ಮಡಿಕೇರಿ, ನ. ೯: ಮಾಸ್ಟರ್ಸ್ ಅಥ್ಲೆಟಿಕ್ ಫೆಡರೇಷನ್ ಆಫ್ ಇಂಡಿಯಾದಿAದ ಚೆನ್ನೆöÊನಲ್ಲಿ ನಡೆಯುತ್ತಿರುವ ೨೩ನೇ ಏಷ್ಯನ್ ಮಾಸ್ಟರ್ಸ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಕೊಡಗಿನವರಾದ ಅರ್ಜುನ ಪ್ರಶಸ್ತಿ ವಿಜೇತ ಕ್ರೀಡಾಪಟು ಬಲ್ಲಚಂಡ ರೀತ್ ದೇವಯ್ಯ ಅವರು ೬೦+ ವಿಭಾಗದಲ್ಲಿ ಮೂರು ಪದಕ ಪಡೆದು ಸಾಧನೆ ತೋರಿದ್ದಾರೆ. ಟ್ರಿಪಲ್ ಜಂಪ್ ಹಾಗೂ ಜಾವಲಿನ್ ತ್ರೋನಲ್ಲಿ ಚಿನ್ನದ ಪದಕ ಹಾಗೂ ೮೦ ಮೀಟರ್ ಹರ್ಡಲ್ಸ್ನಲ್ಲಿ ರೀತ್ ಬೆಳ್ಳಿಯ ಪದಕಗಳಿಸಿದ್ದಾರೆ.