ಚೆಟ್ಟಳ್ಳಿ, ನ. ೯ : ಚೆಟ್ಟಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಿರಾಶ್ರಿತರಿಗೆ ಗುರುತಿಸಿದ ಜಾಗದಲ್ಲಿ ಅನಧಿಕೃತ ಶೆಡ್ ನಿರ್ಮಾಣ ಮಾಡಿದ ವಿಚಾರ ಪೊಲೀಸ್ ಠಾಣಾ ಮೆಟ್ಟಿಲೇರಿದೆ. ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಕಾನೂನು ಕ್ರಮಕೈಗೊಳ್ಳದಿದ್ದರೆ ಪಂಚಾಯಿತಿ ಸದಸ್ಯರೇ ಹೋರಾಟ ಮಾಡುವುದಾಗಿ ಚೆಟ್ಟಳ್ಳಿ ಗ್ರಾಮ ಪಂಚಾಯಿತಿಯ ತುರ್ತು ಸಭೆಯಲ್ಲಿ ತೀರ್ಮಾನಿಸಲಾಗಿದೆ.
ಚೇರಳ ಶ್ರೀಮಂಗಲ ಗ್ರಾಮದ ೪೯/೧೩ ಜಾಗದಲ್ಲಿ ೧.೮೦ ಎಕರೆ ಕಾರ್ಯನಿರ್ವಹಣಾಧಿಕಾರಿ ಹೆಸರಿನಲ್ಲಿ ಕಾಯ್ದಿರಿಸಿರುವ ಸರಕಾರಿ ಜಾಗವು ನಿವೇಶನ ರಹಿತರಿಗೆ ನಿವೇಶನ ಒದಗಿಸುವ ಉದ್ದೇಶಕ್ಕೆ ಮಂಜೂರು ಮಾಡಲಾಗಿತ್ತು.ಕೆಲವು ತಿಂಗಳ ಹಿಂದೆ ೩೭ ಕುಟುಂಬಗಳು ಈ ಜಾಗದಲ್ಲಿ ಅಕ್ರಮವಾಗಿ ಶೆಡ್ ನಿರ್ಮಿಸಿಕೊಂಡ ವಿಚಾರ ಗೊಂದಲಕ್ಕೆ ಕಾರಣವಾಯಿತು. ಸೋಮವಾರಪೇಟೆ ತಾಲೂಕು ಕಾರ್ಯನಿರ್ವಹಣಾಧಿಕಾರಿ ಹಾಗೂ ಚೆಟ್ಟಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷರು ಆಡಳಿತ ಮಂಡಳಿ ಸದಸ್ಯರು ಸ್ಥಳಕ್ಕೆ ಭೇಟಿ ನೀಡಿ ತೆರವುಗೊಳಿಸಲು ತಿಳಿಸಿದರು. ಆದರೆ ಶೆಡ್ ನಿರ್ಮಿಸಿದವರು ಜಾಗವನ್ನು ನಮಗೇ ನೀಡಬೇಕೆಂದು ಪಟ್ಟು ಹಿಡಿದು ಹೋರಾಟ ನಡೆಸುತ್ತಿದ್ದಾರೆ.
ಬೇಲಿ ಕಿತ್ತು ಹಾಕಿರುವ ಬಗ್ಗೆ ದೂರು
ಈ ಜಾಗಕ್ಕೆ ಸಮೀಪದ ಸರ್ವೆ ನಂ. ೨೬ರ ೩.೨೦ ರಲ್ಲಿ ಪೈಸಾರಿ ಜಾಗವೆಂದು ಹೇಳಿ ಶೌಕತಾಲಿ ಹಾಗೂ ಇತರರು ಬೇಲಿ ಕಂಬ ಹಾಗೂ ಅಕ್ರಮ ಪ್ರವೇಶಿಸಿದ್ದಾರೆಂದು ತೋಟದ ಮಾಲೀಕ ಕೆ.ಎಂ ಪೂವಯ್ಯ ಪೊಲೀಸ್ ಠಾಣೆಯಲ್ಲಿ ದೂರು ನೀಡಿದರು. ಮಡಿಕೇರಿ ಪೊಲೀಸ್ ಠಾಣಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಸಿವಿಲ್ ವಿಚಾರವಾದ್ದರಿಂದ ಜಾಗದ ದಾಖಲೆಯನ್ನು ಪರಿಶೀಲಿಸಿ ಮಾಹಿತಿ ನೀಡುವಂತೆ ಪೊಲೀಸ್ ಇಲಾಖೆ ಚೆಟ್ಟಳ್ಳಿ ಗ್ರಾಮ ಪಂಚಾಯಿತಿಗೆ ತಿಳಿಸಿತು.
ಜಾಗದ ಮಾಲೀಕರ ಮೇಲೆ ಪ್ರಾಣ ಬೆದರಿಕೆಯ ದೂರು
ತೋಟದ ಮಾಲೀಕ ೭೬ ವಯಸ್ಸಿನ ಹಿರಿಯರಾದ ಕೆ.ಎಂ. ಪೂವಯ್ಯನವರು ಅಕ್ಟೋಬರ್ ೨೮ ರಂದು ನನಗೆ ಪ್ರಾಣ ಬೆದರಿಕೆ ನೀಡಿದ್ದಾರೆಂದು ಬಹುಜನ ಕಾರ್ಮಿಕ ಸಂಘಟನೆಯ ಸುಮಿತ್ರ ದೂರು ನೀಡಿದ್ದಾರೆ.
ಈ ಪ್ರಕರಣಕ್ಕೆ ಸಂಬAಧಪಟ್ಟAತೆ ಚೆಟ್ಟಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಅಡಳಿತ ಮಂಡಳಿಯ ತುರ್ತು ಸಭೆ ಕರೆದು ಅಕ್ರಮ ಶೆಡ್ ನಿರ್ಮಾಣದ ಹಾಗೂ ಪೊಲೀಸ್ ದೂರಿನ ಬಗ್ಗೆ ಚರ್ಚಿಸಲಾಗಿ ಈ ಜಾಗದ ಬಗ್ಗೆ ಗಮನಹರಿಸಲು ಕಾರ್ಯನಿರ್ವಹಣಾಧಿಕಾರಿಗಳು ಹಾಗೂ ಪೊಲೀಸ್ ಇಲಾಖೆ ತುರ್ತಾಗಿ ಭೇಟಿ ನೀಡಿ ನಿವೇಶನಕ್ಕೆ ಗುರುತಿಸಿದ ಜಾಗದಲ್ಲಿ ಅಕ್ರಮ ಪ್ರವೇಶ ಹಾಗೂ ಶೆಡ್ ನಿರ್ಮಿಸಿದವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು. ಹಾಗೂ ಅವರಿಗೆ ಪಂಚಾಯಿತಿಯಿAದ ಯಾವುದೇ ಸೌಲಭ್ಯ ನೀಡಬಾರದೆಂದು ತೀರ್ಮಾನಿಸಲಾಯಿತು.
ನಿವೇಶನಕ್ಕೆ ಸಂಬAಧಿಸಿದ ಜಾಗದಲ್ಲಿ ಕಂದಾಯ ಇಲಾಖೆ ಸರ್ವೆ ನಡೆಸಲಾಗಿ ಮಂಜೂರಾತಿಯ ದಾಖಲೆಗಳ ಕಾರ್ಯ ನಡೆಯುತ್ತಿದ್ದು ಅದೇ ಜಾಗದಲ್ಲಿ ಅಕ್ರಮ ಶೆಡ್ ನಿರ್ಮಿಸಿದ್ದು, ಆಡಳಿತ ಮಂಡಳಿಯ ತುರ್ತು ಸಭೆಯ ತೀರ್ಮಾನದಂತೆ ಕಾನೂನು ಕ್ರಮಕೈಗೊಳ್ಳಲು ಪೊಲೀಸ್ ಹಾಗೂ ಕಾರ್ಯನಿರ್ವಹಣಾಧಿಕಾರಿಗಳಿಗೆ ಪತ್ರ ಬರೆಯಲಾಗಿದೆಂದು ಚೆಟ್ಟಳ್ಳಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಕಲ್ಪ ತಿಳಿಸಿದ್ದಾರೆ.
ಹೋರಾಟಕ್ಕೆ ಸಿದ್ಧತೆ
ಸರಕಾರಿ ನಿವೇಶನ ಜಾಗದಲ್ಲಿ ಅಕ್ರಮ ಶೆಡ್ ನಿರ್ಮಿಸಿರುವ ಬಗ್ಗೆ ಪೊಲೀಸ್ ಹಾಗೂ ಕಂದಾಯ ಇಲಾಖೆಯಾಗಲಿ. ಈವರೆಗೆ ಯಾವುದೇ ಕಾನೂನು ಕ್ರಮಕೈಗೊಳ್ಳದ ಹಿನ್ನೆಲೆಯಲ್ಲಿ ಪಂಚಾಯಿತಿ ಸದಸ್ಯರೇ ಈ ಪ್ರಕರಣದ ಬಗೆಹರಿಯುವವರೆಗೆ ಹೋರಾಟ ಮಾಡುವುದಾಗಿ ತೀರ್ಮಾನಿಸಿದ್ದಾರೆ.
ಹಲವು ತಿಂಗಳಿAದ ಜಾಗದ ವಿವಾದವಿದ್ದರೂ ಸೋಮವಾರಪೇಟೆ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಕಾನೂನು ಕ್ರಮ ಕೈಗೊಳ್ಳದೆ ನಿರ್ಲಕ್ಷö್ಯವಹಿಸಿದ್ದಾರೆಂದು ಪಂಚಾಯಿತಿ ಸದಸ್ಯರು ಆರೋಪಿಸಿದ್ದಾರೆ.
- ಕರುಣ್ ಕಾಳಯ್ಯ