ಮಡಿಕೇರಿ, ನ. ೨೫: ಸಂತ ಮೈಕಲರ ವಿದ್ಯಾಸಂಸ್ಥೆಗಳ ವಾರ್ಷಿಕೋತ್ಸವ ಸಮಾಗಮ “ಟುಗೆದರ್ ವಿ ಶೈನ್” ತಾ. ೨೨ ರಂದು ಶನಿವಾರ ಅರ್ಥಪೂರ್ಣವಾಗಿ ನಗರದ ಗಾಂಧಿ ಮೈದಾನದಲ್ಲಿ ಜರುಗಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡಿ ದ್ದಂತಹ ಮೈಸೂರು ಕ್ರೆöÊಸ್ತ ಧರ್ಮಾಧ್ಯಕ್ಷರು ಮತ್ತು ಎಂಡಿಇಎಸ್ ಅಧ್ಯಕ್ಷ ಡಾಕ್ಟರ್ ಫ್ರಾನ್ಸಿಸ್ ಸೆರವೋ ಅವರು ಮಾತನಾಡಿ, ಮಕ್ಕಳಿಗೆ ಮೊದಲ ಪಾಠಶಾಲೆ ಮನೆ, ಮೊದಲ ಗುರು ತಾಯಿ, ಮೊದಲ ಆಸನ ತಾಯಿಯ ತೊಡೆ ಹಾಗೆ ಮನೆಯಲ್ಲಿ ತಂದೆ ತಾಯಿಯ ನಡವಳಿಕೆಯು ಬೆಳೆಯುವಂತ ಮಕ್ಕಳ ಮೇಲೆ ಅಪಾರವಾದ ಪರಿಣಾಮವನ್ನು ಬೀರುತ್ತದೆ ಎಂದರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಎಂ.ಡಿ.ಇ.ಎಸ್‌ನ ಕಾರ್ಯದರ್ಶಿ ಗುರು ಎಡ್ವರ್ಡ್ ವಿಲಿಯಂ ಸಲ್ಡಾನಾ ರವರು ಮಾತನಾಡಿ, ಮನುಷ್ಯರು ಅಕ್ಷರಸ್ಥನಾಗುತ್ತಿದ್ದಂತೆ ಅವನ ಆಲೋಚನೆಗಳು ಅವಿವೇಚನಗಳ ಕಡೆಗೆ ಸಾಗುತ್ತಿರುವುದು ಒಂದು ವಿಪರ್ಯಾಸವೇ ಸರಿ ಅದರಂತೆ ಹೆಚ್ಚಾಗುತ್ತಿರುವ ಆಸ್ಪತ್ರೆಗಳು, ಕೋರ್ಟ್ಗಳು ಮತ್ತು ಪೊಲೀಸ್ ಠಾಣೆಗಳು ಇದಕ್ಕೆ ಒಂದು ಉದಾಹರಣೆಯಾಗಿದೆ ಎಂದು ತಿಳಿಸಿದರು.

ಖಜಾಂಚಿ ಗುರು ನವೀನ್ ಕುಮಾರ್ ಎ, ಸಂತ ಮೈಕಲರ ವಿದ್ಯಾಸಂಸ್ಥೆಗಳ ಸಂಚಾಲಕರಾದ ಗುರು ಸಂಜಯ್ ಕುಮಾರ್ ಎಫ್. ಅವರು ಅಲ್ಲದೆ ಇತರೆ ವಿದ್ಯಾಸಂಸ್ಥೆಗಳ ಸಂಚಾಲಕರು ಮತ್ತು ಧರ್ಮ ಕೇಂದ್ರದ ಧರ್ಮ ಗುರುಗಳು ಹಾಗೂ ಸಂತ ಮೈಕಲರ ವಿದ್ಯಾಸಂಸ್ಥೆಗಳ ಕಾಲೇಜು ವಿಭಾಗದ ಪ್ರಾಂಶುಪಾಲರಾದ ಪಂಕಜ, ಪ್ರೌಢಶಾಲಾ ವಿಭಾಗದ ಮುಖ್ಯಸ್ಥರಾದ ಜೆಫ್ರಿ ಡಿಸಿಲ್ವಾ , ಪ್ರಾಥಮಿಕ ಆಂಗ್ಲ ಮಾಧ್ಯಮ ಮುಖ್ಯಸ್ಥರಾದ ಸಿಸ್ಟರ್ ಸರಿತಾ ಮರ‍್ತಾ ಮತ್ತು ಕನ್ನಡ ಮಾಧ್ಯಮದ ಮುಖ್ಯಸ್ಥರಾದ ಸಿಸ್ಟರ್ ಮೇರಿ ಸಿಸಿಲಿಯಾ, ನಗರದ ಮೂಡ ಅಧ್ಯಕ್ಷರಾದ ರಾಜೇಶ್ ಯಲ್ಲಪ್ಪ, ನಗರಸಭೆಯ ಸದಸ್ಯರಾದ ಸಬಿತಾ ಎ.ಕೆ ಮತ್ತು ತಾಲೂಕು ಮಟ್ಟದ ಶಿಕ್ಷಣ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.

ಕಾರ್ಯಕ್ರಮದಲ್ಲಿ ಸಂತ ಮೈಕಲರ ವಿದ್ಯಾಸಂಸ್ಥೆಗಳ ವ್ಯವಸ್ಥಾಪಕರಾದ ಗುರು ಸಂಜಯ್ ಕುಮಾರ್ ಎಫ್ ರವರು ಸರ್ವರನ್ನು ಸ್ವಾಗತಿಸಿ, ಗಣ್ಯರನ್ನು ಸನ್ಮಾನಿಸಿ ಗೌರವಿಸಲಾಯಿತು.

ಪ್ರೌಢಶಾಲಾ ಮುಖ್ಯ ಶಿಕ್ಷಕರಾದ ಜೆಫ್ರಿ ಡಿಸಿಲ್ವ ರವರು ವಂದನಾರ್ಪಣೆಯನ್ನು ನೆರವೇರಿಸಿದರು. ಅದರಂತೆಯೇ ವಿದ್ಯಾಸಂಸ್ಥೆಗಳ ವಿದ್ಯಾರ್ಥಿಗಳಿಂದ ನೃತ್ಯ ಪ್ರತಿಭೆಯನ್ನು ಅನಾವರಣಗೊಳಿಸುವ ಮೂಲಕ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಮೆರಗು ನೀಡಲಾಯಿತು.

ಕಾರ್ಯಕ್ರಮವನ್ನು ಕಾಲೇಜು ವಿಭಾಗದ ವಿದ್ಯಾರ್ಥಿ ರಾಬಿನ್ ಮತ್ತು ಸೌಮ್ಯ, ಪ್ರೌಢಶಾಲಾ ವಿಭಾಗದಿಂದ ಅವನಿಕಾ ಮತ್ತು ಲಿಪಿಕ್ಸ ಪ್ರಾಥಮಿಕ ವಿಭಾಗದಿಂದ ಪೂರ್ವಿಕ್ ಮುತ್ತಣ್ಣ ಮತ್ತು ಗಹಾನ್, ಗಯಾನ್ ನಿರೂಪಿಸಿದರು.