ಸೋಮವಾರಪೇಟೆ, ನ. ೧೪: ಕೊಡಗು ಪತ್ರಕರ್ತರ ಸಂಘದ ಸೋಮವಾರಪೇಟೆ ತಾಲೂಕು ಘಟಕದಿಂದ ನೀಡಲಾಗುವ ವಾರ್ಷಿಕ ಪ್ರಶಸ್ತಿಗೆ ನಾಲ್ವರು ಪತ್ರಕರ್ತರು ಆಯ್ಕೆಯಾಗಿದ್ದು, ಶಕ್ತಿ ಪತ್ರಿಕೆಯ ಐಗೂರು ವಿಭಾಗದ ವರದಿಗಾರ ಎಂ.ಎ. ಸುಕುಮಾರ್ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಕೊಡಗು ಪತ್ರಕರ್ತರ ಸಂಘದ ತಾಲೂಕು ಘಟಕದ ಅಧ್ಯಕ್ಷ ಹೆಚ್.ಆರ್. ಹರೀಶ್‌ಕುಮಾರ್ ತಮ್ಮ ತಂದೆ ದಿ. ರಾಮೇಗೌಡ ಅವರ ಹೆಸರಿನಲ್ಲಿ ಸ್ಥಾಪಿಸಿರುವ ಅತ್ಯುತ್ತಮ ಗ್ರಾಮೀಣ ವರದಿ ಪ್ರಶಸ್ತಿಗೆ, ಶಕ್ತಿ ಪತ್ರಿಕೆಯಲ್ಲಿ ಪ್ರಕಟವಾದ ‘ಐಗೂರಿನಲ್ಲಿ ಇನ್ನೂ ಪ್ರಾರಂಭವಾಗದ ಸೇತುವೆ ಕಾಮಗಾರಿ’ ವರದಿಗೆ ಎಂ.ಎ. ಸುಕುಮಾರ್ ಅವರು ಆಯ್ಕೆಯಾಗಿದ್ದಾರೆ.
ಕೊಡಗು ಪತ್ರಕರ್ತರ ಸಂಘದ ಸ್ಥಾಪಕ ಅಧ್ಯಕ್ಷ ಎಸ್.ಎ. ಮುರಳೀಧರ್ ಅವರು ತಮ್ಮ ತಂದೆ ದಿ. ಅಪ್ಪಸ್ವಾಮಿ ಹೆಸರಿನಲ್ಲಿ ಸ್ಥಾಪಿಸಿರುವ ಅತ್ಯುತ್ತಮ ಕ್ರೀಡಾ ವರದಿ ಪ್ರಶಸ್ತಿಗೆ ವಿಜಯಕರ್ನಾಟಕ ಪತ್ರಿಕೆಯಲ್ಲಿ ‘ಅಂತರರಾಷ್ಟಿçÃಯ ಕ್ರೀಡೆಗೆ ತಾಯಿ-ಮಗ ಆಯ್ಕೆ’ ವಿಶೇಷ ವರದಿಗೆ ತೇಲಪಂಡ ಕವನ್ ಕಾರ್ಯಪ್ಪ ಆಯ್ಕೆಯಾಗಿದ್ದಾರೆ.
ಕೊಡಗು ಪತ್ರಕರ್ತರ ಸಂಘದ ಉಪಾಧ್ಯಕ್ಷ ತೇಲಪಂಡ ಕವನ್ ಕಾರ್ಯಪ್ಪ ತಮ್ಮ ತಾಯಿ ದಿ. ತೇಲಪಂಡ ಶಾರದ ಮತ್ತು ಸೋಮಣ್ಣ ಅವರ ಹೆಸರಿನಲ್ಲಿ ಸ್ಥಾಪಿಸಿರುವ ಅತ್ಯುತ್ತಮ ಮಾನವೀಯ ವರದಿ ಪ್ರಶಸ್ತಿಗೆ ಪ್ರಜಾವಾಣಿ ಪತ್ರಿಕೆಯಲ್ಲಿ ‘ಪೌರ ಕಾರ್ಮಿಕರಿಗೆ ತಪ್ಪದ ಸಂಕಷ್ಟ’ ವಿಶೇಷ ವರದಿಗೆ ಡಿ.ಪಿ. ಲೋಕೇಶ್ ಹಾಗೂ ಕಾನ್ವೆಂಟ್ ಬಾಣೆ ನಿವಾಸಿ ಯಶಸ್ವಿನಿ ಚಂದ್ರಕಾAತ್ ತಮ್ಮ ತಂದೆ ದಿ. ಕೂಗೂರು ತಿಮ್ಮಪ್ಪ ಅವರ ಹೆಸರಿನಲ್ಲಿ ಸ್ಥಾಪಿಸಿರುವ ಅತ್ಯುತ್ತಮ ಕೃಷಿ ವರದಿ ಪ್ರಶಸ್ತಿಗೆ ಕನ್ನಡ ಪ್ರಭದಲ್ಲಿ ಪ್ರಕಟವಾದ ‘ಕೈಕೊಟ್ಟ ಮಳೆ ಬೆಳೆಗಾರ ಕಂಗಾಲು’ ವಿಶೇಷ ವರದಿಗೆ ಎಸ್.ಎ. ಮುರಳೀಧರ ಭಾಜನರಾಗಿದ್ದಾರೆ.
ತಾ. ೧೬ರಂದು (ನಾಳೆ) ಇಲ್ಲಿನ ಪತ್ರಿಕಾ ಭವನದಲ್ಲಿ ನಡೆಯುವ ವಾರ್ಷಿಕೋತ್ಸವದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಸಂಘದ ಅಧ್ಯಕ್ಷ ಹರೀಶ್‌ಕುಮಾರ್ ತಿಳಿಸಿದ್ದಾರೆ.