ಬಿಹಾರ, ನ. ೧೪: ಬಿಹಾರ ವಿಧಾನಸಭೆ ಚುನಾವಣೆ ಫಲಿತಾಂಶ ಪ್ರಕಟಗೊಂಡಿದ್ದು, ರಾಷ್ಟಿçÃಯ ಪ್ರಜಾಸತ್ತಾತ್ಮಕ ಒಕ್ಕೂಟ (ಎನ್‌ಡಿಎ) ಪ್ರಚಂಡ ಬಹುಮತದೊಂದಿಗೆ ಗೆಲುವು ಸಾಧಿಸಿದೆ. ಒಟ್ಟು ೨೪೩ ಕ್ಷೇತ್ರಗಳ ಪೈಕಿ ೨೦೨ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದೆ. ಇದರಲ್ಲಿ ಬಿಜೆಪಿ ೮೯ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದಾರೆ.

ರಾಷ್ಟಿçÃಯ ಕಾಂಗ್ರೆಸ್ ನೇತೃತ್ವದ ಮಹಾಘಟಾಬಂಧನ್ (ಎಂಜಿಬಿ) ೩೫ ಕ್ಷೇತ್ರಗಳಲ್ಲಿ ಮಾತ್ರ ಗೆಲುವು ಸಾಧಿಸಿದ್ದು, ಈ ಪೈಕಿ ಕಾಂಗ್ರೆಸ್ ಪಕ್ಷ ಕೇವಲ ೬ ಸ್ಥಾನಗಳನ್ನು ಮಾತ್ರ ಪಡೆದುಕೊಂಡಿದೆ. ಇನ್ನುಳಿದಂತೆ ಇತರ ಪಕ್ಷಗಳು ಆರು ಕ್ಷೇತ್ರಗಳಲ್ಲಿ ತಮ್ಮ ಇರುವಿಕೆಯನ್ನು ತೋರ್ಪಡಿಸಿದೆ.

ಜನತೆ ನೀಡಿದ ಫಲಿತಾಂಶ ಇಂದು ಹೊರಬಿದ್ದಿದ್ದು, ಇದರಲ್ಲಿ ಎನ್‌ಡಿಎ ಮೈತ್ರಿಕೂಟ ಗೆಲುವು ಸಾಧಿಸಿದೆ. ಮೈತ್ರಿಕೂಟದ ಬಿಜೆಪಿ ಪಕ್ಷ ಅತ್ಯಧಿಕ ಅಂದರೆ ೮೯ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದರೆ, ಜೆಡಿಯು ಪಕ್ಷ ೮೫ ಕ್ಷೇತ್ರಗಳಲ್ಲಿ ಗೆದ್ದಿದೆ. ಇತರ ಮೈತ್ರಿ ಪಕ್ಷಗಳಾದ ಲೋಕಜನಶಕ್ತಿ ಪಕ್ಷ (ಎನ್‌ಜೆಪಿಆರ್) ೧೯, ಹಿಂದೂಸ್ಥಾನಿ ಅವಮ್ ಮೋರ್ಚಾ (ಹೆಚ್‌ಎಎಂ) ೫, ರಾಷ್ಟಿçÃಯ ಲೋಕ ಮೋರ್ಚಾ (ಆರ್‌ಎಲ್‌ಎಂ) ೪ ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವ ಮೂಲಕ ಎನ್‌ಡಿಎಗೆ ಗೆಲುವಿನಲ್ಲಿ ಕೈ ಜೋಡಿಸಿದೆ.

ಇನ್ನುಳಿದಂತೆ ಮಹಾಘಟಾಬಂಧನ್ (ಎಂಜಿಬಿ) ಮೈತ್ರಿಕೂಟದಲ್ಲಿ ರಾಷ್ಟಿçÃಯ ಜನತಾದಳ (ಆರ್‌ಜೆಡಿ) ೨೫ ಸ್ಥಾನ ಗಳಿಸಿದರೆ, ರಾಷ್ಟಿçÃಯ ಕಾಂಗ್ರೆಸ್ ೬, ಸಿಪಿಐಎಂಎಲ್ ೨, ಸಿಪಿಎಂ ೧, ಇಂಡಿಯನ್ ಇನ್‌ಕ್ಲೂಸಿವ್ ಪಾರ್ಟಿ (ಐಐಪಿ) ೧ ಸ್ಥಾನ ಮಾತ್ರ ಪಡೆದುಕೊಂಡಿವೆ.