ನಾಪೋಕ್ಲು, ನ. ೬: ಶ್ರೀ ನಾರಾಯಣ ಧರ್ಮ ಪರಿಪಾಲನ ಯೋಗಂ ವತಿಯಿಂದ ೧೭೧ನೇ ಶ್ರೀ ನಾರಾಯಣ ಗುರು ಜಯಂತಿ ಹಾಗೂ ಓಣಂ ಆಚರಣೆಯನ್ನು ತಾ. ೨೩ ರಂದು ನಾಪೋಕ್ಲುವಿನ ಸರ್ಕಾರಿ ಮಾದರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ಆಯೋಜಿಸಲಾಗಿದೆ ಎಂದು ಆಚರಣೆ ಸಮಿತಿ ಅಧ್ಯಕ್ಷ ಶ್ರೀಧರ್ ತಿಳಿಸಿದರು.ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬ್ರಹ್ಮಶ್ರೀ ನಾರಾಯಣ ಗುರು ಜಯಂತಿ ಹಾಗೂ ಓಣಂ ಆಚರಣೆಯ ಪ್ರಯುಕ್ತ ಕ್ರಿಕೆಟ್, ಹಗ್ಗಜಗ್ಗಾಟ ಹಾಗೂ ವಿವಿಧ ಕ್ರೀಡಾಕೂಟಗಳನ್ನು ಆಯೋಜಿಸಲಾಗಿದೆ. ತಾ. ೨೩ ರಂದು ಮಾರುಕಟ್ಟೆ ಆವರಣದಿಂದ ಬೆಳಿಗ್ಗೆ ೧೦ ಗಂಟೆಗೆ ಅಲಂಕೃತ ಮಂಟಪ ಚಂಡೆಮೇಳದೊAದಿಗೆ ಮೆರವಣಿಗೆ ಸಾಗಿ ಶಾಲಾ ಮೈದಾನಕ್ಕೆ ಬರಲಿದೆ ಎಂದರು. ತಾ. ೧೯ ರಂದು ಬೆಳಿಗ್ಗೆ ೯.೩೦ ಗಂಟೆಗೆ ಕ್ರೀಡಾಕೂಟವನ್ನು ಎಸ್.ಎನ್.ಡಿ.ಪಿ. ಕೊಡಗು ಯೂನಿಯನ್ ಸಿದ್ದಾಪುರ ಘಟಕದ ಅಧ್ಯಕ್ಷ ವಿ.ಕೆ. ಲೋಕೇಶ್ ಉದ್ಘಾಟಿಸಲಿದ್ದಾರೆ. ತಾ. ೨೩ ರಂದು ಬೆಳಿಗ್ಗೆ ೧೦ ಗಂಟೆಗೆ ಮೆರವಣಿಗೆಯನ್ನು ಸಂಘಟನಾ ಕಾರ್ಯದರ್ಶಿ ಹಿತೇಶ್ ಉದ್ಘಾಟಿಸಲಿದ್ದಾರೆ. ಬಳಿಕ ಸಭಾ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮವನ್ನು ಶಾಸಕ ಎ.ಎಸ್. ಪೊನ್ನಣ್ಣ ಉದ್ಘಾಟಿಸಲಿದ್ದಾರೆ. ಅರಮೇರಿ-ಕಳಂಚೇರಿ ಮಠದ ಪೀಠಾಧ್ಯಕ್ಷ ಶ್ರೀ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ. ಎಸ್.ಎನ್.ಡಿ.ಪಿ. ನಾಪೋಕ್ಲು ಶಾಖೆಯ ಅಧ್ಯಕ್ಷ ಟಿ.ಸಿ. ಲವ ಅಧ್ಯಕ್ಷತೆಯಲ್ಲಿ ನಡೆಯಲಿದ್ದು, ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಶಾಸಕ ಡಾ. ಮಂತರ್ ಗೌಡ, ಎಸ್.ಎನ್.ಡಿ.ಪಿ. ಕೊಡಗು ಯೂನಿಯನ್ ಸಿದ್ದಾಪುರ ಘಟಕದ ಅಧ್ಯಕ್ಷ ವಿ.ಕೆ. ಲೋಕೇಶ್, ವಿಧಾನಪರಿಷತ್ ಸದಸ್ಯ ಸುಜಾ ಕುಶಾಲಪ್ಪ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ವನಜಾಕ್ಷಿ, ಎಸ್.ಎನ್.ಡಿ.ಪಿ. ಕೊಡಗು ಯೂನಿಯನ್ ಸಿದ್ದಾಪುರ ಘಟಕದ ಕಾರ್ಯದರ್ಶಿ ಪ್ರೇಮಾನಂದ, ನಾಪೋಕ್ಲು ಟೌನ್ ಜುಮ್ಮಾ ಮಸೀದಿಯ ಶೌಕತ್ ಆಲಿ ಸಕಾಫಿ, ಸಂತ ಅನ್ನಮ್ಮ ಚರ್ಚ್ನ ಧರ್ಮಗುರು ಜೇಮ್ಸ್ ಡೊಮೇಲಿಕ್ ಫಾದರ್, ಕೊಡಗು ಎಸ್.ಎನ್.ಡಿ.ಪಿ. ಯೂನಿಯನ್ ಮಹಿಳಾ ಘಟಕದ ಅಧ್ಯಕ್ಷೆ ರೀಷಾ ಸುರೇಂದ್ರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಎ. ಇಸ್ಮಾಯಿಲ್, ಆರ್.ಎಂ.ಸಿ. ಮಾಜಿ ಅಧ್ಯಕ್ಷ ಶಿವಚಾಳಿಯಂಡ ಅಂಬಿ ಕಾರಿಯಪ್ಪ, ಹೊದ್ದೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಹಂಸ, ಕಾಫಿ ಬೆಳೆಗಾರ ಅರೆಯಡ ರತ್ನ ಪೆಮ್ಮಯ್ಯ, ಕೊಡಗು ಜಿಲ್ಲಾ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಉಪಾಧ್ಯಕ್ಷ ನಾಪೋಕ್ಲು ಜಮಾಅತ್ ಅಧ್ಯಕ್ಷ ಎಂ.ಹೆಚ್. ಅಬ್ದುಲ್ ರೆಹಮಾನ್. ನಾಪೋಕ್ಲು ಕಾಫಿ ಬೆಳೆಗಾರರು ವಕೀಲರು ಕೆ. ಶರಣು ಕುಟ್ಟಪ್ಪ, ಜೆ.ಡಿ.ಎಸ್. ವಕ್ತಾರ ಮನ್ಸೂರ್ ಆಲಿ ಎಂ.ಎ., ನಾಪೋಕ್ಲು, ಕೋಕೇರಿಯ ಕಾಫಿ ಬೆಳೆಗಾರ ಎ.ಕೆ. ಹಾರಿಸ್, ನಾಪೋಕ್ಲು ಉದ್ಯಮಿ ಕಿಶೋರ್ ತಮ್ಮಯ್ಯ, ಕಾಫಿ ಬೆಳೆಗಾರ ಹಾಗೂ ದಾನಿ ಬಿದ್ದಾಟಂಡ ಟಿ. ಕಾರ್ಯಪ್ಪ ಹಾಗೂ ವಿವಿಧ ಸಮಿತಿಗಳ ಪದಾಧಿಕಾರಿಗಳು ಪಾಲ್ಗೊಳ್ಳಲಿರುವರು ಎಂದರು.

ಕ್ರಿಕೆಟ್ ಪಂದ್ಯ ವಿಜೇತ ತಂಡಕ್ಕೆ ಪ್ರಥಮ ಬಹುಮಾನ ರೂ. ೩೩,೩೩೩, ದ್ವಿತೀಯ ಬಹುಮಾನ ರೂ. ೧೫,೫೫೫, ಹಗ್ಗಜಗ್ಗಾಟ ಸ್ಪರ್ಧೆಯ ಪ್ರಥಮ ವಿಜೇತರಿಗೆ ರೂ. ೩೦,೦೦೦ ಹಾಗೂ ಟ್ರೋಫಿ ದ್ವಿತೀಯ ಬಹುಮಾನ ರೂ. ೧೫,೦೦೦ ಹಾಗೂ ಟ್ರೋಫಿ ವಿತರಿಸಲಾಗುವುದು. ಸಂಜೆ ೭ ಗಂಟೆಗೆ ೭ ಬೀಟ್ಸ್ ಆರ್ಕೆಸ್ಟಾç ಕ್ಯಾಲಿಕೆಟ್ ನೇತೃತ್ವದಲ್ಲಿ ರಸಮಂಜರಿ ಕಾರ್ಯಕ್ರಮ ನಡೆಯಲಿದೆ ಎಂದರು. ಹೆಚ್ಚಿನ ಮಾಹಿತಿಗೆ ಮೊ. ೯೭೪೧೩೩೯೦೨೯, ೮೩೧೦೨೬೫೩೨೭ ಸಂಪರ್ಕಿಸುವAತೆ ತಿಳಿಸಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಎಸ್.ಎನ್.ಡಿ.ಪಿ. ನಾಪೋಕ್ಲು ಶಾಖೆಯ ಅಧ್ಯಕ್ಷ ಟಿ.ಸಿ. ಲವ, ಕಾರ್ಯದರ್ಶಿ ಅಜಿತ್ ಎಂ.ಆರ್., ಆಚರಣಾ ಸಮಿತಿ ಉಪಾಧ್ಯಕ್ಷ ಸತೀಶ್ ಟಿ.ಕೆ., ಆಚರಣಾ ಸಮಿತಿ ಉಪಾಧ್ಯಕ್ಷ ತಂಗ ಎಂ.ಕೆ., ಹರೀಶ್ ಟಿ.ಸಿ., ಮಣಿ ಟಿ.ಸಿ., ಹರೀಶ್ ಕುಮಾರ್ ಪಿ.ಬಿ. ಉಪಸ್ಥಿತರಿದ್ದರು.