ಗೋಣಿಕೊಪ್ಪ ವರದಿ, ನ. ೬: ಬೆಂಗಳೂರು ಫೀಲ್ಡ್ ಮಾರ್ಷಲ್ ಕೆ. ಎಂ. ಕಾರ್ಯಪ್ಪ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ೧೪ ವಯೋಮಿತಿಯ ನಾಲ್ಕನೇ ಕರ್ನಾಟಕ ಮಿನಿ ಒಲಿಂಪಿಕ್ಸ್ ಹಾಕಿ ಕ್ರೀಡಾಕೂಟದ ಬಾಲಕರ ವಿಭಾಗದಲ್ಲಿ ಹಾಕಿ ಕೂರ್ಗ್ ತಂಡವು ಎರಡನೇ ಜಯ ಸಾಧಿಸಿ ಸೆಮಿ ಫೈನಲ್ ಪ್ರವೇಶಿಸಿದೆ.
ಹಾಕಿ ಬೆಳಗಾವಿ ವಿರುದ್ಧ ಜಯಗಳಿಸಿ ಸಾಧನೆ ಮಾಡಿತು. ಹಾಕಿ ಕೂರ್ಗ್ ೧೪ ಗೋಲು ದಾಖಲಿಸಿತು. ಬೆಳಗಾವಿ ಗೋಲು ದಾಖಲಿಸುವಲ್ಲಿ ಎಡವಿತು. ಕೂರ್ಗ್ ಪರ ಪ್ರಧಾನ್ ಕಾರ್ಯಪ್ಪ ೫ ಗೋಲು ಸಿಡಿಸಿ ಸಂಚಲನ ಮೂಡಿಸಿದರು. ಪ್ರಖ್ಯಾತ್ ಪೂಜಾರಿ ೩, ಆತ್ಮಿಕ್ ದೀಪ್ ೨, ಕೆ. ಆರ್. ಮೋಹಿತ್, ಅಮ್ಮಾಂಡಿರ ಧೈವಿಕ್ ಪೂಣಚ್ಚ, ಪನವ್ ಪೆಮ್ಮಯ್ಯ ತಲಾ ಒಂದೊAದು ಗೋಲು ಬಾರಿಸಿ ಗೆಲುವಿನ ಅಂತರವನ್ನು ಹಿಗ್ಗಿಸಿದರು. ಲೀಗ್ ಹಂತದ ಒಂದು ಪಂದ್ಯ ಬಾಕಿ ಉಳಿದಿರುವಂತೆ ಸೆಮಿಗೆ ಪ್ರವೇಶ ಪಡೆದುಕೊಂಡಿದೆ. ತರಬೇತುದಾರ ವಿನೋದ್ ಕುಮಾರ್, ವ್ಯವಸ್ಥಾಪಕಿ ಕೊಕ್ಕಲೆಮಾಡ ಗೌತಮಿ ಕಾರ್ಯನಿರ್ವಹಿಸಿದ್ದಾರೆ.