ಸೋಮವಾರಪೇಟೆ, ನ. ೯: ಇಲ್ಲಿನ ಪುಷ್ಪಗಿರಿ ಜೇ.ಸಿ.ಐ. ಸೋಮವಾರ ಪೇಟೆ ವತಿಯಿಂದ ಆಯೋಜಿಸಿರುವ ಸುವರ್ಣ ಸಂಭ್ರಮ ಜೇಸಿ ಸಪ್ತಾಹಕ್ಕೆ ಸ್ಥಳೀಯ ನಂಜಮ್ಮ ಸಮುದಾಯ ಭವನದಲ್ಲಿ ಚಾಲನೆ ನೀಡಲಾಯಿತು. ಕಾರ್ಯಕ್ರಮಕ್ಕೆ ಜೆ.ಎ.ಸಿ. ವಲಯ ನಿರ್ದೇಶಕ ರಾಮಶೆಟ್ಟಿ ಚಾಲನೆ ನೀಡಿದರು. ನಂತರ ಮಾತನಾಡಿ, ಜೇಸಿ ಸಂಸ್ಥೆ ಯಾವುದೇ ಜಾತಿ, ಧರ್ಮ, ಬಡವ ಬಲ್ಲಿದನೆಂಬ ಭೇದಭಾವ ಇಲ್ಲದೆ ಉತ್ತಮ ಸೇವಾಕಾರ್ಯ ನಡೆಸಿಕೊಂಡು ಬರುವ ಮೂಲಕ ಕ್ರಿಯಾಶೀಲ ಸಂಸ್ಥೆಯಾಗಿ ಬೆಳೆದಿದೆ. ಎಲ್ಲರಿಗೂ ಸಮಾನ ಅವಕಾಶ ನೀಡುವ ಮೂಲಕ ಸಾಕಷ್ಟು ನಾಯಕರನ್ನು ಸಮಾಜಕ್ಕೆ ನೀಡಿರುವ ಹೆಗ್ಗಳಿಕೆ ಸಂಸ್ಥೆಗಿದೆ. ನಮ್ಮ ಗಳಿಕೆಯಲ್ಲಿ ಅಲ್ಪವನ್ನಾದರೂ ಸಮಾಜ ಸೇವೆಗೆ ಮೀಸಲಿಡುವ ಮೂಲಕ ದೀನ ದಲಿತರಿಗೆ ಸಹಾಯ ಮಾಡಬೇಕೆಂದರು.
ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಜಯಂತಿ ಶಿವಕುಮಾರ್ ಮಾತನಾಡಿ, ಸಂಘ ಸಂಸ್ಥೆಗಳಲ್ಲಿ ಎಲ್ಲರೂ ಪಾಲ್ಗೊಳ್ಳುವ ಮೂಲಕ ಸಿಕ್ಕ ಅವಕಾಶಗಳನ್ನು ಬಳಸಿಕೊಂಡು ಸಮಾಜ
ಸೇವೆಗೆ ಮುಂದಾಗಬೇಕು. ಜೇ.ಸಿ.ಐ. ಸಂಸ್ಥೆಯ ಮೂಲಕ ಸಾಕಷ್ಟು ಮಹಿಳೆಯರು ಸಮಾಜದ ಮುಖ್ಯವಾಹಿನಿಗೆ ಬಂದಿದ್ದಾರೆ ಎಂದರು. ಕಾರ್ಯಕ್ರಮದ ಆಧ್ಯಕ್ಷತೆಯನ್ನು ಜೇಸೀ ಸಂಸ್ಥೆ ಅಧ್ಯಕ್ಷೆ ಜಗದಾಂಭ ಗುರುಪ್ರಸಾದ್ ವಹಿಸಿದ್ದರು. ವೇದಿಕೆಯಲ್ಲಿ ಪ್ರಧಾನ ಕಾರ್ಯದರ್ಶಿ ವಿನುತಾ ಸುದೀಪ್, ಲೇಡಿ ಜೇಸಿ ಅಧ್ಯಕ್ಷೆ ಜ್ಯೋತಿ ರಾಜೇಶ್, ಕಾರ್ಯಕ್ರಮದ ಯೋಜನಾಧಿಕಾರಿ ಎಂ.ಪಿ. ರಾಜೇಶ್, ನಿಕಟಪೂರ್ವ ಅಧ್ಯಕ್ಷ ಎಸ್.ಆರ್. ವಸಂತ್ ಇದ್ದರು. ಈ ಸಂದರ್ಭ ಯುಕೆಜಿವರೆಗಿನ ಮಕ್ಕಳು, ಒಂದರಿAದ ಐದನೇ ತರಗತಿ ಹಾಗೂ ಆರರಿಂದ ೧೦ನೇ ತರಗತಿವರೆಗಿನ ವಿದ್ಯಾರ್ಥಿಗಳಿಗೆ ಪ್ರತ್ಯೇಕವಾಗಿ ಛದ್ಮವೇಷ ಸ್ಪರ್ಧೆ ನಡೆಸಲಾಯಿತು.