ವೀರಾಜಪೇಟೆ, ನ. ೬: ವೀರಾಜಪೇಟೆ ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ (ಎ.ಪಿ.ಸಿ.ಎಂ.ಎಸ್) ೨೦೨೫ ರಿಂದ ೩೦ ರವರೆಗಿನ ಅವಧಿಗೆ ನಡೆದ ಆಡಳಿತ ಮಂಡಳಿ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಪುಟ್ಟಿಚಂಡ ಟಿ. ನರೇಂದ್ರ, ಉಪಾಧ್ಯಕ್ಷರಾಗಿ ಮಾಳೇಟಿರ ಚುಕ್ಕು ದೇವಯ್ಯ ಅವರುಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಸಂಘದ ಕಚೇರಿಯಲ್ಲಿ ಆಯ್ಕೆ ಪ್ರಕ್ರಿಯೆ ನಡೆಯಿತು.

ಇದೇ ಸಂದರ್ಭದಲ್ಲಿ ನಿರ್ದೇಶಕರುಗಳಾದ ವಾಟೇರಿರ ಪ್ರೇಮ್ ನಾಣಯ್ಯ, ಪಳಂಗAಡ ಸಿ. ರಾಕೇಶ್, ಬಿ.ಎಲ್. ರಾಮಚಂದ್ರ, ಕಾಣತಂಡ ಎಂ. ಬೋಪಣ್ಣ, ಪೂಳಂಡ ವಿನು ಪೆಮ್ಮಯ್ಯ, ಕೋದಂಡ ಮಂಜುಳ ಅಯ್ಯಪ್ಪ, ಇಟ್ಟಿರ ಸಿ. ಮಾಲತಿ, ಪರಿವಾರ ಪಿ. ಸುರೇಶ್, ಹೆಚ್.ಆರ್.ಕುಂಞ ಉಪಸ್ಥಿತರಿದ್ದರು. ಸಹಾಯಕ ಚುನಾವಣಾಧಿಕಾರಿಯಾಗಿ ಕೆ.ಯು. ಕರಣ್ ಕಾರ್ಯಪ್ಪ ಕಾರ್ಯ ನಿರ್ವಹಿಸಿದರು.