ಕುಶಾಲನಗರ, ನ. ೨೫ : ಷಷ್ಠಿ ಅಂಗವಾಗಿ ಕುಶಾಲನಗರ ಕೆಎಚ್ಬಿ ಕಾಲೋನಿ, ಉದ್ಭವ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದಲ್ಲಿ ಮಂಗಳವಾರ ವಿಶೇಷ ಪೂಜಾ ಕಾರ್ಯಕ್ರಮಗಳು ಜರುಗಿದವು. ಬೆಳಗ್ಗೆ ಪಂಚಮಿ ಪೂಜೆ, ಗಣಪತಿ ಹೋಮ, ನವಗ್ರಹ ಪೂಜೆ ನಂತರ ಕುಶಾಲನಗರ ದೇವಾಲಯಗಳ ಒಕ್ಕೂಟದ ಪ್ರತಿನಿಧಿಗಳು ಫಲ ತಾಂಬೂಲಗಳೊAದಿಗೆ ಆಗಮಿಸಿ ಸಾಮೂಹಿಕ ಪೂಜೆ ಸಲ್ಲಿಸಿದರು. ಮಧ್ಯಾಹ್ನ ಕಲಶ ಅಭಿಷೇಕ, ಮಹಾಮಂಗಳಾರತಿ ನಂತರ ತೀರ್ಥ ಪ್ರಸಾದ ವಿನಿಯೋಗ ನಡೆಯಿತು. ಸಂಜೆ ಪಲ್ಲಕ್ಕಿ ಉತ್ಸವ, ಉಯ್ಯಾಲೆ ಉತ್ಸವ ನಡೆಯಿತು. ದೇವಾಲಯ ಸಮಿತಿಯ ಅಧ್ಯಕ್ಷ ಡಿ.ಆರ್. ಚಿಕ್ಕೆಗೌಡ, ಗೌರವಾಧ್ಯಕ್ಷÀ ಎಂ.ಎಸ್. ಮೊಗಣ್ಣೇಗೌಡ, ಎಂ.ಕೆ. ಹನುಮರಾಜ್, ಉಪಾಧ್ಯಕ್ಷÀ ನಂಜುAಡಸ್ವಾಮಿ, ಗಂಗಾಧರ್ ಪ್ರಧಾನ ಕಾರ್ಯದರ್ಶಿ ಹೆಚ್.ಎಂ.ಮಧುಸೂದನ್, ಖಜಾಂಚಿ ಟಿ.ಜೆ. ರಾಜು ಮತ್ತು ನಿರ್ದೇಶಕರು, ದೇವಾಲಯ ಒಕ್ಕೂಟದ ಪ್ರತಿನಿಧಿಗಳು ಇದ್ದರು.