ಸೋಮವಾರಪೇಟೆ, ನ. ೧೫: ಕಳೆದ ವಿಧಾನಸಭಾ ಚುನಾವಣೆ ಸಂದರ್ಭ ಕಾಂಗ್ರೆಸ್‌ನಿAದ ಸ್ಪರ್ಧಿಸಲು ಪ್ರಬಲ ಆಕಾಂಕ್ಷಿಯಾಗಿ ಅಂತಿಮ ಕ್ಷಣದವರೆಗೂ ಟಿಕೇಟ್ ನಿರೀಕ್ಷೆಯಲ್ಲಿದ್ದ ಉದ್ಯಮಿ, ಸಮಾಜಸೇವಕ, ದಾನಿಯೆಂದೇ ಗುರುತಿಸಲ್ಪಟ್ಟಿರುವ ರಾಜ್ಯ ಒಕ್ಕಲಿಗರ ಸಂಘದ ಜಿಲ್ಲಾ ನಿರ್ದೇಶಕ ಹರಪಳ್ಳಿ ರವೀಂದ್ರ ಅವರು ಬಿಜೆಪಿ ಸೇರ್ಪಡೆಗೆ ಮುಂದಾಗಿದ್ದು, ತಾ. ೧೭ರಂದು ರಾಜ್ಯ ಬಿಜೆಪಿ ನಾಯಕರ ಸಮಕ್ಷಮ ಸೋಮವಾರಪೇಟೆಯಲ್ಲಿ ಅಧಿಕೃತವಾಗಿ ಪಕ್ಷ ಸೇರಲಿದ್ದಾರೆ.

ಕಾಂಗ್ರೆಸ್‌ನಲ್ಲಿನ ಸದ್ಯದ ಬೆಳವಣಿಗೆಯಿಂದ ಬೇಸತ್ತಿರುವ ತಾವು ಪೂರ್ಣ ಪ್ರಮಾಣದಲ್ಲಿ ರಾಜಕೀಯ ಕ್ಷೇತ್ರದಲ್ಲಿ ತೊಡಗಿಸಿಕೊಂಡು ಪಕ್ಷ ಸಂಘಟನೆಯೊAದಿಗೆ ಜನಸೇವೆ ಮಾಡಬೇಕೆಂಬ ಅಭಿಲಾಶೆಯೊಂದಿಗೆ ಯಾವುದೇ ಬೇಡಿಕೆಗಳನ್ನು ವರಿಷ್ಠರ ಮುಂದಿಡದೇ ಭಾರತೀಯ ಜನತಾ ಪಾರ್ಟಿ ಸೇರ್ಪಡೆಗೊಳ್ಳುತ್ತಿದ್ದೇನೆ ಎಂದು ಅವರು ‘ಶಕಿ’್ತಗೆ ತಿಳಿಸಿದ್ದಾರೆ.

ತಾ. ೧೭ರಂದು ಪಟ್ಟದ ಜೇಸೀ ವೇದಿಕೆಯಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ರಾಜ್ಯಮಟ್ಟದ ನಾಯಕರುಗಳ ಸಮಕ್ಷಮ ಬೆಂಬಲಿಗರೊAದಿಗೆ ಬಿಜೆಪಿ ಸೇರ್ಪಡೆಯಾಗುತ್ತಿರುವುದಾಗಿ ಹೇಳಿದ್ದಾರೆ.