ಸುಂಟಿಕೊಪ್ಪ, ನ.೨೫ : ಈ ಹಿಂದಿನ ನಾಕೂರು ಶಿರಂಗಾಲ ಗ್ರಾಮ ಪಂಚಾಯಿತಿಯ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯಿಂದ ಅವ್ಯವಹಾರ ಹಾಗೂ ಹಣ ದುರುಪಯೋಗದ ಹಿನ್ನಲೆಯಲ್ಲಿ ಕೂಡಲೇ ತನಿಖೆ ನಡೆಸುವಂತೆ ಜಿಲ್ಲಾಧಿಕಾರಿಗಳಿಗೆ ಮತ್ತು ಲೋಕಾಯುಕ್ತಕ್ಕೂ ದೂರು ನೀಡುವಂತೆ ಗ್ರಾಮಸಭೆಯಲ್ಲಿ ಸರ್ವಾನುಮತದಿಂದ ನಿರ್ಣಯವನ್ನು ಅಂಗೀಕರಿಸಲಾಯಿತು.
ಕಾನ್ಬೈಲ್ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಸಭಾಂಗಣದಲ್ಲಿ ನಾಕೂರು ಶಿರಂಗಾಲ ಗ್ರಾಮ ಪಂಚಾಯಿತಿ ೨೦೨೫-೨೬ನೇ ಸಾಲಿನ ಗ್ರಾಮ ಸಭೆಯು ಗ್ರಾಮ ಪಂಚಾಯಿತಿ ಅಧ್ಯಕ್ಷ ಮಂದೋಡಿ ಜಗನ್ನಾಥ್ ಅಧ್ಯಕ್ಷತೆಯಲ್ಲಿ ನಡೆಯಿತು.
ಗ್ರಾಮ ಪಂಚಾಯಿತಿಯ ಲೆಕ್ಕ ಪರಿಶೋಧನ ವರದಿ ಹಾಗೂ ದಾಖಲಾತಿಗಳನ್ನು ಪರಿಶೀಲಿಸಿದ ಸಂದರ್ಭ ಅವ್ಯವಹಾರ ಹಣದುರುಪಯೋಗ ಕಂಡುಬAದಿದೆ. ಈ ಬಗ್ಗೆ ಸಂಬAಧಿಸಿದ ಮೇಲಾಧಿಕಾರಿಗಳಿಗೆ ಲಿಖಿತವಾಗಿ ದೂರು ನೀಡಿದ್ದರೂ ಯಾವುದೇ ಕ್ರಮ ಕೈಗೊಂಡಿರುವುದಿಲ್ಲ ಎಂದು ಪಂಚಾಯಿತಿ ಅಧ್ಯಕ್ಷ ಎಂ.ಜಗನ್ನಾಥ್ ಗ್ರಾಮಸ್ಥರ ಪ್ರಶ್ನೆಗೆ ಉತ್ತರಿಸಿದರು.
ಗ್ರಾಮದಲ್ಲಿ ಬಡಜನತೆಗೆ ವಸತಿ ಯೋಜನೆಗೆ ಸಂಬAಧಿಸಿದAತೆ ಹಣಪಡೆದಿರುವುದು, ವಿವಿಧ ಕೆಲಸ ಕಾರ್ಯಗಳಿಗೆ ಹಣಪಡೆದು ವಂಚಿಸಿರುವುದಾಗಿ ಗ್ರಾಮಸ್ಥರು ಆರೋಪಿಸಿದರು. ಇದೇ ಸಂದರ್ಭದಲ್ಲಿ ಗ್ರಾಮ ಸಭೆಯಲ್ಲಿ ರಸ್ತೆ ಚರಂಡಿ ಕುಡಿಯುವ ನೀರು ವಸತಿ ಯೋಜನೆ ಹಾಗೂ ಒತ್ತುವರಿ ಕುರಿತಾದ ವಿಷಯಗಳ ಬಗ್ಗೆ ಗ್ರಾಮಸ್ಥರು ಪ್ರಸ್ತಾಪಿಸಿದರು. ಎಮ್ಮೆಗುಂಡಿ ರಸ್ತೆ ಒತ್ತುವರಿಯಾಗಿದೆ, ಲ್ಯಾಂಡ್ ಆರ್ಮಿ ವತಿಯಿಂದ ನಿರ್ಮಿಸಿದ ರಸ್ತೆ ಕಳಪೆ, ರಸ್ತೆ ಬದಿ ವಾಹನಗಳನ್ನು ನಿಲ್ಲಿಸುತ್ತಿದ್ದು ವಾಹನಗಳ ಸಂಚಾರಕ್ಕೆ ತೊಡಕು ಮೊದಲಾದ ವಿಷಯಗಳ ಬಗ್ಗೆ ಗಮನ ಸೆಳೆದರು.
ನಾಕೂರು ಶಿರಂಗಾಲ ಗ್ರಾಮ ಹಾರಂಗಿ ಹಿನ್ನೀರಿನ ಪ್ರದೇಶವಾಗಿದ್ದು ಇಲ್ಲಿ ಸಾಕಷ್ಟು ದುರಂತಗಳು ನಡೆಯುತ್ತಿವೆ. ಹಾರಂಗಿ ಹಿನ್ನೀರಿನಲ್ಲಿ ಆಕಸ್ಮಿಕ ಅವಘಡಗಳು ಸಂಭವಿಸುತ್ತಿದ್ದು, ಇದನ್ನು ತಡೆಯುವ ನಿಟ್ಟಿನಲ್ಲಿ ಸಂಬAಧಿಸಿದ ಇಲಾಖೆಗಳು ಹಾಗೂ ಜಿಲ್ಲಾಧಿಕಾರಿಯವರಿಂದ ಅನುಮತಿ ಪಡೆದು ಕ್ರಮ ವಹಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದರು.
ನಾಕೂರು ಶಿರಂಗಾಲ ಗ್ರಾಮ ಪಂಚಾಯಿತಿ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿ ಬಗ್ಗೆ ಗ್ರಾಮಸ್ಥರು ಗ್ರಾಮ ಸಭೆಯಲ್ಲಿ ಪ್ರಸ್ತಾಪಿಸಿದರು. ಗ್ರಾಮಸಭೆಗೆ ನೋಡಲ್ ಅಧಿಕಾರಿಯಾಗಿ ಕಾನ್ಬೈಲ್ ಸರಕಾರಿ ಮುಖ್ಯೋಪಾಧ್ಯಾಯ ಮೂರ್ತಿ ಪಾಲ್ಗೊಂಡಿದ್ದರು.
ಸುಂಟಿಕೊಪ್ಪ ಪೊಲೀಸ್ ಠಾಣಾಧಿಕಾರಿ ಮೋಹನ್ರಾಜ್ ಮಾತನಾಡಿ ಗ್ರಾಮದಲ್ಲಿ ಅವಘಡಗಳು ಸಂಭವಿಸುತ್ತಿದ್ದು ಗ್ರಾಮ ಪಂಚಾಯಿತಿ ಈ ಬಗ್ಗೆ ಗಮನಹರಿಸಬೇಕು. ಹಾರಂಗಿ ಹಿನ್ನೀರಿನ ಪ್ರದೇಶಕ್ಕೆ ಪ್ರವಾಸಿಗರಿಗೆ ಮಾಹಿತಿ, ನೀರಿನ ಸಮೀಪಕ್ಕೆ ತೆರಳದಂತೆ ಮಾಹಿತಿಯನ್ನು ನೀಡಿ ಎಚ್ಚರಿಸಬೇಕೆಂದು ಅವರು ಹೇಳಿದರು.
ಸಭೆಯಲ್ಲಿ ಗ್ರಾಮಸ್ಥರಾದ ಶಾಂತಪ್ಪ, ಪಿ.ಎಂ.ಬಿಜು, ರಾಮಯ್ಯ, ಗಣೇಶ್ ಸೇರಿದಂತೆ ಸಭೆಯಲ್ಲಿ ಪ್ರಸ್ತಾಪಿಸಿ ಪ್ರಶ್ನಿಸಿದರು. ಗ್ರಾಮ ಸಭೆಯಲ್ಲಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಬಿ.ಇ.ಸತೀಶ್, ರಮೇಶ್ ಬಿ.ಜಿ. ಕೊಳೆಂಬೆ ಸುಭಾಷ್ ಎ.ಎಂ., ರಾಧಮಣಿ, ಸೀತೆ, ಪ್ರೇಮ ಮತ್ತು ಅರುಣಾಕುಮಾರಿ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಆಸ್ಮ ಇದ್ದರು.