ಮಡಿಕೇರಿ, ನ. ೧೦: ಮಡಿಕೇರಿ ತಾಲೂಕಿನ ಅರ್ವತ್ತೋಕ್ಲು ಗ್ರಾಮದ ಎ.ಕೆ.ಸಿ ಸಂಸ್ಥೆಯ ವತಿಯಿಂದ ಕೈಲ್ ಪೊಳ್ದ್ ವಾರ್ಷಿಕ ಕ್ರೀಡಾಕೂಟ ಜಬ್ಬಂಡ ವಾಡೆ ಮಂದ್‌ನಲ್ಲಿ ಜರುಗಿತು. ಬೆಳಿಗ್ಗೆ ಸಾಂಪ್ರದಾಯಿಕ ಮಂದ್ ಮರಿಯುವ ಕಾರ್ಯಕ್ರಮದೊಂದಿಗೆ ಕ್ರೀಡಾ ಕೂಟಕ್ಕೆ ಚಾಲನೆ ನೀಡಲಾಯಿತು.

ಸುಮಾರು ೪೦ ಕ್ಕೂ ಹೆಚ್ಚು ವಿಭಾಗಗಳಲ್ಲಿ ಸ್ಪರ್ಧೆ ನಡೆದು ಹಿರಿಯರು ಕಿರಿಯರು ಮಹಿಳೆಯರು ಭಾಗವಹಿಸಿ ಸಂಭ್ರಮಿಸಿದರು. ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಕೋಳುಮಾಡಂಡ ರಘು ಪೂವಪ್ಪ ಪಾರಂಪರಿಕ ಕೈಲ್ ಪೊಳ್ದ್ ಕ್ರೀಡಾ ಕೂಟವನ್ನು ಪ್ರತಿವರ್ಷ ಆಚರಿಸಿಕೊಂಡು ಬರುತ್ತಿರುವ ಎ.ಕೆ.ಸಿ ಸಂಸ್ಥೆಯ ಕಾರ್ಯವೈಖರಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ತೆನ್ನಿರ ಮೈನಾ ನಮ್ಮ ಪೂರ್ವಿಕರು ಸಹಬಾಳ್ವೆಯ ದೃಷ್ಟಿ ಕೋನದಿಂದ ಕೈಲ್ ಪೊಳ್ದ್ ಕ್ರೀಡಾ ಕೂಟದಂತಹ ಕಾರ್ಯಕ್ರಮವನ್ನು ರೂಪಿಸಿದ್ದು ಅದರ ಮಹತ್ವವನ್ನು ಅರಿತು ಮುಂದಿನ ಪೀಳಿಗೆಗೂ ತಿಳಿಸುವ ಅಗತ್ಯತೆ ಇದೆ ಎಂದು ತಿಳಿಸಿದರು.

ಕಾರ್ಯಕ್ರಮ ನಿರೂಪಿಸಿ ಮಾತನಾಡಿದ ಸಂಸ್ಥೆಯ ಮುಖ್ಯಸ್ಥರಾದ ಚೆರುಮಾಡಂಡ ಸತೀಶ್ ಸೋಮಣ್ಣ ಹೆಚ್ಚಿನ ಸಂಖ್ಯೆಯಲ್ಲಿ ಊರಿನವರು ಕ್ರೀಡಾಕೂಟದಲ್ಲಿ ಪಾಲ್ಗೊಳ್ಳುವ ಮೂಲಕ ಸಂಸ್ಥೆಯ ಉದ್ದೇಶವನ್ನು ಈಡೇರಿಸಿ ದ್ದಾರೆ ಎಂದು ಹೇಳಿದರು.

ಸಂಸ್ಥೆಯ ಅಧ್ಯಕ್ಷರಾದ ಮುಕ್ಕಾಟಿರ ಡಾಲಿ ಕುಂಞಪ್ಪ ವಾರ್ಷಿಕ ವರದಿ ಮಂಡಿಸಿ ದರು. ಪ್ರಮುಖರಾದ ಮುಂಜಾAದಿರ ಸತ್ಯ ಬೋಪಯ್ಯ, ಕೋಳುಮಾಡಂಡ ಕಿರಣ್, ಮುಂಜಾAದಿರ ಅಜಿತ್, ಜಬ್ಬಂಡ ತಿಮ್ಮಯ್ಯ ಮತ್ತು ಇತರರು ಸ್ಪರ್ಧೆಗಳನ್ನು ನಿರ್ವಹಿಸಿದರು