕ್ಕಾಗಿ ಇಲಾಖೆ ಇದ್ದರೂ ಇಲ್ಲದಂತಹ ಪರಿಸ್ಥಿತಿ ಸಷ್ಟಿಯಾಗಿದೆ. ಸ್ವಾತಂತ್ರö್ಯ ಲಭಿಸಿ ಹಲವು ದಶಕ ಕಳೆದಿದ್ದರೂ ಕೂಡ ಸ್ವಂತ ಸೂರಿಗಾಗಿ ಇಲ್ಲಿನ ಗಿರಿಜನರು ಎದುರು ನೋಡುತ್ತಲೇ ಈಗಾಗಲೇ ಸುಮಾರು ೩೦ ವರ್ಷ ಕಳೆದಿದ್ದಾರೆ. ಚುನಾವಣಾ ಸಂದರ್ಭದಲ್ಲಿ ಮತ ಪಡೆದು ಜನನಾಯಕರಾಗುವ ಇಲ್ಲಿನ ಜನಪ್ರತಿನಿಧಿಗಳು ಇತ್ತ ಮುಖ ಮಾಡದೆ ಅದೆಷ್ಟೋ ವರ್ಷಗಳು ಕಳೆದಿವೆ.

ಪೊನ್ನಂಪೇಟೆ ತಾಲೂಕು ಕೇಂದ್ರದ ಕೂಗಳತೆಯ ದೂರದಲ್ಲಿರುವ ಪೊನ್ನಂಪೇಟೆ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ೩ನೇ ವಾರ್ಡಿಗೆ ಒಳಪಟ್ಟಿರುವ ಮತ್ತೂರು ಗ್ರಾಮದ ಗುಂಡತ್‌ಕೊಲ್ಲಿ ಎಂಬಲ್ಲಿ ೨೦ ಗಿರಿಜನ ಕುಟುಂಬಗಳು ಹಲವು ದಶಕಗಳಿಂದ ಪ್ಲಾಸ್ಟಿಕ್ ಹೊದಿಕೆಯನ್ನೇ ಸೂರಾಗಿಸಿಕೊಂಡು ನಿತ್ಯ ಜೀವನ ಸಾಗಿಸುತ್ತಿದ್ದಾರೆ.

ಶೌಚಾಲಯ, ಶುದ್ಧ ಕುಡಿಯುವ ನೀರು, ವಿದ್ಯುತ್ ಸೇರಿದಂತೆ ಮೂಲ ಸೌಕರ್ಯಗಳನ್ನು ನೀಡಬೇಕಾದ ಇಲಾಖೆಯು ಇದಾವುದು ಸಂಬAಧವೇ ಇಲ್ಲದಂತೆ ಮೌನವಹಿಸಿದೆ. ಕೇವಲ ಹಾರಿಕೆಯ ಉತ್ತರಗಳನ್ನೇ ಹೇಳುತ್ತ ಇಲ್ಲಿಯ ತನಕ ದಿನ ಕಳೆಯುತ್ತಲೇ ಬಂದಿದೆ. ಸಣ್ಣ ಗುಂಡಿಯನ್ನು ತೆಗೆದು ಅದರಲ್ಲಿ ಬರುವ ನೀರನ್ನೇ ಕುಡಿಯಲು ಇಲ್ಲಿಯ ಜನ ಬಳಸುತ್ತಿದ್ದಾರೆ. ಪ್ಲಾಸ್ಟಿಕ್ ಹೊದಿಕೆಯ ಬಿದಿರಿನ ಜೋಪಡಿಗಳಲ್ಲಿ ಮಕ್ಕಳಾದಿಯಾಗಿ ಇಲ್ಲಿಯ ಗಿರಿಜನ ಕುಟುಂಬಗಳು ವಾಸಿಸುತ್ತಿವೆ. ಕತ್ತಲೆಯಾಗುತ್ತಿದ್ದಂತೆಯೇ ಸೀಮೆಎಣ್ಣೆ ದೀಪವು ಇಲ್ಲಿರುವ ಜೋಪಡಿಯ ಮನೆಯನ್ನು ಬೆಳಕಾಗಿಸುತ್ತಿದೆ.

ನಿತ್ಯ ಕಾಯಕವನ್ನು ಕೂಲಿಯಿಂದಲೇ ಆರಂಭಿಸುವ ಇಲ್ಲಿನ ಗಿರಿಜನರು ಅಕ್ಕಪಕ್ಕದ ಕಾಫಿ ತೋಟಗಳಿಗೆ ತೆರಳಿ ತಮ್ಮ ಕಾಯಕವನ್ನು ಕಂಡುಕೊAಡಿದ್ದಾರೆ. ಸಂಜೆಯಾಗುತ್ತಿದ್ದAತೆ ತಮ್ಮ ಜೋಪಡಿಯತ್ತ ಹೆಜ್ಜೆ ಹಾಕುತ್ತಾರೆ. ಸ್ವಂತ ಸೂರಿಗೋಸ್ಕರ ಸಂಬAಧಿಸಿದ ೪ಮೂರನೇ ಪುಟಕ್ಕೆ ಅಧಿಕಾರಿಗಳಿಗೆ, ಜನಪ್ರತಿನಿಧಿಗಳಿಗೆ ಹತ್ತಾರು ಮನವಿಗಳನ್ನು ಸಲ್ಲಿಸಿದ್ದರೂ ಇಲ್ಲಿಯ ತನಕ ಇವರ ಮನವಿಗೆ ಸ್ಪಂದನ ದೊರಕಿಲ್ಲದಿರುವುದು ನಮ್ಮ ಆಡಳಿತ ವ್ಯವಸ್ಥೆಗೆ ಹಿಡಿದ ಕೈಗನ್ನಡಿಯಾಗಿದೆ.

೨೦ ಗಿರಿಜನ ಕುಟುಂಬಗಳು ಪ್ರಸ್ತುತ ವಾಸಿಸುತ್ತಿರುವ ಜಾಗವು ಸರ್ಕಾರಿ ಭೂಮಿಯೆಂದು ಆರ್‌ಟಿಸಿಯಲ್ಲಿ ನಮೂದಾಗಿದೆ. ಆದರೆ ಇಲಾಖೆಯ ಅಧಿಕಾರಿಗಳ ಮಾಹಿತಿಯಂತೆ ಗಿರಿಜನರು ವಾಸಿಸುವ ಜಾಗವು ಖಾಸಗಿ ಒಡೆತನದಲ್ಲಿರುವ ಸ್ಥಳವಾಗಿದೆ ಎಂದು ವಿವರ ನೀಡುತ್ತಾರೆ.

ಕೆಲವು ಅಧಿಕಾರಿಗಳ ಬೇಜವ್ದಾರಿ ಹಾಗೂ ನಿರ್ಲಕ್ಷö್ಯದಿಂದಾಗಿ ಇನ್ನೂ ಕೂಡ ಇಲ್ಲಿರುವ ಕುಟುಂಬಗಳಿಗೆ ಸೂರನ್ನು ಕಲ್ಪಿಸುವ, ನಿವೇಶನವನ್ನು ನೀಡುವ ಕಾರ್ಯಕ್ಕೆ ಮುಂದಾಗಿಲ್ಲ. ಗಿರಿಜನರ ಕಲ್ಯಾಣಕ್ಕಾಗಿ ಉನ್ನತ ಮಟ್ಟದ ಅಧಿಕಾರಿಗಳಿಂದ ಆಗಿಂದ್ದಾಗೆ ಸಭೆಗಳು ನಡೆಯುತ್ತಿದ್ದರೂ ಇಂತಹ ಮೂಲಭೂತ ಸೌಕರ್ಯವಂಚಿತ ಕುಟುಂಬಗಳ ನಿತ್ಯದ ನರಕಯಾತನೆ ಎಲ್ಲಿಯೂ ಕೂಡ ಬೆಳಕಿಗೆ ಬಾರದೆ ಇರುವುದು ನಮ್ಮ ಆಡಳಿತ ವ್ಯವಸ್ಥೆ ಯಾವ ಮಟ್ಟದಲ್ಲಿ ಮುಂದೆ ಸಾಗುತ್ತಿದೆ ಎಂದು ಅಂದಾಜಿಸಬಹುದು.

- ವಿಶೇಷ ವರದಿ : ಹೆಚ್.ಕೆ ಜಗದೀಶ್