ಶನಿವಾರಸಂತೆ, ನ.೧೦ : ಪಟ್ಟಣದ ಶ್ರೀ ಬೀರಲಿಂಗೇಶ್ವರ, ಪ್ರಬಲಭೈರವಿ, ಪರಿವಾರ ದೇವರ ಸೇವಾ ಸಮಿತಿ ವತಿಯಿಂದ ಶ್ರೀ ಬೀರಲಿಂಗೇಶ್ವರ, ಪ್ರಬಲಭೈರವಿ, ಪರಿವಾರ ದೇವರ ೭ ನೇ ವರ್ಷದ ವಾರ್ಷಿಕ ಪೂಜಾ ಮಹೋತ್ಸವ ಶ್ರದ್ಧಾಭಕ್ತಿಯಿಂದ ಜರುಗಿತು.
ಲೋಕ ಕಲ್ಯಾಣಾರ್ಥವಾಗಿ ಹೋಮ ಮತ್ತು ಮಹಾಪೂಜೆ ಏರ್ಪಡಿಸಲಾಗಿತ್ತು. ಗಂಗೆ ಪೂಜೆ, ಗೋಪೂಜೆ, ಮಂಗಳಾರತಿ, ನಂತರ ಸಹಕಾರ ಬ್ಯಾಂಕ್ ಹತ್ತಿರದಿಂದ ಶ್ರೀ ಬೀರಲಿಂಗೇಶ್ವರ ದೇವಸ್ಥಾನದವರೆಗೆ ಮಹಿಳೆಯರ ಕಳಶ-ಕುಂಭ ಮೆರವಣಿಗೆ ನಡೆಯಿತು. ನಂತರ ಶ್ರೀಗಣಪತಿ-ಪಾರ್ವತಿ-ಚಂದ್ರಮೌಳೇಶ್ವರ ದೇವಸ್ಥಾನದಲ್ಲಿ ಮಹಾಸಂಕಲ್ಪ, ಮಹಾಮಂಗಳಾರತಿ ಮತ್ತು ಪ್ರಸಾದ ವಿನಿಯೋಗವಾಯಿತು.
ನಂತರ ಕ್ರಮವಾಗಿ ಊರು ಒಡೆಯರ ಮಹಾ ಪೂಜೆ, ಮಹಾಮಂಗಳಾರತಿ, ಬಿದರೂರು ಬ್ರಹ್ಮದೇವರ ಮಹಾಪೂಜೆ, ಮಹಾಮಂಗಳಾರತಿ, ಬಿದರೂರು ಶ್ರೀಬಸವೇಶ್ವರ ದೇವರ ಮಹಾಪೂಜೆ, ಮಹಾಮಂಗಳಾರತಿ, ಹೆಮ್ಮನೆ ಗ್ರಾಮದ ಮಾರಮ್ಮ ಮತ್ತು ಶ್ರೀಬಸವೇಶ್ವರ ದೇವರ ಮಹಾ ಪೂಜೆ, ಮಹಾಮಂಗಳಾರತಿ, ತ್ಯಾಗರಾಜ ಕಾಲೋನಿಯ ಶ್ರೀಚಾಮುಂಡೇಶ್ವರಿ ದೇವಿ-ಗುಳಿಗ ದೈವದ ಬನದಲ್ಲಿ ಮಹಾಪೂಜೆ, ಮಹಾಮಂಗಳಾರತಿ, ಶ್ರೀವಿಜಯ ವಿನಾಯಕ ದೇವರ ಮಹಾಪೂಜೆ, ಮಹಾಮಂಗಳಾರತಿ ನಡೆಯಿತು.
ಬನ್ನಿಮಂಟಪದಲ್ಲಿ ಮಹಾಪೂಜೆ, ಮಹಾಮಂಗಳಾರತಿ, ಶ್ರೀರಾಮ ಮಂದಿರದಲ್ಲಿ ದೇವರ ಮಹಾಪೂಜೆ, ಮಹಾಮಂಗಳಾರತಿ, ಪಟ್ಟಣದ ಮುಖ್ಯರಸ್ತೆಯಲ್ಲಿರುವ ಜಾಮೀಯ ಮಸೀದಿಯಲ್ಲಿ ಪ್ರಾರ್ಥನೆ ನಡೆಯಿತು.ಆನಂತರ ಶ್ರೀಬೀರಲಿಂಗೇಶ್ವರ ಪ್ರಬಲ ಭೈರವಿ ದೇವರ ಮಹಾ ಪೂಜೆ, ಮಹಾಮಂಗಳಾರತಿಯಾಗಿ, ಪ್ರಸಾದ ವಿನಿಯೋಗ ನಡೆಯಿತು.ವಿಶೇಷ ಪೂಜೆಗಳಾದ ದೀಪಾರಾಧನೆ, ಗಣಪತಿಪೂಜೆ, ಪಂಚಗವ್ಯ, ಪುಣ್ಯಾಹ, ದೇವನಾಂದಿ, ಗಣಪತಿ ಹೋಮ, ಧನ್ವಂತರಿ ಹೋಮ, ಮೂಲದೇವರಿಗೆ ಫಲ-ಪಂಚಾಮೃತ ಅಭಿಷೇಕ, ಏಕವಾರು ರುದ್ರಾಭಿಷೇಕ, ಮಹಾಬಲಿ, ಮಹಾಪೂಜೆ, ಮಹಾಮಂಗಳಾರತಿ, ತೀರ್ಥ ಪ್ರೋಕ್ಷಣೆ ಹಾಗೂ ಪ್ರಸಾದ ವಿನಿಯೋಗ ನಡೆದು, ಪೂಜೆಯ ನಂತರ ಭಕ್ತಾದಿಗಳಿಗೆ ಅನ್ನ ದಾಸೋಹ ಏರ್ಪಡಿಸಲಾಗಿತ್ತು.
ಪ್ರಧಾನ ಅರ್ಚಕರಾದ ಮಾಲತೇಶ್ ಭಟ್ ಹಾಗೂ ಇತರ ೯ ದೇವಾಲಯಗಳ ಅರ್ಚಕರು ಪೂಜಾ ಕೈಂಕರ್ಯ ನೆರವೇರಿಸಿದರು. ಶ್ರೀ ಬೀರಲಿಂಗೇಶ್ವರ, ಪ್ರಬಲಭೈರವಿ, ಪರಿವಾರ ದೇವರ ಸೇವಾ ಸಮಿತಿ ಆಡಳಿತ ಮಂಡಳಿ ಅಧ್ಯಕ್ಷ ಎಂ.ಸಿ.ಕಾAತರಾಜ್, ಸ್ಥಾಪಕ ಅಧ್ಯಕ್ಷ ಎಸ್.ಸಿ. ಶರತ್ ಶೇಖರ್, ಉಪಾಧ್ಯಕ್ಷ ಬಿ.ಕೆ.ಚಂದ್ರು, ಕಾರ್ಯದರ್ಶಿ ದಿವಾಕರ್, ಖಜಾಂಚಿ ಎನ್.ಪಿ.ರವಿ, ನಿರ್ದೇಶಕರು, ಸದಸ್ಯರು, ೯ ದೇವಾಲಯಗಳ ಸೇವಾ ಸಮಿತಿ ಪದಾಧಿಕಾರಿಗಳು, ಸದಸ್ಯರು ಪಾಲ್ಗೊಂಡಿದ್ದರು.