ಮಡಿಕೇರಿ, ನ. ೧೫: ಚೆಟ್ಟಿಮಾನಿಯ ಸಾಂದೀಪನಿ ವಿದ್ಯಾಪೀಠ ಶಾಲೆಯ ವಿದ್ಯಾರ್ಥಿಗಳು ತಾ. ೧೧ ರಂದು ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಭಾಗವಹಿಸಿ ೮ ಪ್ರಥಮ ಸ್ಥಾನ, ೯ ದ್ವಿತೀಯ ಸ್ಥಾನ ಹಾಗೂ ೮ ತೃತೀಯ ಸ್ಥಾನಗಳನ್ನು ಪಡೆದುಕೊಂಡಿದ್ದಾರೆ.
ಪ್ರಥಮ ಸ್ಥಾನ ಪಡೆದ ೮ ವಿದ್ಯಾರ್ಥಿಗಳಾದ ಅಯಾನ ಯೋಗೇಶ್ ಕೆ., ಹಿಭಾ ಫಾತಿಮ, ಜಿತಿಕ ಹೆಚ್.ಎ., ಹಿಮಾನಿ ಪಿ.ಜೆ., ಯಶಿಕ ಪಿ.ಹೆಚ್. ಹಾಗೂ ಮಾನ್ವಿ ಡಿ.ಪಿ. ತಾಲೂಕು ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.