ಮಡಿಕೇರಿ, ನ. ೧೦: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಉಪನಿರ್ದೇಶಕರ ಕಛೇರಿ, ಶಾಲಾ ಶಿಲಾ ಶಿಕ್ಷಣ ಇಲಾಖೆ ಕೊಡಗು ಜಿಲ್ಲೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ವೀರಾಜಪೇಟೆ ತಾಲೂಕು ಹಾಗೂ ಜಿಲ್ಲಾ ಫುಟ್ಬಾಲ್ ಅಸೋಸಿಯೇಷನ್, ಮಿಲನ್ಸ್ ಫುಟ್ಬಾಲ್ ಕ್ಲಬ್ ಅಮ್ಮತ್ತಿ ಇವರ ಸಹಯೋಗದೊಂದಿಗೆ ಅಮ್ಮತ್ತಿಯ ಪ್ರೌಢಶಾಲಾ ಶಾಲಾ ಮೈದಾನದಲ್ಲಿ ನಡೆದ ರಾಜ್ಯಮಟ್ಟದ ಬಾಲಕ ಮತ್ತು ಬಾಲಕಿಯರ ಫುಟ್ಬಾಲ್ ಪಂದ್ಯಾವಳಿಗೆ ತೆರೆ ಬಿದ್ದಿದೆ.
ಬಾಲಕರ ೧೭ ವರ್ಷ ವಯೋಮಾನದ ವಿಭಾಗದಲ್ಲಿ ಡಿವೈಇಎಸ್ ಬೆಂಗಳೂರು ತಂಡ ಚಾಂಪಿಯನ್ ಪಟ್ಟ ಅಲಂಕರಿಸಿದೆ. ದ್ವಿತೀಯ ಸ್ಥಾನಕ್ಕೆ ಬೆಳಗಾವಿ ವಿಭಾಗ ತೃಪ್ತಿಪಟ್ಟುಕೊಂಡಿದೆ.೧೭ ವರ್ಷ ವಯೋಮಾನದ ಬಾಲಕರ ಕೊನೆಯ ಪಂದ್ಯವು ಡಿವೈಇಎಸ್ ಬೆಂಗಳೂರು ಹಾಗೂ ಬೆಳಗಾವಿ ವಿಭಾಗಗಳ ನಡುವೆ ನಡೆಯಿತು.
ಜಿದ್ದಾಜಿದ್ದಿನ ಪಂದ್ಯದಲ್ಲಿ ಬೆಳಗಾವಿ ವಿಭಾಗವು ಮೊದಲಾರ್ಧದಲ್ಲಿ ೧-೦ ಗೋಲುಗಳ ಅಂತರದಿAದ ಮುನ್ನಡೆ ಸಾಧಿಸಿತು.
ದ್ವಿತೀಯಾರ್ಧದಲ್ಲಿ ಆಕ್ರಮಣಕಾರಿ ಆಟಕ್ಕೆ ಮುಂದಾಗಿದ್ದ ಡಿವೈಇಎಸ್ ತಂಡ ಎಲ್ಲಾ ಪ್ರಯತ್ನಗಳನ್ನು ಬೆಳಗಾವಿ ತಂಡದ ಗೋಲ್ ಕೀಪರ್ ಆಕರ್ಷಕ ರೀತಿಯ ಗೋಲ್‌ಸೇವ್ ಮಾಡುವ ಮೂಲಕ ವಿಫಲಗೊಳಿಸಿದ್ದರು. ಆದರೆ ಕೊನೆಯ ಹತ್ತು ನಿಮಿಷ ಇರುವಾಗ ಡಿವೈಇಎಸ್ ತಂಡವು ಗೋಲು ದಾಖಲಿಸಿ ೧-೧ ಗೋಲುಗಳ ಸಮಬಲ ಸಾಧಿಸಿತು.
ಮತ್ತೊಮ್ಮೆ ಆಕ್ರಮಣಕಾರಿ ಆಟಕ್ಕೆ ಮುಂದಾದ ಡಿವೈಇಎಸ್ ತಂಡವು ಮತ್ತೊಂದು ಗೋಲು ಬಾರಿಸುವ ಮೂಲಕ ೨-೧ ಗೋಲುಗಳ ಅಂತರದಿAದ ಮುನ್ನಡೆ ಸಾಧಿಸಿ ಗೆಲುವು ಸಾಧಿಸಿದರೂ ಎಲ್ಲಾ ಪಂದ್ಯದಲ್ಲಿ ಗೆಲುವು ಸಾಧಿಸಿ ಡಿವೈಇಎಸ್ ತಂಡವು ೧೨ ಅಂಕಗಳೊAದಿಗೆ ಪ್ರಶಸ್ತಿ ಪಡೆಯಿತು.
೧೭ ವರ್ಷದ ಬಾಲಕಿಯರ ವಿಭಾಗದಲ್ಲಿ ಮೈಸೂರು ವಿಭಾಗ ಪ್ರಥಮ ಹಾಗೂ ಕಲಬುರ್ಗಿ ವಿಭಾಗ ದ್ವಿತೀಯ ಸ್ಥಾನ ಪಡೆಯಿತು.
ಬಾಲಕಿಯರ ೧೪ ವರ್ಷ ವಯೋಮಾನದ ವಿಭಾಗದಲ್ಲಿ ಬೆಂಗಳೂರು ವಿಭಾಗವು ೩ ಪಂದ್ಯದಲ್ಲಿ ಎರಡು ಗೆಲುವು ಹಾಗೂ ಒಂದು ಪಂದ್ಯದಲ್ಲಿ ಡ್ರಾ ಪಡೆದು ಏಳು ಅಂಕಗಳೊAದಿಗೆ ಟಾಪರ್ ಚಾಂಪಿಯನ್ ಪ್ರಶಸ್ತಿ ಅಲಂಕರಿಸಿದೆ. ಬೆಳಗಾವಿ ವಿಭಾಗ ಒಂದು ಪಂದ್ಯದಲ್ಲಿ ಗೆದ್ದು ಎರಡು ಪಂದ್ಯವನ್ನು ಡ್ರಾ ಮಾಡಿಕೊಂಡು ಐದು ಅಂಕಗಳೊAದಿಗೆ ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ.
ಗೆಲುವು ಪಡೆದ ತಂಡಗಳು ಡಿಸೆಂಬರ್ ಎರಡನೇ ವಾರ ಜಾರ್ಖಂಡ್ ನಲ್ಲಿ ನಡೆಯಲಿರುವ ರಾಷ್ಟ್ರೀಯ ಮಟ್ಟದ ಫುಟ್ಬಾಲ್ ಪಂದ್ಯಾವಳಿಯಲ್ಲಿ ಕರ್ನಾಟಕ ತಂಡವನ್ನು ಪ್ರತಿನಿಧಿಸಲಿದೆ.